ಸುಳ್ಯ: ಜನಪ್ರತಿನಿಧಿಗಳು ಎಂದರೆ ಪ್ರತಿ ಹೆಜ್ಜೆ ಹೆಜ್ಜೆಗೂ ಹವಾ ನಿಯಂತ್ರಿತ ವಾಹನದಲ್ಲಿಯೇ ಓಡಾಡಬೇಕು ಎಂಬ ಒಂದು ವಾತಾವರಣ ಇದೆ. ಆದರೆ ಜನಪ್ರತಿನಿಧಿಗಳ ಮಧ್ಯೆ ಉರಿ ಬಿಸಿಲಿನಲ್ಲಿಯೂ ತಾಲೂಕು ಪಂಚಾಯತ್ ನಿಂದ ನಗರ ಪಂಚಾಯತ್ ಗೆ ನಡೆದುಕೊಂಡೇ ಬಂದ ಸಚಿವರು ಮತ್ತು ಶಾಸಕರು ಗಮನ ಸೆಳೆದರು.
ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಮತ್ತು ಶಾಸಕ ಎಸ್.ಅಂಗಾರ ಪಾದಯಾತ್ರೆ ನಡೆಸಿ ಸರಳತೆ ಮೆರೆದರು.
ಶನಿವಾರ ಸುಳ್ಯ ಪ್ರವಾಸ ಮಾಡಿದ ಸಚಿವ ಖಾದರ್ ತಾಲೂಕು ಪಂಚಾಯತ್ ನಲ್ಲಿ ಸಭೆ ಮುಗಿಸಿ ಹತ್ತಿರದಲ್ಲೇ ಇರುವ ನ.ಪಂ.ನತ್ತ ಹೆಜ್ಜೆ ಹಾಕಿದರು. ಸಚಿವರ ಜೊತೆ ಶಾಸಕರು ಪಾದಯಾತ್ರೆಗೆ ಸಾಥ್ ನೀಡಿದಾಗ ವಾಹನ ಏರದೇ ಇತರ ಜನಪ್ರತಿನಿಧಿಗಳು ಅಧಿಕಾರಿಗಳೂ ಸಚಿವ, ಶಾಸಕರ ಜೊತೆ ನಡೆದುಕೊಂಡೇ ಬಂದರು.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement