ಬೆಳ್ಳಾರೆ: ಭಾರತ ನಂಬರ್‍ವನ್ ದೇಶವಾಗಬೇಕಾದರೆ ವಿದ್ಯಾರ್ಥಿಗಳ ಪಾತ್ರ ಬಹು ಮುಖ್ಯವಾಗುತ್ತದೆ. ಬಲಿಷ್ಠ ಭಾರತ ನಿರ್ಮಾಣವಾಗಬೇಕಾದರೆ ವಿದ್ಯಾರ್ಥಿಗಳು ಬಲಿಷ್ಠವಾಗಬೇಕು.ಅದಕ್ಕಾಗಿ ಸರ್ಕಾರವು ಆಂಗ್ಲಮಾಧ್ಯಮದ ಸರ್ಕಾರಿ ಶಾಲೆಗೆ ಒತ್ತು ನೀಡಲಾರಂಭಿಸಿದೆ ಎಂದು ನಗರಾಭಿವೃದ್ದಿ ಹಾಗು ಉಸ್ತುವಾರಿ ಸಚಿವ ಯು.ಟಿ ಖಾದರ್ ಹೇಳಿದರು.
2017-18ನೇ ಸಾಲಿನ ಪರಿಶಿಷ್ಠ ಜಾತಿ ಉಪಯೋಜನೆಯಡಿ ನೂರು ಲಕ್ಷ ವೆಚ್ಛದಲ್ಲಿ ನಿರ್ಮಾಣಗೊಂಡಿರುವ ಬೆಳ್ಳಾರೆಯ ಕರ್ನಾಟಕ ಪಬ್ಲಿಕ್ ಸ್ಕೂಲಿನ ಅಕ್ಷರ ದಾಸೋಹವನ್ನು ಉದ್ಘಾಟಿಸಿ ಮಾತನಾಡಿದ ಅವರು ಬಡತನ ದೂರ ಮಾಡಲು ಶೈಕ್ಷಣಿಕ ಕ್ಷೇತ್ರದಿಂದ ಮಾತ್ರ ಸಾಧ್ಯ ತಾಳ್ಮೆಯೂ ಯಶಸ್ಸಿನಲ್ಲಿ ದೊಡ್ಡ ಪಾತ್ರ ವಹಿಸುತ್ತದೆ ಎಂದರು.
ಸ್ಮಾರ್ಟ್ ಕ್ಲಾಸ್‍ಗಳನ್ನು ಉದ್ಘಾಟಿಸಿ ಬಳಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎಸ್.ಅಂಗಾರರವರು ಯೋಜನೆಗಳು ಯಶಸ್ವಿಯಾಗಬೇಕಾದರೆ ಜಯದ ಮನೋಭಾವನೆ ಹೊಂದಿರಬೇಕು ಆಡಳಿತಗಾರರು ಆಳ್ವಿಕೆ ವೇಳೆಯಲ್ಲಿ ಎಚ್ಚರಿಕೆಯಿಂದಿರುವುದು ಮುಖ್ಯ ಸರ್ಕಾರದ ಇಲಾಖೆ ಅನುದಾನ ಒದಗಿಸುವ ಸಂದರ್ಭದಲ್ಲಿ ನಿರ್ದಿಷ್ಠ ಸ್ಥಳದ ಅಧ್ಯಯನ ನಡೆಸಬೇಕು ಎಂದರು. ಆಂಗ್ಲ ಮಾಧ್ಯಮದ ಒಂದನೆ ತರಗತಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ ಹಾಗು ಯು.ಕೆ.ಜಿಯನ್ನು ತಾ.ಪಂ ಅಧ್ಯಕ್ಷ ಚನಿಯ ಕಲ್ತಡ್ಕ ಉದ್ಘಟಿಸಿದರು. ಜಿ.ಪಂ ಸದಸ್ಯ ಎಸ್.ಎನ್ ಮನ್ಮಥ ಹಾಗು ಬೆಳ್ಳಾರೆ ಗ್ರಾ.ಪಂ ಅಧ್ಯಕ್ಷೆ ಶಕುಂತಳಾ ನಾಗರಾಜ್ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದಲ್ಲಿ ಮಿಂಚಿದ ಐವರು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ ಮಹದೇವ, ಬೆಳ್ಳಾರೆ ಗ್ರಾ.ಪಂ ಉಪಾಧ್ಯಕ್ಷ ಮುಸ್ತಾಫಾ, ಸದಸ್ಯ ಆರಿಫ್ ಬೆಳ್ಳಾರೆ, ಪೆರುವಾಜೆ ಗ್ರಾ.ಪಂ ಅಧ್ಯಕ್ಷೆ ಅನುಸೂಯ, ಪಂಜ ಗ್ರಾ.ಪಂ ಅಧ್ಯಕ್ಷ ಕಾರ್ಯಪ್ಪ ಗೌಡ ಚಿದ್ಗಲ್ಲು, ಕಾಲೇಜು ಅಭಿವೃದ್ದಿ ಸಮಿತಿ ಅಧ್ಯಕ್ಷ ಶಾಂತಾರಾಮ ಕಣಿಲೆಗುಂಡಿ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಳದ ಆಡಳಿತ ವ್ಯವಸ್ಥಾಪನಾ ಸಮಿತಿ ಸದಸ್ಯೆ ರಾಜೀವಿ ಆರ್ ರೈ, ಪ್ರೌಢ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಬಾಳಪ್ಪ. ಪ್ರಾಥಮಿಕ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಕೇಶವ ನಾಯ್ಕ್, ನಿವೃತ್ತ ಪ್ರಾಂಶುಪಾಲ ಯು.ಸುಬ್ರಾಯ ಗೌಡ, ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಉಮಕುಮಾರಿ ಹಾಗು ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಜಾನಕಿ ಉಪಸ್ಥಿತರಿದ್ದರು.
ಶಿಕ್ಷಕ ರಾಮಚಂದ್ರ ಭಟ್ ಸ್ವಾಗತಿಸಿ, ವಂದಿಸಿದರು. ಪ್ರಭಾರ ಪ್ರಾಂಶುಪಾಲೆ ಹಸೀನಾ ಬಾನು ಪ್ರಸ್ತಾವನೆಗೈದರು. ಮಮತಾ ಕಾರ್ಯಕ್ರಮ ನಿರೂಪಿಸಿದರು.
ಹಿಂಗಾರು ಮಳೆಯು ಉತ್ತರ ಒಳನಾಡು ಭಾಗಗಳಲ್ಲಿ ನವೆಂಬರ್ 16 ರ ತನಕ ಹಾಗೂ…
ದೇಶದಲ್ಲಿ ಒಂದು 1.28 ಲಕ್ಷ ಸ್ಟಾರ್ಟ್ ಅಪ್ ಗಳು ಕಾರ್ಯನಿರ್ವಹಿಸುತ್ತಿವೆ ಎಂದು ಕೇಂದ್ರ…
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಸಹಯೋಗದಲ್ಲಿ ಜಿಕೆವಿಕೆ ಆವರಣದಲ್ಲಿ ನವೆಂಬರ್ 14 ರಿಂದ 17…
ದೇಶದ ಪ್ರಮುಖ ಆಹಾರ ಬೆಳೆಯಾದ ಭತ್ತದ 11290 ವೈವಿಧ್ಯಮಯ ತಳಿಗಳನ್ನು ಒಂದೇ ಜಾಗದಲ್ಲಿ…
ಜೈವಿಕ ಇಂಧನ ಉತ್ಪಾದನಾ ಕ್ಷೇತ್ರದಲ್ಲಿ ಭಾರತವು ಜಾಗತಿಕವಾಗಿ ಎರಡನೇ ಸ್ಥಾನದಲ್ಲಿದೆ ಎಂದು ಕೇಂದ್ರ…
ಮಂಗಳೂರು-ಬೆಂಗಳೂರು ಸಂಪರ್ಕಿಸಲು ಎಕ್ಸ್ಪ್ರೆಸ್ವೇ (ಹೈ-ಸ್ಪೀಡ್ ಕಾರಿಡಾರ್) ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ರಸ್ತೆ ಸಾರಿಗೆ…