ಪ್ರಿಯಾ. ಡಿ
ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನ ತೃತೀಯ ಬಿಎಸ್‍ಸಿ ವಿದ್ಯಾರ್ಥಿನಿ ಜೂನಿಯರ್ ಅಂಡರ್ ಆಫೀಸರ್ ಪ್ರಿಯಾ ಡಿ. ಅವರು ಜ.26ರಂದು ದೆಹಲಿಯ ರಾಜಪಥ್‍ನಲ್ಲಿ ನಡೆಯಲಿರುವ ಗಣರಾಜ್ಯೋತ್ಸವದ ಪಥ ಸಂಚಲನಕ್ಕೆ ಆಯ್ಕೆಯಾಗಿದ್ದಾರೆ. ಹಾಗೆಯೇ ಕಾಲೇಜಿನ ದ್ವಿತೀಯ ಬಿಎಸ್‍ಸಿ ವಿದ್ಯಾರ್ಥಿನಿ ಸಾರ್ಜಂಟ್ ಅಂಕಿತ ವಿ.ಕೆ. ಅವರು ಜ.27ರಂದು ದೆಹಲಿಯಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ ನೀಡುವ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಇಬ್ಬರು ಎನ್‍ಸಿಸಿ ಕೆಡೆಟ್‍ಗಳು ಅಕ್ಟೋಬರ್‍ನಿಂದ ಜನವರಿಯವರೆಗೆ ದೇಶದ ವಿವಿಧೆಡೆ ನಡೆದ ಎಂಟು ಪೂರ್ವ ಸಿದ್ಧತಾ ಸುತ್ತನ್ನು ಯಶಸ್ವಿಯಾಗಿ ಪೂರೈಸಿ ಕರ್ನಾಟಕ ಮತ್ತು ಗೋವಾ ಡೈರಕ್ಟರೇಟ್‍ನ ಮಡಿಕೇರಿ ಬೆಟಾಲಿಯನ್‍ನ ಪ್ರತಿನಿಧಿಗಳಾಗಿ ಪ್ರಧಾನಿಯವರು ಭಾಗವಹಿಸುವ ಗಣರಾಜ್ಯೋತ್ಸವದಲ್ಲಿ ಭಾಗವಹಿಸಲಿದ್ದಾರೆ.
ಪ್ರಿಯಾ ಡಿ. ಅವರು ಕನ್ಯಾನ ನಿವಾಸಿ ನಿವೃತ್ತ ಸೇನಾನಿ ರಾಮ ಡಿ. ಮತ್ತು ಹೇಮಾ ಡಿ. ದಂಪತಿ ಪುತ್ರಿಯಾಗಿದ್ದಾರೆ. ಅಂಕಿತ ವಿ.ಕೆ. ಅವರು ಬಲ್ನಾಡು ನಿವಾಸಿ ಪೊಲೀಸ್ ಉದ್ಯೋಗಿ ಕೃಷ್ಣಪ್ಪ ಗೌಡ ಬಿ. ಮತ್ತು ಶಿಕ್ಷಕಿ ಹರಿಣಾಕ್ಷಿ ಎ. ದಂಪತಿ ಪುತ್ರಿಯಾಗಿದ್ದಾರೆ.
ಕಾಲೇಜಿನ ಎನ್‍ಸಿಸಿ ಅಧಿಕಾರಿ ಲೆಫ್ಟಿನೆಂಟ್ ಅತುಲ್ ಶೆಣೈ ಅವರು ಈ ಕೆಡೆಟ್‍ಗಳಿಗೆ ವಿವಿಧ ಹಂತದಲ್ಲಿ ಮಾರ್ಗದರ್ಶನವನ್ನು ನೀಡಿದ್ದಾರೆ ಎಂದು ಕಾಲೇಜಿನ ಪ್ರಕಟನೆ ತಿಳಿಸಿದೆ.
ಹರಿಯಾಣ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಯಮುನಾ ನಗರದಲ್ಲಿ ಇಂದು ಧೀನಬಂಧು ಚೋಟು…
ಚಾಮರಾಜನಗರ ಜಿಲ್ಲೆಯ ಸಿದ್ದಾಪುರ ಗ್ರಾಮದ ಸಾವಿರಾರು ಎಕರೆ ಜಮೀನು ರಾಜವಂಶಸ್ಥರಿಗೆ ಸೇರಿದ್ದು, ಅದನ್ನು…
15.04.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…
ಸ್ಮಾರ್ಟ್ ಕೃಷಿಯು ಕೃಷಿ ವಲಯದಲ್ಲಿ ಕ್ರಾಂತಿಕಾರಕ ಬದಲಾವಣೆ ತರುತ್ತಿದೆ. ತಂತ್ರಜ್ಞಾನ, ಯಾಂತ್ರೀಕರಣ ಮತ್ತು…
ಮಂಡ್ಯ ಮೈಷುಗರ್ ಕಾರ್ಖಾನೆಯಲ್ಲಿ ಪ್ರಸಕ್ತ ಸಾಲಿನ ಕಬ್ಬು ಅರೆಯುವ ಪ್ರಕ್ರಿಯೆ ಜೂನ್ 30ರಿಂದ…
ಇಂದು ಸಹಕಾರ ಕ್ಷೇತ್ರದಲ್ಲಿ ಬಹುದೊಡ್ಡ ಕ್ರಾಂತಿಯಾಗುತ್ತಿದೆ. 8 ಲಕ್ಷಕ್ಕೂ ಅಧಿಕ ಸಹಕಾರಿ ಸಂಘಗಳು…