ದೇಶದಲ್ಲೇ ಅಂತರ್ಜಲ ಮಟ್ಟ ತೀವ್ರ ಸ್ವರೂಪದಲ್ಲಿ ಕುಸಿಯುತ್ತಿದೆ…!

June 28, 2019
7:00 PM

ನವದೆಹಲಿ: ದೇಶದಾದ್ಯಂತ ಅಂತರ್ಜಲ ಮಟ್ಟ ತೀವ್ರ ಸ್ವರೂಪದಲ್ಲಿ ಕುಸಿತವಾಗುತ್ತಿದೆ, 2030ರ ವೇಳೆಗೆ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ 21 ನಗರಗಳಲ್ಲಿ ಕುಡಿಯಲು ನೀರೇ ಸಿಗುವುದಿಲ್ಲ ಎಂದು ನೀತಿ ಆಯೋಗ ಇತ್ತೀಚಿಗೆ ವರದಿ ನೀಡಿದೆ. ಇದೀಗ ಲೋಕಸಭೆಗೆ ಜಲ ಶಕ್ತಿ ಸಚಿವ ರತ್ತನ್ ಲಾಲ್ ಕಟಾರಿಯಾ ಅವರು ನೀಡಿರುವ ಹೇಳಿಕೆ ಹೆಚ್ಚು ಕಳವಳಕಾರಿಯಾಗಿದೆ. ದೇಶದ ಶೇ. 52 ರಷ್ಟು ಬಾವಿಗಳಲ್ಲಿ ಅಂತರ್ಜಲ ಕುಸಿತವಾಗಿದೆ ಎಂದು ಅವರು ತಿಳಿಸಿದ್ದಾರೆ.

Advertisement

ಮಹಾರಾಷ್ಟ್ರದ ಒಟ್ಟು 353 ತಾಲೂಕುಗಳು ಅಥವಾ ಬ್ಲಾಕ್‌ಗಳಲ್ಲಿ ಒಂಬತ್ತನ್ನು ಅತಿಯಾದ ಅಂತರ್ಜಲ ಕುಸಿತ ಪ್ರದೇಶ ಎಂದು ವರ್ಗೀಕರಿಸಲಾಗಿದೆ. ಆದರೆ ಅತಿಯಾದ ಅಂತರ್ಜಲ ಕುಸಿತ ವಿಭಾಗದಲ್ಲಿ ತಮಿಳುನಾಡಿನಲ್ಲಿ ಅತಿ ಹೆಚ್ಚು ತಾಲೂಕುಗಳಿದ್ದು, ಇಲ್ಲಿನ 358 ತಾಲೂಕುಗಳು ಅತಿ ಹಚ್ಚು ಅಂತರ್ಜಲ ಕುಸಿತ ಪ್ರದೇಶಗಳಾಗಿವೆ. ನಂತರದ ಸ್ಥಾನದಲ್ಲಿ ರಾಜಸ್ಥಾನ (164), ಉತ್ತರ ಪ್ರದೇಶ (113) ಮತ್ತು ಪಂಜಾಬ್ (105) ಇವೆ.

ಅಂತರ್ಜಲ ಹೊರತೆಗೆಯುವಿಕೆಯಿಂದಾಗಿ ತಮಿಳುನಾಡಿನಲ್ಲಿ ಅತಿ ಹೆಚ್ಚು ಅಂತರ್ಜಲ ಬಳಕೆಗೆ ಒಳಗಾದ ತಾಲೂಕುಗಳಿವೆ ಎಂದು ಲೋಕಸಭೆಯಲ್ಲಿ ಜಲಶಕ್ತಿ ರಾಜ್ಯ ಸಚಿವ ರತ್ತನ್ ಲಾಲ್ ಕಟಾರಿಯಾ ಗುರುವಾರ ಲೋಕಸಭೆಯಲ್ಲಿ ತಿಳಿಸಿದ್ದಾರೆ. ದೇಶದಲ್ಲಿ ಮೇಲ್ವಿಚಾರಣೆ ಮಾಡಲಾದ ಸುಮಾರು 52 ಶೇ ಬಾವಿಗಳ ಅಂತರ್ಜಲ ಮಟ್ಟ ಕುಸಿಯುತ್ತಿದೆ ಎಂದು ಅವರು ಹೇಳಿದರು.

ದೇಶದಲ್ಲಿ ಮೌಲ್ಯಮಾಪನ ಮಾಡಲಾದ 6,584 ತಾಲೂಕುಗಳಲ್ಲಿ 1,034 ಅತಿ ಹೆಚ್ಚು ಅಂತರ್ಜಲ ಕುಸಿತ ತಾಲೂಕುಗಳಾಗಿವೆ. ಇದರಲ್ಲಿ 53 ತಾಲೂಕು ಚಿಂತಾಜನಕ ಪರಿಸ್ಥಿತಿಯಲ್ಲಿವೆ, ಅರೆ-ಚಿಂತಾಜನಕ ಸ್ಥಿತಿಯಲ್ಲಿ 681 ತಾಲೂಕುಗಳಿವೆ, ಲವಣಯುಕ್ತ ವಿಭಾಗದಲ್ಲಿ 96, ಮತ್ತು ಸುರಕ್ಷಿತ ವಿಭಾಗದಲ್ಲಿ 4,520 ತಾಲೂಕುಗಳು ಇವೆ ಎಂದು ಸಚಿವರು ತಿಳಿಸಿದ್ದಾರೆ.

ಬೆಂಗಳೂರು, ದೆಹಲಿ, ಚೆನ್ನೈ ಮತ್ತು ಬೆಂಗಳೂರುಗಳಲ್ಲಿ 2020ರ ವೇಳೆಗೆ ಅಂತರ್ಜಲ ಮಟ್ಟ ತೀವ್ರ ಸ್ವರೂಪದಲ್ಲಿ ಕುಸಿಯಲಿದೆ. 2030ರ ವೇಳೆಗೆ ಇಲ್ಲಿ ಕುಡಿಯಲು ಅಥವಾ ಇನ್ನಿತರ ಕಾರ್ಯಕ್ಕೆ ನೀರೇ ಸಿಗುವುದಿಲ್ಲ ಎಂಬ ಆತಂಕಕಾರಿ ವರದಿಯನ್ನು ಇತ್ತೀಚಿಗೆ ನೀತಿ ಆಯೋಗ ನೀಡಿತ್ತು.

ಮಾಹಿತಿ ಸಹಕಾರ :  www.news13.in

 

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಭಯಾರಣ್ಯದಲ್ಲಿ ರಾತ್ರಿ ವೇಳೆ ವಾಹನಗಳ ಸಂಚಾರ ನಿಷೇಧಕ್ಕೆ ಮನವಿ
April 4, 2025
7:22 AM
by: The Rural Mirror ಸುದ್ದಿಜಾಲ
ಒಂದು ವರ್ಷದಲ್ಲಿ 5600 ಕಿ.ಮೀ. ಹೆದ್ದಾರಿ ನಿರ್ಮಾಣ |
April 3, 2025
7:42 AM
by: The Rural Mirror ಸುದ್ದಿಜಾಲ
81 ಕೋಟಿಗೂ ಹೆಚ್ಚು ಜನರಿಗೆ ಉಚಿತ ಆಹಾರ ಧಾನ್ಯ
April 3, 2025
7:32 AM
by: The Rural Mirror ಸುದ್ದಿಜಾಲ
ರೈತರ ಹಿತಾಸಕ್ತಿ ರಕ್ಷಿಸಲು ಪಿಎಂ-ಕಿಸಾನ್ | ರೈತರಿಗೆ ನಿಖರ ಹವಾಮಾನ ಮುನ್ಸೂಚನೆಗೂ ಕ್ರಮ |
April 2, 2025
9:31 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group