ದಕ್ಷಿಣ ಕನ್ನಡದಲ್ಲಿ ಕಲ್ಲಾಜೆಯಲ್ಲಿ ಏಕೆ ಅತೀ ಹೆಚ್ಚು ಮಳೆ ಬೀಳುತ್ತದೆ….?

July 1, 2019
8:00 AM

ಸುಳ್ಯ: ಅತೀ ಹೆಚ್ಚು ಮಳೆ ಬೀಳುವ ಪ್ರದೇಶ ಚಿರಾಪುಂಜಿ. ಆದರೆ ದಕ್ಷಿಣ ಕನ್ನಡದ ಮಟ್ಟಿಗೆ  ನಮ್ಮ ಮತ್ತೊಂದು ಚಿರಾಪುಂಜಿ ಸುಳ್ಯ ತಾಲೂಕಿನ ನಾಲ್ಕೂರು ಗ್ರಾಮದ  ಕಲ್ಲಾಜೆ…!. ಅಚ್ಚರಿಯಾದರೂ ಮಳೆ ಲೆಕ್ಕದ ಪ್ರಕಾರ ಇದು ಸತ್ಯ. ಕಲ್ಲಾಜೆಯ ಸಿಜೊ ಅಬ್ರಹಾಂ ಅವರ ಮಳೆ ದಾಖಲೆ ಪ್ರಕಾರ ಕಲ್ಲಾಜೆಯಲ್ಲಿ  ಅತೀ ಹೆಚ್ಚು ಮಳೆ ಬೀಳುತ್ತದೆ.

Advertisement

ಕಲ್ಲಾಜೆಯ ಸಿಜೊ ಅಬ್ರಹಾಂ ಅವರ ಮಳೆ ಲೆಕ್ಕದ ಪ್ರಕಾರ ಇಲ್ಲಿ  2018 ಜೂ.1 – ನ.26 ವರೆಗೆ 5837 ಮಿಮೀ ಮಳೆಯಾದರೆ ಜೂನ್ ತಿಂಗಳಲ್ಲಿ 1165 ಮಿಮೀ ಮಳೆಯಾಗಿದೆ ಜುಲೈ ತಿಂಗಳಲ್ಲಿ 1797 ಮಿಮೀ ಮಳೆಯಾಗಿದ್ದರೆ ಆಗಸ್ಟ್ ತಿಂಗಳಲ್ಲಿ  2096 ಮಿಮೀ ಮಳೆಯಾಗಿದೆ. ಅದೇ ತಿಂಗಳು ಒಂದು ದಿನ 220 ಮಿಮೀ ಮಳೆಯಾದ ದಾಖಲೆ ಇದೆ. ಈ ಬಾರಿ ಎಪ್ರಿಲ್ ತಿಂಗಳಲ್ಲಿ  209 ಮಿಮೀ ಮಳೆಯಾದರೆ ಮೇ ತಿಂಗಳಲ್ಲಿ  37 ಮಿಮೀ ಮಳೆಯಾಗಿದೆ. ಜೂನ್ ತಿಂಗಳಲ್ಲಿ  557 ಮಿಮೀ ಮಳೆಯಾಗಿದೆ. ಈ ಬಾರಿ ಫೆ.7 ರಂದು ಮೊದಲ ಮಳೆ ಬಂದಿದ್ದು ಅಂದು 21 ಮಿಮೀ ಮಳೆಯಾಗಿದೆ.

ಇದಿಷ್ಟು ಸ್ಥೂಲವಾದ ಮಾಹಿತಿಯಾದರೆ ಎಲ್ಲಾ ದಾಖಲೆಗಳನ್ನು ನೋಡಿದರೂ ಕಲ್ಲಾಜೆಯಲ್ಲಿ  ಹೆಚ್ಚು ಮಳೆ ಬೀಳುತ್ತದೆ. ಸುಳ್ಯ ತಾಲೂಕಿನಲ್ಲಿ ಇಲಾಖೆಗಳಿಂದ ಮಳೆ ಮಾಪನ ಮಾಡಲಾಗುತ್ತಿದ್ದರೂ ಬಾಳಿದ ಪಿ ಜಿ ಎಸ್ ಎನ್ ಪ್ರಸಾದ್ , ಕೊಲ್ಲಮೊಗ್ರದ ಕೇಶವ ಕಟ್ಟ, ಗುತ್ತಿಗಾರಿನ ಉಣ್ಣಿಕೃಷ್ಣನ್  ಹಾಗೂ ಕಲ್ಲಾಜೆಯ ಸಿಜೋ ಅಬ್ರಹಾಂ ಮಳೆ ದಾಖಲೆ ಇರಿಸುತ್ತಾರೆ. ಅದರ ಜೊತೆಗೆ ಬೆಳ್ತಂಗಡಿ ತಾಲೂಕಿನ ಅಡೆಂಜದ ಕಿಶನ್ , ವಿಟ್ಲ ಬಳಿಕ ವೆಂಕಟಗಿರಿ  ಹೀಗೇ ಹಲವು ಮಂದಿ ಮಳೆ ದಾಖಲೆ ಇರಿಸುತ್ತಾರೆ. ಇದೆಲ್ಲವನ್ನೂ ಗಮನಿಸಿದರೂ ಕಲ್ಲಾಜೆಯಲ್ಲಿ ಅತೀ ಹೆಚ್ಚು ಮಳೆಯಾಗುತ್ತದೆ. ಜೂ.30 ರಂದು ಕೊಲ್ಲಮೊಗ್ರದಲ್ಲಿ  14 ಮಿಮೀ ಮಳೆಯಾದರೆ ಕಲ್ಲಾಜೆಯಲ್ಲಿ  26 ಮಿಮೀ ಮಳೆಯಾಗಿತ್ತು  ಗುತ್ತಿಗಾರಿನಲ್ಲಿ  19 ಮಿಮೀ ಮಳೆಯಾದರೆ ಅಡೆಂಜದಲ್ಲಿ 09 ಮಿಮೀ ಮಳೆಯಾಗಿತ್ತು. ಬಾಳಿಲದಲ್ಲಿ  04 ಮಿಮೀ ಮಳೆಯಾಗಿತ್ತು.

 

 

 

ಕಲ್ಲಾಜೆಯಲ್ಲಿ  ಏಕೆ ಮಳೆ ಹೆಚ್ಚು ಎಂಬುದರ ಬಗ್ಗೆ ನಿಖರವಾದ ದಾಖಲೆ ಇಲ್ಲ. ಆದರೆ ಇಲ್ಲಿನ ಹಿರಿಯರ ಪ್ರಕಾರ ಅಂದಿನಿಂದಲೇ ಮಳೆ ಪ್ರತೀ ವರ್ಷ ಹೆಚ್ಚು ಅಡಿಕೆಗೆ ಕೊಳೆರೋಗದ ಬಾರದ ವರ್ಷವೇ ಇಲ್ಲ ಎನ್ನುತ್ತಾರೆ. ಈಚೆಗೆ 2 ವರ್ಷದಿಂದ ಮಳೆ ಎಷ್ಟು ಬೀಳುತ್ತದೆ ಎಂದು ಲೆಕ್ಕ  ಇಡುತ್ತಾರೆ, ಹೀಗಾಗಿ ಹೆಚ್ಚು ಮಳೆ ಎಂಬ ಮಾಹಿತಿ ಸಿಗುತ್ತದೆ.  ಕಾಡು ಹೆಚ್ಚಾಗಿರುವುದು, ದಟ್ಟವಾದ ಕಾಡು ಇರುವುದೇ ಮಳೆ ಹೆಚ್ಚು ಬರುವುದಕ್ಕೆ ಕಾರಣ ಎಂದು ನೋಡಿದ ಎಲ್ಲರೂ ಹೇಳುತ್ತಾರೆ. ಕಲ್ಲಾಜೆಯ ಸುತ್ತಲೂ ದಟ್ಟವಾದ ಅರಣ್ಯ ಇದೆ ಮುಂದೆ ಕುಮಾರಪರ್ವತದ ಸಾಲುಗಳು ಕಾಣುತ್ತದೆ. ಇದೆಲ್ಲದರ ಪರಿಣಾಮವಾಗಿ ಹೆಚ್ಚು ಮಳೆ ಇರಬಹುದು  ಎಂಬುದು ಸಾಮಾನ್ಯ ಅಭಿಪ್ರಾಯ.

ಇಲ್ಲಿ ಅತೀ ಹೆಚ್ಚು ಎಂದರೆ 37 ಡಿಗ್ರಿಯವರೆಗೆ ಬೇಸಗೆಯಲ್ಲಿ ಉಷ್ಣತೆ ಹೋಗಿದ್ದರೆ 12.5 ಡಿಗ್ರಿಯವರೆಗೆ ಕನಿಷ್ಠ ತಾಪಮಾನ ಕಂಡಿದೆ ಎಂದು ಸಿಜೋ ಹೇಳುತ್ತಾರೆ.  ಕಲ್ಲಾಜೆಯ ಎ ವಿ ಅಬ್ರಹಾಂ ಅವರ ಪುತ್ರ ಸಿಜೋ ಅಬ್ರಹಾಂ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು ಈಗ ಕಲ್ಲಾಜೆಯಲ್ಲಿ ಕೃಷಿಯಲ್ಲಿ  ತೊಡಗಿಕೊಂಡಿದ್ದಾರೆ. ಅಡಿಕೆ, ರಬ್ಬರ್ ಸಹಿತ ಇತರ ಉಪಕೃಷಿ ಮಾಡುತ್ತಾರೆ.

ಮಳೆ ಏಕೆ ಹೆಚ್ಚು ಅಂತ ಸರಿಯಾಗಿ ಗೊತ್ತಿಲ್ಲ. ಆದರೆ ಇಲ್ಲಿಗೆ ಬಂದ ಎಲ್ಲರಿಗೂ ಹಾಗೂ ಆಸುಪಾಸಿನ ಎಲ್ಲರಿಗೂ ಅನುಭವಕ್ಕೆ ಬಂದಿದೆ. ಬೇಸಗೆಯಲ್ಲಿ  ಅಡಿಕೆ ಒಮ್ಮೆಯಾದರೆ ಇಲ್ಲಿ ಒದ್ದೆಯಾಗುತ್ತದೆ. ದಿಢೀರ್ ಅಂತ ಮಳೆಯಾಗುತ್ತದೆ. ಇಷ್ಟು ವರ್ಷದಲ್ಲಿ  ಈ ಬಾರಿ ಮೊದಲ ಬಾರಿಗೆ ಸಮೀಪದ ಕಲ್ಲಾಜೆ ಹೊಳೆಯಲ್ಲಿ  ನೀರು ಕಡಿಮೆಯಾದ್ದು ಬಿಟ್ಟರೆ ಇದುವರೆಗೆ ನೀರು ಬತ್ತಿದ ಉದಾಹರಣೆ ಇಲ್ಲ ಎನ್ನುತ್ತಾರೆ ಸಿಜೋ.

 

 

 

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹರಿಯಾಣ | 800 ಮೆ.ವ್ಯಾ.ವಿದ್ಯುತ್ ಉತ್ಪಾದನಾ ಘಟಕಕ್ಕೆ ಪ್ರಧಾನಿ ಮೋದಿ ಚಾಲನೆ
April 14, 2025
7:40 PM
by: The Rural Mirror ಸುದ್ದಿಜಾಲ
ಚಾಮರಾಜನಗರ ಜಿಲ್ಲೆ ಸಿದ್ದಾಪುರ ಜಮೀನು ವಿವಾದ | ರೈತರು ಆತಂಕಪಡುವ ಅಗತ್ಯವಿಲ್ಲ
April 14, 2025
7:28 PM
by: The Rural Mirror ಸುದ್ದಿಜಾಲ
ಜೂ.30 ರಿಂದ ಮಂಡ್ಯ ಮೈಶುಗರ್ ಕಾರ್ಖಾನೆಯಲ್ಲಿ  ಕಬ್ಬು ಅರೆಯುವ ಪ್ರಕ್ರಿಯೆ ಆರಂಭ
April 14, 2025
6:20 AM
by: The Rural Mirror ಸುದ್ದಿಜಾಲ
ಸಹಕಾರ ಕ್ಷೇತ್ರದಲ್ಲಿ ಬಹುದೊಡ್ಡ ಕ್ರಾಂತಿ | ಸಚಿವ ಅಮಿತ್‌ ಶಾ ಹೇಳಿಕೆ
April 14, 2025
6:16 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group