ಧರ್ಮಸ್ಥಳ : ನೂರೈವತ್ತು ವರ್ಷಗಳ ಇತಿಹಾಸ ಹೊಂದಿರುವ ಮುಂಬೈನ ಆಯುರ್ವೇದ ಸಂಸ್ಥೆಯಾದ ಶ್ರೀ ಧೂತಪಾಪೇಶ್ವರ್ ಲಿಮಿಟೆಡ್ ತಯಾರಿಸಿದ “ಮಹಾ ಸ್ವರ್ಣಯೋಗ” ಔಷಧಿಯನ್ನು ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ಹೆಗ್ಗಡೆಯವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಬಳಿಕ ಮಾತನಾಡಿದ ಅವರು, ಆರೋಗ್ಯ ಭಾಗ್ಯ ರಕ್ಷಣೆಗೆ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಮಹಾಸ್ವರ್ಣ ಯೋಗ ಸಹಕಾರಿಯಾಗಿದೆ ಎಂದು ಅವರು ಹೇಳಿ ಶುಭ ಹಾರೈಸಿದರು.
ಆಯುರ್ವೇದ ಸಂಸ್ಥೆಯ ಆಡಳಿತ ನಿರ್ದೇಶಕ ರಂಜಿತ್ ಪುರಾಣಿಕ್ ಮಾತನಾಡಿ, ಮಹಾ ಸ್ವರ್ಣ ಯೋಗ ಕೇವಲ ಔಷಧಿ ಮಾತ್ರವಲ್ಲ. ಪರಿಪೂರ್ಣ ಚಿಕಿತ್ಸಾ ವಿಧಾನವಾಗಿದೆ. ಸಣ್ಣ ಶಿಶುಗಳಿಂದ 16 ವರ್ಷ ಪ್ರಾಯದ ಮಕ್ಕಳಿಗೆ ಈ ಔಷಧಿ ನೀಡಬಹುದು ತಮ್ಮ ಸಂಸ್ಥೆಯು ಪ್ರಮಾಣೀಕೃತ, ಸುರಕ್ಷಿತ, ಹಾಗೂ ಪರಿಣಾಮಕಾರಿ ಔಷಧಿಗಳನ್ನು ತಯಾರಿಸುವಲ್ಲಿ ಬದ್ಧವಾಗಿದೆ ಎಂದು ಹೇಳಿದರು.
ರಾಷ್ಟ್ರೀಯ ಮಾರಾಟ ನಿರ್ವಾಹಕ ಕೆ. ಎ. ನಾಯಕ್ ಮಾತನಾಡಿದರು. ಹಾಸನದ ಕಾಲೇಜಿನ ಡಾ. ಶೈಲಜ ಶುಭಾಶಂಸನೆ ಮಾಡಿದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel