ಬಾಳಿಲದಲ್ಲಿ ಗ್ರಾಮಸಭೆ ನಡೆಯಿತು
ಬೆಳ್ಳಾರೆ: ತೋಟಗಾರಿಕಾ ಇಲಾಖೆಯಲ್ಲಿ ಕೃಷಿಕರಿಗೆ ಲಭ್ಯವಾಗುವ ವಿವಿಧ ಯೋಜನೆ, ಸಹಾಯಗಳ ಬಗ್ಗೆ ತೋಟಗಾರಿಕಾ ಇಲಾಖಾ ಅಧಿಕಾರಿ ಬಾಳಿಲ ಗ್ರಾಮ ಪಂಚಾಯತ್ ಗ್ರಾಮಸಭೆಯಲ್ಲಿ ಮಾಹಿತಿ ನೀಡಿದರು.
ಬಾಳಿಲ ಗ್ರಾಮ ಪಂಚಾಯತ್ 2019-20ನೇ ಸಾಲಿನ ಮೊದಲ ಹಂತದ ಗ್ರಾಮಸಭೆ ಗಿರಿಜನ ಆಶ್ರಮ ಶಾಲಾ ಸಭಾಭವನದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆಯಿತು.
ತೋಟಗಾರಿಕಾ ಇಲಾಖಾಧಿಕಾರಿ ಮಾಹಿತಿ ನೀಡುತ್ತಾ ಬಾಳೆಕೃಷಿಗೆ ಹೆಚ್ಚಿನ ಉತ್ತೇಜನ ನೀಡಲಾಗುವುದು. ಇಲಾಖೆ ವತಿಯಿಂದ ಜೇನುಪೆಟ್ಟಿಗೆಗಳನ್ನು ಮತ್ತು ಅದಕ್ಕೆ 1600 ರೂಪಾಯಿಗಳ ಭತ್ಯೆಯನ್ನು ನೀಡಲಾಗುವುದು. ಗೇರು ಕೃಷಿಗೆ ಹೆಕ್ಟೇರ್ ಒಂದಕ್ಕೆ 2800 ಭತ್ಯೆ ಹಾಗು ಗೇರು ಕೃಷಿಯಲ್ಲಿ ಎರಡುವರೆ ಹೆಕ್ಟೇರ್‍ಗೆ 25ಸಾವಿರ ಮೊದಲ ವರ್ಷಕ್ಕೆ ಅನುದಾನ ನೀಡಲಾಗುತ್ತದೆ. ಶೇ33%ಕ್ಕಿಂತ ಹೆಚ್ಚಿನ ಅಡಕೆ ಮರಗಳು ಮುರಿದ್ದಿದ್ದರೆ ಹೆಕ್ಟೇರ್‍ಗೆ 18 ಸಾವಿರ ಸಹಾಯಧನ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು. ಫಸಲ್‍ಭೀಮಾ ಯೋಜನೆ ಕುರಿತು ಪ್ರಶ್ನಿಸಿದ್ದ ಗ್ರಾಮಸ್ಥರೊಬ್ಬರಿಗೆ ಉತ್ತರಿಸಿದ ತೋಟಗಾರಿಕಾಧಿಕಾರಿ ಹವಾಮಾನಕ್ಕನುಗುಣವಾಗಿ ಯೋಜನೆಯ ಫಲವನ್ನು ವಿತರಿಸಲಾಗುತ್ತದೆ ಎಂದರು.
ಆರೋಗ್ಯ ಇಲಾಖಾಧಿಕಾರಿ ಮಾಹಿತಿ ನೀಡುತ್ತಾ ಸಾಂಕ್ರಾಮಿಕ ರೋಗಗಳ ಕುರಿತು ಎಚ್ಚರಿಸಿದರು. ಗ್ರಾಮೀಣ ಭಾಗದಲ್ಲಿ ಹೆರಿಗೆಯಾದವರಿಗೆ ಸೌಲಭ್ಯ ಹಾಗು 6000 ಸಾವಿರ ಮಾತೃ ಮಾಸಾಶನದ ಕುರಿತು ಮಾಹಿತಿ ನೀಡಿದರು.
ವೇದಿಕೆಯಲ್ಲಿ ನೊಡೆಲ್ ಅಧಿಕಾರಿ ವೀಣಾ ಎಂ.ಟಿ, ಕಂದಾಯ ಇಲಾಖಾಧಿಕಾರಿ, ಪಶು ಸಂಗೋಪನಾಧಿಕಾರಿ, ಮೆಸ್ಕಾಂ ಇಲಾಖಾಧಿಕಾರಿ, ಸುಳ್ಯ ತಾಲೂಕು ಪಂಚಾಯತ್ ಬಾಳಿಲ ಕ್ಷೇತ್ರದ ಸದಸ್ಯೆ ಜಾಹ್ನವಿ ಕಾಂಚೋಡು, ಬಾಳಿಲ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಹೇಮಾವತಿ ಕಾಯಾರ, ಸದಸ್ಯರಾದ ಯು.ರಾಧಾಕೃಷ್ಣ ರಾವ್, ರವೀಂದ್ರ ರೈ, ರಮೇಶ್ ರೈ ಉಪಸ್ಥಿತರಿದ್ದರು.
ವಾರ್ಷಿಕ ವರದಿಯನ್ನು ಸುಂದರ ವಾಚಿಸಿದರು. ಪಂಚಾಯತ್ ಅಭಿವೃದ್ದಿ ಅಧಿಕಾರಿ ಚಂದ್ರಾವತಿ ಕಾರ್ಯಕ್ರಮ ನಿರೂಪಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಸುಳ್ಯ, ಪುತ್ತೂರು ಕಡಬ ಅರಣ್ಯ ಹಾಗೂ ಅರಣ್ಯದಂಚಿನ…
ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಕೇಂದ್ರದ ಸಮಗ್ರ ಕೀಟ ನಿರ್ವಹಣಾ ಕೇಂದ್ರಗಳು…
ಮನಸ್ಸಿದ್ದರೆ ಮಾರ್ಗ ಎಂಬ ಗಾದೆ ಮಾತು ನಾವು ಕೇಳಿದ್ದೇವೆ. ಆದರೆ, ಕೆಲವು ಜನರ…
ಕೆಲವು ಕಡೆಗಳಲ್ಲಿ ರೈತರು ತಮ್ಮ ಜಮೀನಿಗೆ ಹೋಗಲು ಸರಿಯಾದ ದಾರಿಯಿಲ್ಲದೆ ಪರದಾಟ ನಡೆಸಬೇಕಾಗುತ್ತದೆ.…
ಕೃಷಿ ಇಲಾಖೆಯು ರೈತರಿಗೆಂದು ವಿವಿಧ ಸಬ್ಸಿಡಿ ಯೋಜನೆಗಳನ್ನು ಜಾರಿಗೆ ತಂದಿದೆ. ಇದಕ್ಕೆ ಯಾವ…
ಮಹಿಳೆಯರ ಏಳಿಗೆಗೆ ಸರ್ಕಾರವೂ ಹಲವಾರು ರೀತಿಯ ಯೋಜನೆಯನ್ನು ಜಾರಿಗೊಳಿಸಿದೆ. ಇದೀಗ ಗ್ರಾಮೀಣ ಮಹಿಳೆಯರಿಗೆ…