ಸಂಪಾಜೆ: ಮಡಿಕೇರಿ ವಿಭಾಗದ ಸಂಪಾಜೆ ವಲಯದ ದಬ್ಬಡ್ಕ ಉಪವಲಯ ಇಲ್ಲಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಮಕ್ಕಳಿಗೆ ಪರಿಸರದ ಮೇಲೆ ಹೆಚ್ಚಿನ ಆಸಕ್ತಿಯನ್ನು ಬೆಳೆಸುವ ಸಲುವಾಗಿ ಚಿತ್ರಕಲೆ, ಪ್ರಬಂಧ, ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು.
Advertisement
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಉಪವಲಯ ಅರಣ್ಯಾಧಿಕಾರಿಗಳು ಪರಿಸರ ರಕ್ಷಣೆ ನಮ್ಮೆಲ್ಲರ ಕರ್ತವ್ಯ ಹೆಚ್ಚು ಹೆಚ್ಚು ಗಿಡ ನೆಡುವುದರೊಂದಿಗೆ ಪರಿಸರವನ್ನು ಬೆಳೆಸಿ ಸಂರಕ್ಷಿಸಬೇಕೆಂದು ಕರೆನೀಡಿದರು.
Advertisement
ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ಭವಾನಿಶಂಕರ ಮಾತನಾಡಿ ಪರಿಸರ ಬಗ್ಗೆ ಮಕ್ಕಳಿಗೆ ಪೋಷಕರು ಹೆಚ್ಚಿನ ರೀತಿಯಲ್ಲಿ ಪೋತ್ಸಾಹ ನೀಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಉಪವಲಯ ಅರಣ್ಯಾಧಿಕಾರಿ ಪಿ.ಜೆ ರಾಘವ, ಬಸವರಾಜ ಎಸ್.ಹೆಚ್, ಅರಣ್ಯರಕ್ಷಕ ರಾದ ಜೋಯಪ್ಪ ಕೆ.ಪಿ, ಪುನೀತ್, ಎಂ.ಎಸ್ ಸಿಬ್ಬಂದಿಗಳಿಂದ ಕಾರ್ತಿಕ್ ಕೂಸಪ್ಪ, ರವೀಂದ್ರ ವೆಂಕಟರಮಣ ಶಂಕರ ಹಾಗೂ ಊರಿನ ನಾಗರಿಕರು ಪಾಲ್ಗೊಂಡಿದ್ದರು.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement