ಧರ್ಮಸ್ಥಳ: ಬದುಕು ಸುಖ-ದುಃಖಗಳ ಮಿಶ್ರಣವಾಗಿದ್ದು ನಿರಂತರ ಹೋರಾಟಮಯವಾಗಿರುತ್ತದೆ. ಮಾನವಜನ್ಮ ಅಮೂಲ್ಯವಾಗಿದ್ದು ನಿತ್ಯವೂ ಶ್ರದ್ಧಾ-ಭಕ್ತಿಯಿಂದ, ಪರಿಶುದ್ಧ ಮನಸ್ಸಿನಿಂದ ಭಜನೆ ಮಾಡಿದಾಗ ನಮ್ಮಲ್ಲಿರುವ ಸಕಲ ದೋಷಗಳ ನಿವಾರಣೆಯಾಗಿ ಅಂತರಂಗದಲ್ಲಿ ದೈವತ್ವ ಹಾಗೂ ಉತ್ತಮ ಸಂಸ್ಕಾರ ಜಾಗೃತವಾಗುತ್ತದೆ. ತನ್ಮೂಲಕ ಶಾಂತಿ, ನೆಮ್ಮದಿ ಸಿಗುತ್ತದೆ ಎಂದು ಹರಿಹರಪುರದ ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮೀನರಸಿಂಹ ಪೀಠದ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಅವರು ಭಾನುವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ಒಂದು ವಾರ ನಡೆದ ಇಪ್ಪತ್ತೊಂದನೆ ವರ್ಷದ ಭಜನಾ ತರಬೇತಿ ಶಿಬಿರ ಮತ್ತು ಸಂಸ್ಕೃತಿ ಸಂವರ್ಧನಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ತನ್ನಂತೆ ಪರರ ಬಗೆದು ಬದುಕುವುದೇ ಮಾನವತ್ವವಾಗಿದೆ. ಸಂಸ್ಕಾರದ ಸಮಷ್ಟಿ ರೂಪವೇ ಸಂಸ್ಕೃತಿ ಆಗಿದೆ. ಇಡೀ ವಿಶ್ವವೇ ಒಂದು ಕುಟುಂಬ ಎಂಬ ಭಾವನೆಯೊಂದಿಗೆ ಪರಸ್ಪರ ಪ್ರೀತಿ-ವಿಶ್ವಾಸದೊಂದಿಗೆ ಸೌಹಾರ್ದಯುತ ಜೀವನ ನಡೆಸಲು ಸಂಸ್ಕಾರ ಪ್ರೇರಣೆ ನೀಡುತ್ತದೆ ಎಂದು ಸ್ವಾಮೀಜಿ ಅಭಿಪ್ರಾಯ ಪಟ್ಟರು.
ಹಿರೇಮಗಳೂರು ಕಣ್ಣನ್ ಶುಭಾಶಂಸನೆ ಮಾಡಿ, ಭಜನೆಯಿಂದ ಉತ್ತಮ ಸಂಸ್ಕಾರ ಮೂಡಿ ಬರುತ್ತದೆ .ಗೂಗಲ್ ಮುಂದೆ ಗೂಬೆಗಳಾಗುವ ಬದಲು ಭಜನಾ ಸಂಸ್ಕೃತಿ ಮೂಲಕ ಸಾರ್ಥಕ ಜೀವನ ನಡೆಸಬೇಕು ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಭಜನಾ ಪರಿಷತ್ ಮೂಲಕ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿದರು. ಭಜನಾ ತರಬೇತಿ ಪಡೆದವರು ಆಯಾಗ್ರಾಮದಲ್ಲಿ ಸಾಂಸ್ಕೃತಿಕ ರಾಯಭಾರಿಗಳಾಗಿ ಸಮಾಜದ ಸಂಘಟನೆಗೆ ಪ್ರಯತ್ನಿಸಬೇಕು. ವ್ಯವಹಾರದಲ್ಲಿ ಸದಾ ಧಾರ್ಮಿಕ ಪ್ರಜ್ಞೆ ಇರಬೇಕು. ಜನರ ಸುಖ-ಕಷ್ಟಕ್ಕೆ ಸಮನಾಗಿ ಸ್ಪಂದಿಸಬೇಕು. ಸಂಸಾರದಲ್ಲಿ ಹಾಗೂ ಸಮಾಜದ ಸಮಸ್ಯೆಗಳನ್ನು ಸೌಹಾರ್ಧಯುತವಾಗಿ ಪರಿಹರಿಸಬೇಕು ಎಂದು ಹೆಗ್ಗಡೆಯವರು ಸಲಹೆ ನೀಡಿದರು.
ಹೇಮಾವತಿ ವೀ. ಹೆಗ್ಗಡೆ, ಡಿ. ಹರ್ಷೇಂದ್ರಕುಮಾರ್, ಸುಪ್ರಿಯಾ ಹರ್ಷೇಂದ್ರಕುಮಾರ್, ಶಾಸಕ ಹರೀಶ್ ಪೂಂಜ, ಮಾಣಿಲದ ಮೋಹನದಾಸ ಸ್ವಾಮೀಜಿ ಉಪಸ್ಥಿತರಿದ್ದರು.
ಭಜನಾ ತರಬೇತಿ ಶಿಬಿರದ ಕಾರ್ಯದರ್ಶಿ ಮಮತಾರಾವ್ ವರದಿ ಸಾದರ ಪಡಿಸಿದರು. ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಸ್ವಾಗತಿಸಿದರು. ಬಿ. ಜಯರಾಮ ನೆಲ್ಲಿತ್ತಾಯ ಧನ್ಯವಾದವಿತ್ತರು.ಶ್ರೀನಿವಾಸ ರಾವ್ ಕಾರ್ಯಕ್ರಮ ನಿರ್ವಹಿಸಿದರು.
ಸಣ್ಣಪುಟ್ಟ ಸಮಸ್ಯೆಗಳಿಗೆ, ಮುಂದೆ ಆಗಬಹುದಾದ ಅನೇಕ ಸಾಧ್ಯತೆಗಳ ಊಹಾತ್ಮಕ ಘಟನೆಗಳಿಗೆ, ಇನ್ನೂ ಅನೇಕ…
ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಕಳೆದ ಒಂಬತ್ತು ತಿಂಗಳಿಗೂ ಹೆಚ್ಚು ಕಾಲ ಸಿಲುಕಿಕೊಂಡಿದ್ದ ಭಾರತೀಯ…
ಆಸ್ತಿಯನ್ನು ತಮ್ಮ ಹೆಸರಿಗೆ ಬರೆಯಿಸಿಕೊಂಡ ನಂತರ, ಪೋಷಕರನ್ನು ಚಿಕಿತ್ಸೆ ನೆಪದಲ್ಲಿ ಆಸ್ಪತ್ರೆಯಲ್ಲಿ ಬಿಟ್ಟು…
ದೇಶದಲ್ಲಿ 90 ಸಾವಿರ ಸರ್ಕಾರಿ ಶಾಲೆಗಳು ಬಂದ್ ಆಗಿವೆ. ಬಿಹಾರ ಮತ್ತು ಉತ್ತರ…
ಕಲ್ಯಾಣ ಕರ್ನಾಟಕ ಭಾಗದಲ್ಲಿ 1800 ಶಿಕ್ಷಕರು ಸೇರಿದಂತೆ ಒಟ್ಟಾರೆ ರಾಜ್ಯದಲ್ಲಿ 5 ಸಾವಿರ…
ರೈತರು ಸ್ಥಾಪಿಸಿರುವ ರೈತ ಉತ್ಪಾದಕ ಸಂಸ್ಥೆಗಳ ಅಭಿವೃದ್ಧಿಗೆ ರಾಜ್ಯ ಸರಕಾರದಿಂದ ಸಕಲ ಸಹಕಾರ…