ದೀಪ ಹಚ್ಚೋಣ ಇಂದು | ಪೃತನಾಜಿತಗ್ಂ ಸಹಮಾನಮುಗ್ರಮಗ್ನಿಗ್ಂ…..| ಕೊರೊನಾ ಎಂಬ ಶತ್ರು ಪೀಡೆ ನಾಶವಾಗಲಿ….|

April 5, 2020
8:00 AM

ಸುಳ್ಯ: ಭಾನುವಾರ ರಾತ್ರಿ 9 ಗಂಟೆಗೆ… 9 ನಿಮಿಷಗಳ ಕಾಲ ದೀಪ ಹಚ್ಚೋಣ. ಹಣತೆಯ ದೀಪವಾದರೆ ಉತ್ತಮ. ದೀಪ ಬೆಳಗುವುದು ಎಂದರೆ ಕೇವಲ ದೀಪವಲ್ಲ ಅದರಲ್ಲೊಂದು ಶಕ್ತಿ ಇದೆ. ಆತ್ಮಬಲ ಸಿಗಲಿದೆ. ಹೀಗೆಂದು ಜ್ಯೋತಿಷ್ಯದ ವಿವರಣೆಯೂ ಇದೆ.

Advertisement

ದೀಪ ಹಚ್ಚುವ ಸಮಯದಲ್ಲಿ  ಸಾಧ್ಯವಿದ್ದವರು ಈ ಸಾಲುಗಳನ್ನು  ಹೇಳಿದರೆ ಇನ್ನೂ ಉತ್ತಮ

ಪೃತನಾಜಿತಗ್ಂ ಸಹಮಾನಮುಗ್ರಮಗ್ನಿಗ್ಂ ಹುವೇಮ

ಪರಮಾತ್ ಸಧಸ್ಥಾತ್ | ಸ ನ: ಪರ್ಷದತಿ ದುರ್ಗಾಣಿ ವಿಶ್ವಾ

ಕ್ಷಾಮದ್ದೇವೋ ಅತಿ ದುರಿತಾತ್ಯಗ್ನಿ: |

ಅಂದರೆ ,ಈ ವಾಕ್ಯವು ಅಗ್ನಿದೇವನ ಸ್ತುತಿ.

ಶತ್ರುಸೇನೆಯನ್ನು ಪೃತನಾ ಎನ್ನುವರು. ಇದನ್ನು ಜಯಿಸುವವನು ಪೃತನಾಜಿತನು. ಸಹಾಮಾನವೆಂದರೆ  ಶತ್ರುಗಳನ್ನು ಹಿಮ್ಮೆಟ್ಟಿಸುವವನು ಎಂದರ್ಥ.  ಈ  ಎರಡೂ ಗುಣಗಳುಳ್ಳ  ಉಗ್ರನೂ ಆದ ಅಗ್ನಿಯು ಉತ್ಕೃಷ್ಟವಾದ ದೇಶದಲ್ಲಿ  ತನ್ನ ಸೇವಕರೊಡಗೂಡಿನ ಇದ್ದುಕೊಂಡಿರುವನಷ್ಟೇ, ಅವನನ್ನು ಆಹ್ವಾನಿಸುವೆವು. ಅವನು ನಮ್ಮ ಅತಿ ಕಷ್ಟಕರವಾದ ಸನ್ನಿವೇಶಗಳನ್ನೆಲ್ಲ ನಾಶಗೊಳಿಸುವವನಾಗಲಿ  ಮತ್ತು ಅಗ್ನಿ ದೇವನು ಅಪರಾಧಿಗಳಾದ ನಮ್ಮನ್ನು ಕ್ಷಮಿಸುವವನಾಗಿ ದುರಿತಗಳನ್ನೆಲ್ಲ ದೂರ ಮಾಡಿ ಶುದ್ದರಾಗುವಂತೆ ಮಾಡಲಿ ಎಂದರ್ಥ.

Advertisement

ಪ್ರಧಾನಿ ನರೇಂದ್ರ ಮೋದಿ ಅವರು  ಹಣತೆ ಹಚ್ಚಲು  ಹೇಳಿದ್ದಾರೆ, ಇದು ಭಾರತದಂತಹ  ಆಧ್ಯಾತ್ಮ ಮೂಲದ ದೇಶದಲ್ಲಿ ಹೆಚ್ಚು ಪ್ರಭಾವ ಬೀರುವ ಸಂಗತಿಯಾಗಿದೆ. ಪ್ರತಿಯೊಬ್ಬರೂ ಇದರ ಆಚರಣೆ ಮಾಡಿದರೆ ದೈವೀಕ ಶಕ್ತಿ, ಆಯುರ್ವೇದ ಶಕ್ತಿ ಹೊಂದಿರುವ  ಈ ದೇಶದಲ್ಲಿ  ಹೆಚ್ಚು ಪರಿಣಾಮ ಬೀರಬಲ್ಲುದು  ಎಂದು  ಸುಳ್ಯದ ವಳಲಂಬೆಯ ವೇದ ವಿದ್ವಾಂಸರಾದ ಕರುವಜೆ ಕೇಶವ ಜೋಯಿಸರು ಹೇಳುತ್ತಾರೆ. ಪೃತನಾಜಿತಗ್ಂ….. ಸಾಲುಗಳು ಕೂಡಾ ದೇಶಕ್ಕೆ ಬಲ ತುಂಬಲಿದೆ ಎನ್ನುತ್ತಾರೆ ಕರುವಜೆ ಕೇಶವ ಜೋಯಿಸರು.

Advertisement

 

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಶೀಘ್ರದಲ್ಲೇ ಜಿಲ್ಲಾ, ತಾಲೂಕು ಪಂಚಾಯತಿಗಳಿಗೆ ಚುನಾವಣೆ
August 15, 2025
6:54 AM
by: The Rural Mirror ಸುದ್ದಿಜಾಲ
ಶೂನ್ಯ ಬಂಡವಾಳದಲ್ಲಿ ಅತ್ಯುತ್ತಮ ಇಳುವರಿ | ರಾಸಾಯನಿಕ ಬಳಸದೆ ಸಹಜ ಕೃಷಿ
August 15, 2025
6:43 AM
by: The Rural Mirror ಸುದ್ದಿಜಾಲ
ಆತ್ಮನಿರ್ಭರ ಯೋಜನೆಯಡಿಯಲ್ಲಿ ಉತ್ತಮ ಕಾರ್ಯ | ದೇಶದ ಗಮನ ಸೆಳೆದಿರುವ ಉಜಿರೆ ಗ್ರಾಮ | ದೆಹಲಿಯ ಸ್ವಾತಂತ್ರೋತ್ಸವ ಕಾರ್ಯಕ್ರಮ ಉಜಿರೆ ಪಂಚಾಯತ್‌ ಆಡಳಿತ |
August 15, 2025
6:34 AM
by: The Rural Mirror ಸುದ್ದಿಜಾಲ
ಕಾವೇರಿ ನದಿ ನೀರು ಮಲಿನ ತಡೆಯಲು ಕ್ರಮ | ಅಸ್ತಿ ವಿಸರ್ಜನೆ ಮಾಡದಂತೆ ಸೂಚನೆ
August 14, 2025
8:55 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group