ನವದೆಹಲಿ: ಸಿಎಎ ದಂಗೆಯಿಂದಾಗಿ ರಾಜಧಾನಿ ನವದೆಹಲಿ ಅಕ್ಷರಶ: ಹೊತ್ತಿ ಉರಿಯುತ್ತಿದೆ. ಸಿಎಎ ಪರ ಹಾಗೂ ವಿರೋಧಿ ಗುಂಪುಗಳು ನಡೆಸಿರುವ ಗಲಭೆಯಿಂದ ದೆಹಲಿ ಜನತೆ ತತ್ತರಿಸಿ ಹೋಗಿದ್ದಾರೆ. ದಂಗೆಕೋರರ ದಾಳಿಗೆ ಇದುವರೆಗೂ 38 ಜೀವಗಳು ಬಲಿಯಾಗಿವೆ.
ಹಗಲಿರುಳು ಶ್ರಮಿಸುತ್ತಿರುವ ದೆಹಲಿ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಬಹುತೇಕ ಯಶಸ್ವಿಯಾಗಿದ್ದಾರೆ. ಈ ಮಧ್ಯೆ ದೆಹಲಿ ಪೊಲೀಸ್ ಕಮಿಷನರ್ ಅಮುಲ್ಯಾ ಪಟ್ನಾಯಕ್ ಫೆ.29ರಂದು ಸೇವೆಯಿಂದ ನಿವೃತ್ತಿ ಹೊಂದಲಿದ್ದು, ಅವರ ಜಾಗಕ್ಕೆ ಕಾನೂನು ಮತ್ತು ಸುವ್ಯವಸ್ಥೆ ಕಮಿಷನರ್ ಎಸ್. ಎನ್. ಶ್ರೀವಾತ್ಸವ್ ಅವರನ್ನು ದೆಹಲಿಯ ನೂತನ ಪೊಲೀಸ್ ಕಮಿಷನರ್ ಆಗಿ ನೇಮಿಸಲಾಗಿದೆ.
ಕೇಂದ್ರ ಗೃಹ ಇಲಾಖೆ, ಎಸ್.ಎನ್. ಶ್ರೀವಾತ್ಸವ್ ನಾಳೆಯಿಂದಲೇ ದೆಹಲಿ ಪೊಲೀಸ್ ಕಮಿಷನರ್ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದೆ.
ಎಸ್ಎನ್ ಶ್ರೀವಾಸ್ತವ್ ಅವರು 1985ರ ಅರುಣಾಚಲ್ ಪ್ರದೇಶ-ಗೋವಾ-ಮಿಜೋರಾಂನ ಬ್ಯಾಚ್ಗಳ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಕೇಂದ್ರಾಡಳಿತ ಪ್ರದೇಶದ ಕೇಡರ್ ಅಧಿಕಾರಿಯಾಗಿಯೂ ಸೇವ ಸಲ್ಲಿಸಿದ್ದಾರೆ. ಸಿಪಿಆರ್ಎಫ್ನಲ್ಲಿ ಕಾರ್ಯ ನಿರ್ವಹಿಸಿರುವ ಅನುಭವವಿರುವ ಇವರು ದೆಹಲಿಯಲ್ಲಿ ಅನೇಕ ಪೊಲೀಸ್ ಯುನಿಟ್ಗಳ ಜತೆ ಕಾರ್ಯಾಚರಣೆ ಮಾಡಿದ್ದಾರೆ