ಸುದ್ದಿಗಳು

ದ.ಕ.-ಉಡುಪಿ : ನಾನ್ ಸಿ ಆರ್ ಝೆಡ್ ಮರಳುಗಾರಿಕೆಗೆ ನಿಯಮ ಸಡೀಲಿಕರಣ ಪ್ರಸ್ತಾಪ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಮಂಗಳೂರು:ದ.ಕ. ಹಾಗೂ ಉಡುಪಿ ಸೇರಿದಂತೆ ಕರಾವಳಿಯಲ್ಲಿ ತಲೆದೋರಿರುವ ಮರಳು ಸಮಸ್ಯೆ ಪರಿಹಾರಕ್ಕಾಗಿ  ವಿಧಾನ ಸೌಧದಲ್ಲಿ ಸಭೆ ಕರೆಯಲಾಗಿತ್ತು ಹಾಗೂ ಇದರ ಮುಂದುವರಿದ ಭಾಗವಾಗಿ ಶುಕ್ರವಾರ ವಿಧಾನ ಸೌಧದಲ್ಲಿ ಮರಳು ಮತ್ತುಭೂ ವಿಜ್ಞಾನ ಇಲಾಖೆಯ ಸಚಿವ ಸಿ.ಸಿ.ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

Advertisement

ಶುಕ್ರವಾರದ ಸಭೆಯಲ್ಲಿ 2010-11ರ ಮರಳು ನೀತಿಯಿಂದ ಕರಾವಳಿ ಭಾಗಕ್ಕೆ ಅನ್ಯಾಯವಾಗಿದೆ ಎಂಬುದನ್ನು ಒತ್ತಿ ಹೇಳಿದ ಜಿಲ್ಲೆಯ ಶಾಸಕರು ,ಮರಳು ನೀತಿಯನ್ನು ಸಡಿಲೀಕರಣ ಮಾಡುವಂತೆ ಮನವಿ ಮಾಡಿದರು.
ನಾನ್ ಸಿ ಆರ್ ಝೆಡ್ ಪ್ರದೇಶದಲ್ಲಿ ಟೆಂಡರ್ ಬದಲಾಗಿ ಟೆಂಪರರಿ ಪರ್ಮಿಟ್ ನೀಡಿ ಪಾರಂಪರಿಕ ಮರಳುಗಾರಿಕೆ ಮಾಡುವವರಿಗೆ ಅವಕಾಶ ಮಾಡಿಕೊಡಬೇಕು. ಈಗಿರುವ ಮರಳು ದಿಬ್ಬವನ್ನು ಕನಿಷ್ಟ 5 ಎಕ್ರೆ ಬೇಕೇಂಬ ನಿಯಮವನ್ನು ಸಡಲೀಕರಿಸಿ 50 ಸೆಂಟ್ಸ್ ಇರುವವರೆಗೂ ಅವಕಾಶ ನೀಡಬೇಕು.ಮಳೆಗಾಲದಲ್ಲಿ ಮಣ್ಣು ಮರಳಾಗುವುದರಿಂದ ನಾನ್ ಸಿಆರ್‍ಝೆಡ್‍ನಲ್ಲಿ ನೀರಿನ ಒಳ ಹಾಗೂ ಹೊರಗಿನ ಮರಳು ತೆಗೆಯಲು ಅವಕಾಶ ನೀಡಬೇಕು ಎಂಬುದನ್ನೂ ಸಚಿವರ ಗಮನಕ್ಕೆ ತರಲಾಯಿತು.ಇದಕ್ಕಾಗಿ ಆಯಾ ಜಿಲ್ಲೆಯ ಜಿಲ್ಲಾ„ಕಾರಿಗಳು 2 ದಿನಗಳೊಳಗೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸುವಂತೆ ಸಚಿವರು ಸೂಚಿಸಿದರು.

ಪಾರಂಪಾರಿಕ ಮರಳುಗಾರಿಕೆಯ ಬಗ್ಗೆ ರಾಜ್ಯದ ಮರಳು ನೀತಿಯಲ್ಲಿ ಗುಜರಾತ್‍ನ ಮರಳು ನೀತಿಯ ಕುರಿತು ಉಲ್ಲೇಖ ಇರುವುದರಿಂದ ,ಗುಜರಾತ್ ಮರಳು ನೀತಿಯನ್ನು ಕರ್ನಾಟಕದಲ್ಲಿ ಅನುಷ್ಠಾನ ಗೊಳಿಸುವ ನಿಟ್ಟಿನಲ್ಲಿ ವಾರದೊಳಗೆ ಗುಜರಾತ್‍ಗೆ ತೆರಳಿ ಅಧ್ಯಯನ ನಡೆಸಿ ಪೂರಕ ಅಂಶಗಳ ವರದಿ ಸಲ್ಲಿಸುವಂತೆಯೂ ಸಚಿವರು ಸೂಚಿಸಿದರು.
ಅದರಂತೆ ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕ ಮಹೇಶ್ವರ ರಾವ್,ಕಾರ್ಕಳ ಶಾಸಕ ಸುನೀಲ್ ಕುಮಾರ್.ಉಡುಪಿ ಶಾಸಕ ರಘುಪತಿ ಭಟ್,ಪುತ್ತೂರು ಶಾಸಕ ಸಂಜೀವ ಮಠಂದೂರು,ಕುಮಟಾ ಶಾಸಕ ದಿನಕರ ಶೆಟ್ಟಿ ಅವರನ್ನೊಳಗೊಂಡ ತಂಡವನ್ನು ಅಧ್ಯಯನಕ್ಕಾಗಿ ರಚಿಸಲಾಗಿದೆ.ವಾರದೊಳಗೆ ಗುಜರಾತ್‍ನ ಮರಳು ನೀತಿಯ ಕುರಿತು ಅಧ್ಯಯನ ನಡೆಸಿ ವರದಿ ನೀಡುವಂತೆ ಸಚಿವ ಸಿ.ಸಿ.ಪಾಟೀಲ್ ಸೂಚಿಸಿದರು.

ಮರಳು ಸಮಸ್ಯೆ ಕುರಿತು ಜಿಲ್ಲೆಯ ನಿಯೋಗ ಗುರುವಾರ ಬೆಂಗಳೂರಿಗೆ ತೆರಳಿ ಕರಾವಳಿಯ ಶಾಸಕರಿಗೆ ಪೂರಕ ಮಾಹಿತಿ ಹಾಗೂ ಸಮಸ್ಯೆಗಳ ಕುರಿತು ವಿವರಣೆ ನೀಡಿದರು.
ನಿಯೋಗದಲ್ಲಿ ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು,ಜಿಲ್ಲಾ ಬಿಜೆಪಿ ಸದಸ್ಯ ರಾಕೇಶ್ ರೈ ಕೆಡೆಂಜಿ,ಜಿ.ಪಂ.ಮಾಜಿ ಸದಸ್ಯ ನವೀನ್ ಕುಮಾರ್ ಮೇನಾಲ,ಸವಣೂರು ಗ್ರಾ.ಪಂ.ಸದಸ್ಯ ಪ್ರಕಾಶ್ ಕುದ್ಮನಮಜಲು, ಸುರೇಶ್ ಕುಂಡಡ್ಕ ಪೆರಾಬೆ,ತೀರ್ಥರಾಮ ಕೆಡೆಂಜಿ,ಪಾಲ್ತಾಡಿ ಗ್ರಾಮ ವಿಕಾಸ ಸಮಿತಿ ಅಧ್ಯಕ್ಷ ಪ್ರವೀಣ್ ಚೆನ್ನಾವರ ,ಜಿನ್ಸಿ ನೆಲ್ಯಾಡಿ,ಪೇಸ್‍ನ ಮಾಜಿ ಅಧ್ಯಕ್ಷ ವಸಂತ ಭಟ್ ಪುತ್ತೂರು,ರಾಘವೇಂದ್ರ ಭಟ್ ಕೆದಿಲ ಮೊದಲಾವರಿದ್ದರು.

Advertisement

ಕರಾವಳಿ ಭಾಗದ ಮರಳು ಸಮಸ್ಯೆ ಕುರಿತಂತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ,ಶಾಸಕರಾದ ಸಂಜೀವ ಮಠಂದೂರು,ಎಸ್ ಅಂಗಾರ,ಉಮಾನಾಥ ಕೋಟ್ಯಾನ್,ಡಾ.ಭರತ್ ಶೆಟ್ಟಿ,ವೇದವ್ಯಾಸ ಕಾಮತ್,ರಾಜೇಶ್ ನಾೈಕ್,ಸುಕುಮಾರ ಶೆಟ್ಟಿ,ಹಾಲಾಡಿ ಶ್ರೀನಿವಾಸ ಶೆಟ್ಟಿ,ಲಾಲಾಜಿ ಮೆಂಡನ್, ಹರೀಶ್ ಪೂಂಜಾ ,ದಿನಕರ ಶೆಟ್ಟಿ ಸಚಿವರ ಮುಂದಿಟ್ಟರು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ವೈಜ್ಞಾನಿಕ ಶಿಫಾರಸ್ಸಿನಂತೆ ರಸಗೊಬ್ಬರದ ಬಳಕೆ ಸೂಕ್ತ – ರೈತರಿಗೆ ಸಲಹೆ

ವೈಜ್ಞಾನಿಕ ಶಿಫಾರಸ್ಸಿನಂತೆ ರಾಸಾಯನಿಕ ಗೊಬ್ಬರ ಬಳಕೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ…

2 hours ago

ರಾಜ್ಯದ ಹಲವೆಡೆ ಮುಂದಿನ 7 ದಿನಗಳ ಕಾಲ ವ್ಯಾಪಕ ಮಳೆ | ಬೆಂಗಳೂರಿಗೆ ಎಲ್ಲೋ ಅಲರ್ಟ್

ಕರಾವಳಿ ಸೇರಿದಂತೆ ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಧಾರಾಕಾರ ಮಳೆಯಾಗಿದೆ. ರಾಜ್ಯದ…

3 hours ago

ಬದುಕು ಪುರಾಣ | ಜ್ಞಾನದ ಪ್ರತಿನಿಧಿ ಗಂಗಾಪುತ್ರ

ತ್ಯಾಗಕ್ಕೊಂದು ಸ್ವ-ಸ್ವರೂಪ ಇದ್ದರೆ ಅದು ‘ಭೀಷ್ಮಾಚಾರ್ಯ’ರಿಗೆ ಹೊಂದುತ್ತದೆ. ತ್ಯಾಗವೆಂದರೆ ದೇಹವನ್ನು ಕಳೆದುಕೊಳ್ಳುವುದಲ್ಲ! ದೇಹವಿದ್ದೂ…

1 day ago

ಬೆಳೆ ಹಾನಿ ಕುರಿತು ಸಮಗ್ರವಾಗಿ ಸಮೀಕ್ಷೆಗೆ ಸೂಚನೆ

ವಿಜಯಪುರ ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಗ್ರಾಮೀಣ ರಸ್ತೆ, ಕೃಷಿ, ತೋಟಗಾರಿಕೆ ಬೆಳೆಗಳು, ಜನ-ಜಾನುವಾರುಗಳ…

2 days ago

ಹವಾಮಾನ ವರದಿ | 09-08-2025 | ಬಂಗಾಳಕೊಲ್ಲಿಯ ವಾಯುಭಾರ ಕುಸಿತ- ಮುಂಗಾರು ಚುರುಕು |

ತಮಿಳುನಾಡು ಕರಾವಳಿ ಸಮೀಪ ಉಂಟಾಗಿರುವ ವಾಯುಭಾರ ಕುಸಿತವು ಆಂದ್ರಾ ಕರಾವಳಿ ದಾಟಿ ಉತ್ತರಕ್ಕೆ…

2 days ago

ಹೊಸರುಚಿ | ಹಲಸಿನ ಹಣ್ಣಿನ ಹಲ್ವ

ಹಲಸಿನ ಹಣ್ಣಿನ ಹಲ್ವಕ್ಕೆ ಬೇಕಾಗುವ ಸಾಮಗ್ರಿಗಳು :  ಹಲಸಿನ ಹಣ್ಣು 1 ಕಪ್. ಜಾರ್…

2 days ago