ಸುಳ್ಯ: ಭಜನಾ ಸ್ಪರ್ಧೆ ಎನ್ನುವುದಕ್ಕಿಂತ ದೇವರಿಗೆ ಭಜನೆ ನಡೆದಿದೆ ಎನ್ನುವುದು ಮುಖ್ಯ ಎಂದು ಹರಪ್ರಾಸಾದ್ ತುದಿಯಡ್ಕ ಹೇಳಿದರು.
ಅವರು ಶ್ರೀ ಕೃಷ್ಣ ಭಜನಾ ಮಂದಿರ (ರಿ )ಮೇನಾಲ ಅಜ್ಜಾವರ ವತಿಯಿಂದ ನಡೆದ ಸುಳ್ಯ ತಾಲೂಕು ಮಟ್ಟದ ಭಜನಾ ಸ್ಪರ್ಧೆಯಲ್ಲಿ ಮಾತನಾಡಿದರು. ಪೂರ್ವಹ್ನ ಭಜನೆ ಸ್ಪರ್ಧೆ ಆರಂಭ ವಾಗಿ ಹಲವಾರು ತಂಡಗಳು ಸ್ಪರ್ಧೆಯಲ್ಲಿ ಪಾಲ್ಗೊಂಡವು. ಸಂಜೆ ಭಜನಾ ಮಂಗಲೋತ್ಸವ ನಡೆದು, ಸಮಾರೋಪ ಸಮಾರಂಭವು ಹಾಗೂ ಬಹುಮಾನ ವಿತರಣೆ ನಡೆಯಿತು.
ಪ್ರಥಮ ಬಹುಮಾನವನ್ನು -ಶ್ರೀ ಶಾರದಾಂಬ ಭಜನಾ ಮಂಡಳಿ ಪಂಜ,
ದ್ವಿತೀಯ -ಶ್ರೀ ಪ್ರಸನ್ನಜನೆಯ ಆಜನಾದ್ರಿ ಅಡ್ಕಾರ್,
ತೃತೀಯ -ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯವು ಪಡೆದು ಕೊಂಡಿತು.
ಕಾರ್ಯಕ್ರಮದ್ಲಲಿ ಅಧ್ಯಕ್ಷರು ರಾಜೇಶ್ ಶೆಟ್ಟಿ ಮೇನಾಲ, ಶ್ರೀ ಚೆನ್ನಕೇಶವ ದೇವಸ್ಥಾನ ಆಡಳಿತ ಮೋಕ್ತೆಸರರು ಹರಪ್ರಸಾದ್ ತುದಿಯಡ್ಕ , ಭಜನಾ ಪರಿಷತ್ ಸುಳ್ಯ ಇದರ ಅಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ ಉಪಸ್ಥಿತರಿದ್ದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel