ಪುತ್ತೂರು: ಮಾರುಕಟ್ಟೆಯಲ್ಲಿ ದೇವತೆಗಳ ಹಾಗೂ ರಾಷ್ಟ್ರ ಪುರುಷರ ಚಿತ್ರಗಳಿರುವ ಪಟಾಕಿ ಮಾರಾಟ ತಡೆಯಬೇಕು ಎಂದು ಒತ್ತಾಯಿಸಿ ಪುತ್ತೂರಿನ ಸಹಾಯಕ ಕಮೀಷನರ್ ಗಳಿಗೆ, ಪುತ್ತೂರು ನಗರ ಠಾಣಾಧಿಕಾರಿಗಳಿಗೆ, ಹಾಗೂ ಪಟಾಕಿ ಮಳಿಗೆಗಳಾದ ಎ.ವಿ.ಪೈ ಟ್ರೇಡರ್ಸ್, ಶ್ರೀಧರ ಭಟ್ ಬ್ರದರ್ಸ್ ಇವರಿಗೆ ಮನವಿಯನ್ನು ಹಿಂದೂ ಜನಜಾಗೃತಿ ವೇದಿಕೆ ವತಿಯಿಂದ ನೀಡಲಾಯಿತು.
ಮಾರುಕಟ್ಟೆಯಲ್ಲಿ ದೇವತೆಗಳ ಹಾಗೂ ರಾಷ್ಟ್ರ ಪುರುಷರ ಚಿತ್ರಗಳಿರುವ ಪಟಾಕಿ ಮಾರಾಟ ಮಾಡಲಾಗುತ್ತಿದೆ. ಇಂತಹ ಪಟಾಕಿಗಳನ್ನು ಉರಿಸಿದಾಗ ದೇವತೆಗಳ ಹಾಗೂ ರಾಷ್ಟ್ರ ಪುರುಷರ ಚಿತ್ರಗಳು ಛಿದ್ರವಾಗಿ ರಸ್ತೆಯಲ್ಲಿ, ಜನರ ಕಾಲಿನಡಿಯಲ್ಲಿ ಹಾಗೂ ವಾಹನದ ಅಡಿಯಲ್ಲಿ ಅಥವಾ ಕಸದ ಬುಟ್ಟಿಗಳಲ್ಲಿ ಬಿದ್ದಿರುವುದು ಕಾಣಸಿಗುತ್ತವೆ. ಇದರಿಂದ ದೇವತೆಗಳು, ರಾಷ್ಟ್ರ ಪುರುಷರ ಚಿತ್ರಗಳಿಗೆ ಅಗೌರವವಾಗುತ್ತದೆ. ಭಾರತೀಯ ಸಂವಿಧಾನಕ್ಕನುಸಾರ ಧಾರ್ಮಿಕ ಭಾವನೆಗೆ ಘಾಸಿಗೊಳಿಸುವುದು ಒಂದು ಗಂಭೀರ ಅಪರಾಧವಾಗಿದೆ. ಇತ್ತೀಚೆಗೆ ಭಾರತದಲ್ಲಿ ಚೈನಾ ಪಟಾಕಿಗಳು ದೊಡ್ಡ ಪ್ರಮಾಣದಲ್ಲಿ ಮಾರುಕಟ್ಟೆಯಲ್ಲಿ ಬಂದಿದೆ. ಇದರಲ್ಲಿ ವಿಷಕಾರಿ ರಾಸಾಯನಿಕಗಳು ಇದೆ. ಈ ಪಟಾಕಿಗಳು ಆರೋಗ್ಯದ ದೃಷ್ಟಿಯಿಂದ ಅಪಾಯವಾಗಿದೆ. ಇಂತಹ ಪಟಾಕಿಗಳನ್ನು ನಿಷೇಧಿಸಬೇಕು ಎಂದು ಮನವಿಯನ್ನು ನೀಡಲಾಯಿತು.
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel