ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್ ಹೆಚ್ಚುತ್ತಿದೆ. ಹೀಗಾಗಿ ಲಾಕ್ಡೌನ್ ನಿಯಮ ಪಾಲಿಸಿ ಎಂದು ಕೇಂದ್ರ ಸರಕಾರವು ಎಲ್ಲಾ ರಾಜ್ಯ ಸರಕಾರಗಳಿಗೆ ಮನವಿ ಮಾಡಿದೆ. ಈ ನಡುವೆ ಭಾರತದಲ್ಲಿ ಕೊರೊನಾ ಹಾಟ್ಸ್ಪಾಟ್ಗಳೆಂದು ಗುರುತಿಸಿಕೊಳ್ಳದ ಪ್ರದೇಶಗಳಲ್ಲಿ , ಕೊರೊನಾ ನೆಗೆಟಿವ್ ಪ್ರಕರಣಗಳು ಇರುವ ಕಡೆ ಕೊಂಚ ಬದಲಾವಣೆ ತಂದಿದೆ. ಉಳಿದ ಕಡೆಗಳಲ್ಲಿ ಕಟ್ಟುನಿಟ್ಟಿನ ನಿಯಮ ಜಾರಿ ಇರಲಿ ಎಂದೂ ಹೇಳಿದೆ.
ಬ್ಯಾಂಕೇತರ ಸಂಸ್ಥೆಗಳು, ಸಣ್ಣ ಹಣಕಾಸು ವ್ಯವಹಾರಗಳ ಸಂಸ್ಥೆಗಳು, ಆಯುಷ್, ಕಾರ್ಮಿಕ ವರ್ಗ, ರೈತರು ಮೊದಲಾದವರಿಗೆ ಕಾರ್ಯ ನಿರ್ವಹಿಸಲು ಅನುಕೂಲವಾಗುವಂತೆ ಈ ವಿನಾಯಿತಿ ನೀಡಲಾಗಿದೆ. ಹಣಕಾಸು ವಲಯ, ಆರೋಗ್ಯ ಸೇವೆ, ವಾಣಿಜ್ಯ ಉದ್ಯಮ, ಸ್ವ ಉದ್ಯೋಗ, ಸಂಚಾರ ವ್ಯವಸ್ಥೆ, ಜನ ಸಂಚಾರ, ಕೃಷಿ, ಸಣ್ಣ ಕೈಗಾರಿಕೆ, ಸಾಮಾಜಿಕ ಸೇವೆ ಮೊದಲಾದ ವಲಯಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಈ ಆದೇಶ ಹೊರಡಿಸಿದೆ.ಗ್ರಾಮೀಣ ಪ್ರದೇಶದಲ್ಲಿ ಆಹಾರ ಸಂಸ್ಕರಣೆ, ರಸ್ತೆ ಕೆಲಸಗಳು, ನೀರಾವರಿ, ನಿರ್ಮಾಣ ಕಾರ್ಯ ಮೊದಲಾದವುಗಳಿಗೆ ಅವಕಾಶ ನೀಡಲಾಗಿದೆ.
ಮತ್ತೊಂದೆಡೆ ಕೇರಳ ಸರಕಾರ ಲಾಕ್ಡೌನ್ನು ಸಡಿಲಗೊಳಿಸಿದ್ದು, ಸ್ಥಳೀಯ ನೌಕರರು, ಕ್ಷೌರಿಕರು, ರೆಸ್ಟೋರೆಂಟ್ ಗಳು, ಬುಕ್ ಸ್ಟೋರ್’ಗಳು ಕಾರ್ಯನಿರ್ವಹಿಸಲು ಅನುಮತಿ ನೀಡಿದೆ. ಅಲ್ಲದೆ, ಆರೆಜ್ ಹಾಗೂ ಗ್ರೀನ್ ಝೋನ್ ಗಳಲ್ಲಿ ಬಸ್ ಸಂಚಾರಗಳನ್ನು ಆರಂಭಿಸಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…