ದೇವತೆಗಳು-ರಾಷ್ಟ್ರ ಪುರುಷರ ಚಿತ್ರಗಳಿರುವ ಪಟಾಕಿ ಮಾರಾಟದ ವಿರುದ್ಧ ಕ್ರಮಕ್ಕೆ ಒತ್ತಾಯ

October 22, 2019
9:48 AM
ಪುತ್ತೂರು: ಮಾರುಕಟ್ಟೆಯಲ್ಲಿ ದೇವತೆಗಳ ಹಾಗೂ ರಾಷ್ಟ್ರ ಪುರುಷರ ಚಿತ್ರಗಳಿರುವ ಪಟಾಕಿ ಮಾರಾಟ ತಡೆಯಬೇಕು ಎಂದು ಒತ್ತಾಯಿಸಿ ಪುತ್ತೂರಿನ ಸಹಾಯಕ  ಕಮೀಷನರ್ ಗಳಿಗೆ, ಪುತ್ತೂರು ನಗರ ಠಾಣಾಧಿಕಾರಿಗಳಿಗೆ, ಹಾಗೂ ಪಟಾಕಿ ಮಳಿಗೆಗಳಾದ ಎ.ವಿ.ಪೈ ಟ್ರೇಡರ್ಸ್, ಶ್ರೀಧರ ಭಟ್ ಬ್ರದರ್ಸ್ ಇವರಿಗೆ ಮನವಿಯನ್ನು ಹಿಂದೂ ಜನಜಾಗೃತಿ ವೇದಿಕೆ ವತಿಯಿಂದ ನೀಡಲಾಯಿತು.

Advertisement
Advertisement
ಮಾರುಕಟ್ಟೆಯಲ್ಲಿ ದೇವತೆಗಳ ಹಾಗೂ ರಾಷ್ಟ್ರ ಪುರುಷರ ಚಿತ್ರಗಳಿರುವ ಪಟಾಕಿ ಮಾರಾಟ‌ ಮಾಡಲಾಗುತ್ತಿದೆ. ಇಂತಹ ಪಟಾಕಿಗಳನ್ನು ಉರಿಸಿದಾಗ ದೇವತೆಗಳ ಹಾಗೂ ರಾಷ್ಟ್ರ ಪುರುಷರ ಚಿತ್ರಗಳು ಛಿದ್ರವಾಗಿ ರಸ್ತೆಯಲ್ಲಿ, ಜನರ ಕಾಲಿನಡಿಯಲ್ಲಿ ಹಾಗೂ ವಾಹನದ ಅಡಿಯಲ್ಲಿ ಅಥವಾ ಕಸದ ಬುಟ್ಟಿಗಳಲ್ಲಿ ಬಿದ್ದಿರುವುದು‌ ಕಾಣಸಿಗುತ್ತವೆ. ಇದರಿಂದ ದೇವತೆಗಳು, ರಾಷ್ಟ್ರ ಪುರುಷರ ಚಿತ್ರಗಳಿಗೆ ಅಗೌರವವಾಗುತ್ತದೆ. ಭಾರತೀಯ ಸಂವಿಧಾನಕ್ಕನುಸಾರ ಧಾರ್ಮಿಕ ಭಾವನೆಗೆ ಘಾಸಿಗೊಳಿಸುವುದು ಒಂದು ಗಂಭೀರ ಅಪರಾಧವಾಗಿದೆ. ಇತ್ತೀಚೆಗೆ ಭಾರತದಲ್ಲಿ ಚೈನಾ ಪಟಾಕಿಗಳು ದೊಡ್ಡ ಪ್ರಮಾಣದಲ್ಲಿ ಮಾರುಕಟ್ಟೆಯಲ್ಲಿ ಬಂದಿದೆ. ಇದರಲ್ಲಿ ವಿಷಕಾರಿ ರಾಸಾಯನಿಕಗಳು ಇದೆ. ಈ ಪಟಾಕಿಗಳು ಆರೋಗ್ಯದ ದೃಷ್ಟಿಯಿಂದ ಅಪಾಯವಾಗಿದೆ. ಇಂತಹ ಪಟಾಕಿಗಳನ್ನು‌ ನಿಷೇಧಿಸಬೇಕು ಎಂದು ಮನವಿಯನ್ನು ನೀಡಲಾಯಿತು.
Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹೊಸರುಚಿ | ಹಲಸಿನ ಕಾಯಿ ಬೋಂಡಾ ರೆಸಿಪಿ – ಇದು ರುಚಿಕರ ಗ್ರಾಮೀಣ ಸ್ನ್ಯಾಕ್
February 15, 2026
6:32 AM
by: ದಿವ್ಯ ಮಹೇಶ್
ಜೀವನಪ್ರೀತಿ
February 15, 2026
6:21 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಗೋವಾದಲ್ಲಿ ಗೇರು ಕೃಷಿಗೆ ಕೋತಿಗಳ ಉಪಟಳ | ಕರಾವಳಿ ಕರ್ನಾಟಕದ ಗೇರು ಕೃಷಿಗೆ ಮುನ್ನೆಚ್ಚರಿಕೆಯ ಸಂದೇಶ ?
February 15, 2026
6:13 AM
by: ಮಿರರ್‌ ಡೆಸ್ಕ್
ಅಂಕದ “ಸುರಕ್ಷತೆ”ಯಾ? ಬದುಕಿನ “ಸುರಕ್ಷತೆ”ಯಾ? – ಗ್ರಾಮೀಣ ಶಿಕ್ಷಣದ ಮಣ್ಣಿನ ಸತ್ವ ಕಳೆದುಕೊಳ್ಳದಿರೋಣ
February 15, 2026
5:54 AM
by: ಮಹೇಶ್ ಪುಚ್ಚಪ್ಪಾಡಿ

You cannot copy content of this page - Copyright -The Rural Mirror