ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಉಜಿರೆಯಲ್ಲಿ ನಿರ್ಮಿಸಲಾದ ನೂತನ “ವನರಂಗ” ಬಯಲು ರಂಗಮಂದಿರವನ್ನು ಸೋಮವಾರ ಸಂಜೆ ಗಂಟೆ 5.30ಕ್ಕೆ ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆಯವರು ಉದ್ಘಾಟಿಸುವರು.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸುವರು. ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಕೆ. ಹರೀಶ್‍ಕುಮಾರ್ ಮತ್ತು ಉಜಿರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ. ಶ್ರೀಧರ ಪೂಜಾರಿ ಶುಭಾಶಂಸನೆ ಮಾಡುವರು.
ನಾಟಕೋತ್ಸವ: ನೂತನ ರಂಗಮಂದಿರದಲ್ಲಿ ಡಿ 9 ರಿಂದ 12 ರವರೆಗೆ ಪ್ರತಿ ದಿನ ಸಂಜೆ 6.30 ರಿಂದ ನಾಟಕ ಪ್ರದರ್ಶನ ಆಯೋಜಿಸಲಾಗಿದೆ.
ಸೋಮವಾರ: ಬರ್ಬರೀಕ, (ಧರ್ಮಸ್ಥಳದ ರಂಗಶಿವ ಕಲಾ ಬಳಗದವರಿಂದ), ಮಂಗಳವಾರ: ಮುದ್ದಣ್ಣನ ಪ್ರಮೋಶನ್ ಪ್ರಸಂಗ (ಉಜಿರೆಯ ಎಸ್.ಡಿ.ಎಂ. ಕಲಾಬಳಗದ ಕಲಾವಿದರಿಂದ), ನೀನಾಸಂ ನಾಟಕಗಳು: ಬುಧವಾರ: ರಾಕ್ಷಸ-ತಂಗಡಿ, ಗುರುವಾರ: ಕರ್ಣ ಸಾಂಗತ್ಯ
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel