ಸುಳ್ಯ: ತ್ಯಾಜ್ಯ ಎಸೆತದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯದಲ್ಲಿ ಮೊದಲ ಬಾರಿಗೆ 1000 ರೂಪಾಯಿ ದಂಡ ವಿಧಿಸಲಾಗಿದೆ. ಸಿಸಿ ಕ್ಯಾಮಾರದ ಮೂಲಕ ಸೆರೆಯಾದ ವ್ಯಕ್ತಿ ಈಗ ತ್ಯಾಜ್ಯ ಎಸೆತಕ್ಕೆ ದಂಡ ತೆರಬೇಕಾಗಿದೆ. ಎಚ್ಚರ, ಇನ್ನು ಸುಳ್ಯದಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ, ಕಸ ಎಸೆದರೆ ದಂಡ ತೆರಬೇಕಾಗುತ್ತದೆ. ನಿಗದಿತ ಸ್ಥಳದಲ್ಲೇ ತ್ಯಾಜ್ಯ ಎಸೆಯಿರಿ.
ಅಂಬಟೆಡ್ಕ ಪ್ರದೇಶದಲ್ಲಿ ತ್ಯಾಜ್ಯ ಎಸೆಯುವ ಪ್ರಕರಣ ಹೆಚ್ಚಾಗಿತ್ತು. ಸ್ವಚ್ಛ ಮಾಡಿದರೂ ಮತ್ತೆ ಮತ್ತೆ ತ್ಯಾಜ್ಯ ಎಸೆಯುತ್ತಿದ್ದರು. ಇತ್ತೀಚೆಗಷ್ಟೇ ನಗರ ಪಂಚಾಯತ್ ಸದಸ್ಯರು ಮುಜಿವರ್ಜಿ ವಹಿಸಿ ಸ್ವಚ್ಛತೆ ಮಾಡಿದ್ದರು. ಅದಾದ ಮರುದಿನವೇ ಅದೇ ಪ್ರದೇಶದಲ್ಲಿ ತ್ಯಾಜ್ಯ ಎಸೆದಿದ್ದರು. ಹೀಗಾಗಿ ಸಿಸಿ ಕ್ಯಾಮಾರ ಅಳವಡಿಕೆ ಮಾಡಿ ತ್ಯಾಜ್ಯ ಎಸೆಯುವವರನ್ನು ಪತ್ತೆ ಮಾಡಲು ನಗರ ಪಂಚಾಯತ್ ಆಡಳಿತ ಹಾಗೂ ಸದಸ್ಯರು ನಿರ್ಧಾರ ಮಾಡಿದ್ದರು.
ಇದೀಗ ಕಾಲೇಜು ವಿದ್ಯಾರ್ಥಿಯೋರ್ವ ತ್ಯಾಜ್ಯ ಎಸೆಯುತ್ತಿರುವುದು ಸಿಸಿ ಕ್ಯಾಮಾರದಲ್ಲಿ ಪತ್ತೆಯಾಗಿದೆ. ಬಳಿಕ ವಿದ್ಯಾರ್ಥಿ ವಾಸ್ತವ್ಯ ಇರುವ ಮನೆಯವರಿಗೆ ತಿಳಿಸಿ ತ್ಯಾಜ್ಯ ಎಸೆತಕ್ಕೆ 1000 ದಂಡ ತೆರಬೇಕಾಗಿ ಬಂದಿದೆ. ಸುಳ್ಯದಲ್ಲಿ ತ್ಯಾಜ್ಯ ಕಸ ಎಸೆತಕ್ಕೆ ಇದು ಮೊದಲ ದಂಡವಾಗಿದೆ.
ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆಯ ಚಟುವಟಿಕೆ ಮತ್ತೆ ಆರಂಭವಾಗುತ್ತಿದೆ. ಕರಾವಳಿ ಜಿಲ್ಲೆಗಳಲ್ಲಿ…
ಕರ್ನಾಟಕದಲ್ಲಿ ಗುಡುಗು ಸಹಿತ ಮಳೆ ಮುಂದುವರಿಯಲಿದೆ, ಕರಾವಳಿ ಮತ್ತು ಮಲೆನಾಡಿನಲ್ಲಿ ಏಪ್ರಿಲ್ 4ರವರೆಗೆ…
ಜಿಲ್ಲೆಯಲ್ಲಿ ನಾಯಿ ಕಡಿತ ಪ್ರಕರಣಗಳು ಗಣನೀಯವಾಗಿ ಹೆಚ್ಚಳವಾಗಿದೆ. ಈ ಹಿನ್ನೆಲೆ ಪ್ರತಿಯೊಂದು ತಾಲೂಕಿನಲ್ಲಿ…
ಶಾಲಾ–ಕಾಲೇಜುಗಳ ಬಳಿ ಧೂಮಪಾನ ವಸ್ತು ಮಾರಾಟ ಮಾಡಿದರೆ ಲೈಸನ್ಸ್ ರದ್ದು ಮಾಡಲು ಪೊಲೀಸ್…
ಮಾರ್ಚ್ 28ರಿಂದ ಕರ್ನಾಟಕದಲ್ಲಿ ಮಳೆಯ ಪ್ರಮಾಣ ಹೆಚ್ಚಾಗುವ ಮುನ್ಸೂಚನೆ ನೀಡಲಾಗಿದೆ. ಕರಾವಳಿ ಮತ್ತು…
ದಕ್ಷಿಣ ಕನ್ನಡದಲ್ಲಿ ಉಷ್ಣಾಂಶ ಏರಿಕೆಯಾಗುತ್ತಿರುವ ಹಿನ್ನೆಲೆ ಮುಂಜಾಗೃತಾ ಕ್ರಮ ಅಗತ್ಯವಾಗಿದೆ. ನೀರು ಹೆಚ್ಚು…