ಪೈಲಾರ್: ಪರಕೀಯರ ಆಕ್ರಮಣವನ್ನು ಸಮರ್ಥವಾಗಿ ಹಿಮ್ಮೆಟ್ಟಿಸಿದ ನಾವು ಇಂದು ನಮ್ಮದೇ ಸಮಸ್ಯೆ ಗಳಿಂದ ನಲುಗಿ ಹೋಗಿದ್ದೇವೆ.ದೇಶದ ಅಭಿವೃದ್ಧಿಯೇ ನಮ್ಮ ಆದ್ಯತೆಯಾಗಬೇಕು. ಗಾಂಧಿ ತತ್ವಗಳನ್ನು ರೂಢಿಸಿಕೊಂಡ ಜೀವನ ನಮ್ಮದಾಗಬೇಕು ಎಂದು ಹಿರಿಯ ಸಾಹಿತಿ ,ಶಿಕ್ಷಕ ಲಕ್ಷ್ಮೀಶ ಚೊಕ್ಕಾಡಿ ಹೇಳಿದರು.
ಫ್ರೆಂಡ್ಸ್ ಕ್ಲಬ್ ಪೈಲಾರು ಮತ್ತು ಶೌರ್ಯ ಯುವತಿ ಮಂಡಲ ಪೈಲಾರು ಇವರುಗಳ ಜಂಟಿ ಆಶ್ರಯದಲ್ಲಿ ಸ್ವಾತಂತ್ರ್ಯ ದಿನಾಚರಣೆ ಯ ಅಂಗವಾಗಿ ಚೊಕ್ಕಾಡಿ ಪ್ರೌಢಶಾಲೆ ಯಲ್ಲಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದ ರು. ಶಾಲಾ ಮುಖ್ಯ ಶಿಕ್ಷಕ ಚಂದ್ರಶೇಖರ ಮೂಕಮಲೆ ಸಭಾಧ್ಯಕ್ಷತೆ ವಹಿಸಿದ್ದರು. ಫ್ರೆಂಡ್ಸ್ ಕ್ಲಬ್ ನ ಕಾರ್ಯದರ್ಶಿ ಮನೋಜ್ಞ ಕೋಡ್ತುಗುಳಿ ಮತ್ತು ಶೌರ್ಯ ಯುವತಿ ಮಂಡಲದ ಉಪಾಧ್ಯಕ್ಷೆ ಚರಿಷ್ಮಾ ಕಡಪಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಾತ್ವಿಕ್ ಮಡಪ್ಪಾಡಿ ಸ್ವಾಗತಿಸಿ, ರಶ್ಮಿ ರಜನೀಕಾಂತ್ ಧನ್ಯವಾದಗೈದರು . ಸೌಂದರ್ಯ ಕಡಪಳ ನಿರೂಪಿಸಿದರು.
ಸ್ಪರ್ಧಾ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸಭಾ ಕಾರ್ಯಕ್ರಮದ ನಂತರ ಸ್ವಾತಂತ್ರ್ಯ ಸಂಗ್ರಾಮದ ನೈಜ ಚಿತ್ರಣ ಬಿಂಬಿಸುವ ಆಸ್ಕರ್ ಪ್ರಶಸ್ತಿ ಪುರಸ್ಕೃತ “ಗಾಂಧಿ” ಚಲನಚಿತ್ರ ಪ್ರದರ್ಶಿಸಲಾಯಿತು.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…