ಧರ್ಮಸ್ಥಳದಲ್ಲಿ ರಾಷ್ಟ್ರೀಯ ಪುರಾಭಿಲೇಖ, ಸ್ಥಳನಾಮ ಸಾಂಸ್ಥಿಕ ಜಂಟಿ ಅಧಿವೇಶನ

February 28, 2020
6:28 PM

ಧರ್ಮಸ್ಥಳ : ಹೊಸ ಪೀಳಿಗೆಯ ಪ್ರತಿಭಾನ್ವಿತರು ಭಾರತದ ಪ್ರಾಚೀನ ಕಾಲದ ಇತಿಹಾಸ ಪ್ರತಿನಿಧಿಸುವ ಶಾಸನ, ಸ್ಥಳನಾಮ ಮತ್ತಿತರ ಪುರಾವೆಗಳನ್ನು ಸಂಗ್ರಹಿಸಿ ಭಾರತೀಯ ಜ್ಞಾನ ಪರಂಪರೆಗೆ ಕೊಡುಗೆಗಳನ್ನು ನೀಡುವ ಸಂಶೋಧನಾ ಪ್ರಜ್ಞೆ ಹೊಂದಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ ವೀರೇಂದ್ರ ಹೆಗ್ಗಡೆ ನುಡಿದರು.

Advertisement

ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಇತಿಹಾಸ ವಿಭಾಗದ ಸಹಯೋಗದೊಂದಿಗೆ ಧರ್ಮಸ್ಥಳದ ವಸಂತ್ ಮಹಲ್ ಸಭಾಭವನದಲ್ಲಿ ಏರ್ಪಟ್ಟ ಭಾರತೀಯ ಪುರಾಭಿಲೇಖ ಸಂಸ್ಥೆಯ 45ನೇ ವಾರ್ಷಿಕ ಅಧಿವೇಶನ ಮತ್ತು ಭಾರತೀಯ ಸ್ಥಳನಾಮ ಸಂಸ್ಥೆಯ 39ನೇ ವಾರ್ಷಿಕ ಸಮಾವೇಶದ ಎರಡು ದಿನಗಳ ಜಂಟಿ ಅಧಿವೇಶನ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತವು ಉಳಿದ ದೇಶಗಳಂತಲ್ಲ. ವಿದೇಶಗಳಿಗೆ ಅವುಗಳದ್ದೇ ಆದ ಐತಿಹಾಸಿಕ ಹಿನ್ನೆಲೆ ಇದೆ. ಭಾರತಕ್ಕೆ ಆ ಐತಿಹಾಸಿಕ ಹಿನ್ನೆಲೆಯ ಜೊತೆಗೆ ಪ್ರಾಚೀನ ಪರಂಪರೆಯ ಶ್ರೇಷ್ಠ ಮಾದರಿಗಳ ಇತಿಹಾಸವೂ ಇದೆ. ಈಗಾಗಲೇ ಆಗಿಹೋದ ವಿವರಗಳ ಜೊತೆಗೆ ಪ್ರಾಚೀನ ಪರಂಪರೆಯ ಮೌಲಿಕತೆಯನ್ನು ಬಿಂಬಿಸುವ ಹಾಗೆ ಧಾರ್ಮಿಕ, ಆಧ್ಯಾತ್ಮಿಕ ಮತ್ತು ವಿವೇಚನಾತ್ಮಕ ಅಂಶಗಳ ಇತಿಹಾಸವನ್ನೂ ಭಾರತದಲ್ಲಿ ಕಾಣಬಹುದು. ವಿದ್ಯಾರ್ಥಿಗಳು ಈ ಪರಂಪರೆಯ ಒಳಗೇ ಇರುವ ಮಹತ್ವದ ಐತಿಹಾಸಿಕ ಅಂಶಗಳನ್ನು ಶೋಧಿಸುವುದರ ಕಡೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು. ಇತಿಹಾಸ, ಪ್ರಾಚೀನತೆ ಪ್ರತಿನಿಧಿಸುವ ವಸ್ತು, ವಿಚಾರಗಳನ್ನು ವರ್ತಮಾನದಲ್ಲಿ ಪ್ರಚುರಪಡಿಸುವುದರ ಹಿಂದೆ ಮೌಲಿಕ ಕಾರಣಗಳಿವೆ. ಸಂಗ್ರಹಿತ ವಸ್ತುಗಳ ಪ್ರದರ್ಶನ ಕೇವಲ ಪ್ರಚಾರದ ಉದ್ದೇಶಕ್ಕೆ ಮಾತ್ರವಲ್ಲ. ಬದಲಾಗಿ ಹಳೆಯದ್ದರ ಶ್ರೇಷ್ಠತೆಯನ್ನು ಹೊಸ ಪೀಳಿಗೆಗೆ ಪರಿಚಯಿಸುವ ಮಹತ್ವದ ಉದ್ದೇಶವೂ ಐತಿಹಾಸಿಕ ವಸ್ತುಪ್ರದರ್ಶನ ಕಾರ್ಯಕ್ರಮಗಳ ಹಿಂದಿರುತ್ತದೆ ಎಂದರು. ಹಿಂದಿನ ಕಾಲದಲ್ಲಿ ಯಾವುದೇ ರೀತಿಯ ದಾಖಲೀಕರಣ ಅಥವಾ ತಂತ್ರಜ್ಞಾನದ ಸಹಾಯವಿಲ್ಲದೇ ಜ್ಞಾನ-ವಿಜ್ಞಾನದ ಮೌಲ್ಯಗಳು ಪೀಳಿಗೆಯಿಂದ ಪೀಳಿಗೆಗಳಿಗೆ ದಾಟಿಕೊಂಡವು. ಇದೀಗ ಹಳೆಯದ್ದರ ದಾಖಲೀಕರಣಕ್ಕೆ ತಂತ್ರಜ್ಞಾನದ ನೆರವಿದೆ. ವಿದ್ಯಾರ್ಥಿಗಳು ಈ ಆಯಾಮ ಪರಿಗಣಿಸಿ ಐತಿಹಾಸಿಕ, ಪ್ರಾಚೀನ ಅಂಶಗಳನ್ನು ಶೋಧಿಸುವ ಉತ್ಸಾಹ ತೋರಬೇಕು ಎಂದರು.

 

Advertisement

ಈ ಸಂದರ್ಭದಲ್ಲಿ ಪ್ರಕಟಿತವಾದ ವಿಶೇಷ ಸಂಚಿಕೆಗಳನ್ನು ಎಸ್.ಡಿ.ಎಂ ಸಂಸ್ಥೆಗಳ ಕಾರ್ಯದರ್ಶಿ ಡಾ.ಬಿ ಯಶೋವರ್ಮ, ಕಾಲೇಜಿನ ಪ್ರಾಂಶುಪಾಲ ಡಾ.ಸತೀಶ್ಚಂದ್ರ ಬಿಡುಗಡೆಗೊಳಿಸಿದರು. ಭಾರತೀಯ ಪುರಾಭಿಲೇಖ ಸಂಸ್ಥೆಯ ವತಿಯಿಂದ ಡಾ.ಡಿ ವೀರೇಂದ್ರ ಹೆಗ್ಗಡೆ, ಡಾ.ಬಿ ಯಶೋವರ್ಮ ಹಾಗೂ ಡಾ. ಸತೀಶ್ಚಂದ್ರ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಭಾರತೀಯ ಪುರಾಭಿಲೇಖ ಸಂಸ್ಥೆಯ ಅಧ್ಯಕ್ಷಡಾ.ಟಿ.ಎಸ್‍ರವಿಶಂಕರ್, ಉಪಾಧ್ಯಕ್ಷ ಪಿ.ಎನ್ ನರಸಿಂಹಮೂರ್ತಿ, ಕಾರ್ಯಾಧ್ಯಕ್ಷ ಜೈ ಪ್ರಕಾಶ್ ಹಾಗೂ ಭಾರತೀಯ ಸ್ಥಳನಾಮ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಕೃಷೇಂದುರೇ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಡಾ. ಸತೀಶ್ಚಂದ್ರ ಸ್ವಾಗತಿಸಿದರು. ಸೂರ್ಯನಾರಾಯಣ ಭಟ್ ನಿರೂಪಿಸಿದರು. ಟಿ.ಎಸ್‍ರವಿಶಂಕರ್ ವಂದಿಸಿದರು.

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಭೂಮಿಗೆ ಮರಳಿದ ಗಗನಯಾತ್ರಿ ಶುಭಾಂಶು ಶುಕ್ಲಾ
July 15, 2025
9:39 PM
by: ದ ರೂರಲ್ ಮಿರರ್.ಕಾಂ
ಮಂತ್ರಾಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಸತಿ ಗೃಹಗಳ ವ್ಯವಸ್ಥೆಗೆ ಕ್ರಮ
July 15, 2025
9:34 PM
by: ದ ರೂರಲ್ ಮಿರರ್.ಕಾಂ
ಹೃದಯಾಘಾತದಿಂದ ಸಾವುಗಳ ಸಂಖ್ಯೆ ಹೆಚ್ಚಾಗಿಲ್ಲ | ಯಾವುದೇ ಆತಂಕ ಬೇಡ – ಸಚಿವ ಶರಣಪ್ರಕಾಶ್ ಪಾಟೀಲ್
July 15, 2025
9:31 PM
by: The Rural Mirror ಸುದ್ದಿಜಾಲ
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಳೆ | ತುಂಬಿ ಹರಿಯುತ್ತಿರುವ ನದಿಗಳು
July 15, 2025
9:29 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group