ಸುಳ್ಯ: ಅತೀ ಹೆಚ್ಚು ಮಳೆ ಬೀಳುವ ಪ್ರದೇಶ ಚಿರಾಪುಂಜಿ. ಆದರೆ ದಕ್ಷಿಣ ಕನ್ನಡದ ಮಟ್ಟಿಗೆ ನಮ್ಮ ಮತ್ತೊಂದು ಚಿರಾಪುಂಜಿ ಸುಳ್ಯ ತಾಲೂಕಿನ ನಾಲ್ಕೂರು ಗ್ರಾಮದ ಕಲ್ಲಾಜೆ…!. ಅಚ್ಚರಿಯಾದರೂ ಮಳೆ ಲೆಕ್ಕದ ಪ್ರಕಾರ ಇದು ಸತ್ಯ. ಕಲ್ಲಾಜೆಯ ಸಿಜೊ ಅಬ್ರಹಾಂ ಅವರ ಮಳೆ ದಾಖಲೆ ಪ್ರಕಾರ ಕಲ್ಲಾಜೆಯಲ್ಲಿ ಅತೀ ಹೆಚ್ಚು ಮಳೆ ಬೀಳುತ್ತದೆ.
ಇದಿಷ್ಟು ಸ್ಥೂಲವಾದ ಮಾಹಿತಿಯಾದರೆ ಎಲ್ಲಾ ದಾಖಲೆಗಳನ್ನು ನೋಡಿದರೂ ಕಲ್ಲಾಜೆಯಲ್ಲಿ ಹೆಚ್ಚು ಮಳೆ ಬೀಳುತ್ತದೆ. ಸುಳ್ಯ ತಾಲೂಕಿನಲ್ಲಿ ಇಲಾಖೆಗಳಿಂದ ಮಳೆ ಮಾಪನ ಮಾಡಲಾಗುತ್ತಿದ್ದರೂ ಬಾಳಿದ ಪಿ ಜಿ ಎಸ್ ಎನ್ ಪ್ರಸಾದ್ , ಕೊಲ್ಲಮೊಗ್ರದ ಕೇಶವ ಕಟ್ಟ, ಗುತ್ತಿಗಾರಿನ ಉಣ್ಣಿಕೃಷ್ಣನ್ ಹಾಗೂ ಕಲ್ಲಾಜೆಯ ಸಿಜೋ ಅಬ್ರಹಾಂ ಮಳೆ ದಾಖಲೆ ಇರಿಸುತ್ತಾರೆ. ಅದರ ಜೊತೆಗೆ ಬೆಳ್ತಂಗಡಿ ತಾಲೂಕಿನ ಅಡೆಂಜದ ಕಿಶನ್ , ವಿಟ್ಲ ಬಳಿಕ ವೆಂಕಟಗಿರಿ ಹೀಗೇ ಹಲವು ಮಂದಿ ಮಳೆ ದಾಖಲೆ ಇರಿಸುತ್ತಾರೆ. ಇದೆಲ್ಲವನ್ನೂ ಗಮನಿಸಿದರೂ ಕಲ್ಲಾಜೆಯಲ್ಲಿ ಅತೀ ಹೆಚ್ಚು ಮಳೆಯಾಗುತ್ತದೆ. ಜೂ.30 ರಂದು ಕೊಲ್ಲಮೊಗ್ರದಲ್ಲಿ 14 ಮಿಮೀ ಮಳೆಯಾದರೆ ಕಲ್ಲಾಜೆಯಲ್ಲಿ 26 ಮಿಮೀ ಮಳೆಯಾಗಿತ್ತು ಗುತ್ತಿಗಾರಿನಲ್ಲಿ 19 ಮಿಮೀ ಮಳೆಯಾದರೆ ಅಡೆಂಜದಲ್ಲಿ 09 ಮಿಮೀ ಮಳೆಯಾಗಿತ್ತು. ಬಾಳಿಲದಲ್ಲಿ 04 ಮಿಮೀ ಮಳೆಯಾಗಿತ್ತು.
ಕಲ್ಲಾಜೆಯಲ್ಲಿ ಏಕೆ ಮಳೆ ಹೆಚ್ಚು ಎಂಬುದರ ಬಗ್ಗೆ ನಿಖರವಾದ ದಾಖಲೆ ಇಲ್ಲ. ಆದರೆ ಇಲ್ಲಿನ ಹಿರಿಯರ ಪ್ರಕಾರ ಅಂದಿನಿಂದಲೇ ಮಳೆ ಪ್ರತೀ ವರ್ಷ ಹೆಚ್ಚು ಅಡಿಕೆಗೆ ಕೊಳೆರೋಗದ ಬಾರದ ವರ್ಷವೇ ಇಲ್ಲ ಎನ್ನುತ್ತಾರೆ. ಈಚೆಗೆ 2 ವರ್ಷದಿಂದ ಮಳೆ ಎಷ್ಟು ಬೀಳುತ್ತದೆ ಎಂದು ಲೆಕ್ಕ ಇಡುತ್ತಾರೆ, ಹೀಗಾಗಿ ಹೆಚ್ಚು ಮಳೆ ಎಂಬ ಮಾಹಿತಿ ಸಿಗುತ್ತದೆ. ಕಾಡು ಹೆಚ್ಚಾಗಿರುವುದು, ದಟ್ಟವಾದ ಕಾಡು ಇರುವುದೇ ಮಳೆ ಹೆಚ್ಚು ಬರುವುದಕ್ಕೆ ಕಾರಣ ಎಂದು ನೋಡಿದ ಎಲ್ಲರೂ ಹೇಳುತ್ತಾರೆ. ಕಲ್ಲಾಜೆಯ ಸುತ್ತಲೂ ದಟ್ಟವಾದ ಅರಣ್ಯ ಇದೆ ಮುಂದೆ ಕುಮಾರಪರ್ವತದ ಸಾಲುಗಳು ಕಾಣುತ್ತದೆ. ಇದೆಲ್ಲದರ ಪರಿಣಾಮವಾಗಿ ಹೆಚ್ಚು ಮಳೆ ಇರಬಹುದು ಎಂಬುದು ಸಾಮಾನ್ಯ ಅಭಿಪ್ರಾಯ.
ಇಲ್ಲಿ ಅತೀ ಹೆಚ್ಚು ಎಂದರೆ 37 ಡಿಗ್ರಿಯವರೆಗೆ ಬೇಸಗೆಯಲ್ಲಿ ಉಷ್ಣತೆ ಹೋಗಿದ್ದರೆ 12.5 ಡಿಗ್ರಿಯವರೆಗೆ ಕನಿಷ್ಠ ತಾಪಮಾನ ಕಂಡಿದೆ ಎಂದು ಸಿಜೋ ಹೇಳುತ್ತಾರೆ. ಕಲ್ಲಾಜೆಯ ಎ ವಿ ಅಬ್ರಹಾಂ ಅವರ ಪುತ್ರ ಸಿಜೋ ಅಬ್ರಹಾಂ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು ಈಗ ಕಲ್ಲಾಜೆಯಲ್ಲಿ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಅಡಿಕೆ, ರಬ್ಬರ್ ಸಹಿತ ಇತರ ಉಪಕೃಷಿ ಮಾಡುತ್ತಾರೆ.
ಗ್ರಾಮೀಣ ಮಟ್ಟದ ಆರ್ಥಿಕ ಸಹಕಾರ ಸಂಘಗಳ ಪ್ರಮುಖ ಚಟುವಟಿಕೆ ಎಂದರೆ ಸದಸ್ಯರಿಂದ ಠೇವಣಾತಿ…
ಶೀಘ್ರದಲ್ಲೇ ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತಿಗಳಿಗೆ ಚುನಾವಣೆ ನಡೆಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ…
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ರೈತರೊಬ್ಬರು ಶೂನ್ಯ ಬಂಡವಾಳದಲ್ಲಿ ಅತ್ಯುತ್ತಮ ಇಳುವರಿ ತೆಗೆಯುವ…
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮ ಪಂಚಾಯತ್ ಆತ್ಮನಿರ್ಭರ ಯೋಜನೆಯಡಿಯಲ್ಲಿ…
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕಾವೇರಿ ನದಿ ತೀರದಲ್ಲಿ ಅಸ್ತಿ ವಿಸರ್ಜನೆ ಮಾಡಿ ನದಿ…