ಧರ್ಮಸ್ಥಳ: ಧರ್ಮ ಮತ್ತು ಕರ್ತವ್ಯದಲ್ಲಿ ನಿವೃತ್ತಿ ಎಂಬುದು ಇಲ್ಲ. ಸತ್ಯ, ಪ್ರಾಮಾಣಿಕತೆ ಮತ್ತು ಸದಾಚಾರದಿಂದ ಮಾನವನೇ ಮಾಧವನಾಗಬಲ್ಲ. ಒಳ್ಳೆಯವರಾಗಿ ಮತ್ತು ಒಳ್ಳೆಯ ಕೆಲಸವನ್ನೇ ಮಾಡಿ ಇದೇ ಜೀವನ ಸಿದ್ಧಾಂತವಾಗಬೇಕು ಎಂದು ನಿಕಟಪೂರ್ವ ಲೋಕಸಭಾ ಅಧ್ಯಕ್ಷರಾದ ಸುಮಿತ್ರಾ ಮಹಾಜನ್ ಹೇಳಿದರು.
ಅವರು ಸೋಮವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ಲಕ್ಷದೀಪೋತ್ಸವ ಸಂದರ್ಭದಲ್ಲಿ ಆಯೋಜಿಸಿದ ಸರ್ವಧರ್ಮ ಸಮ್ಮೇಳನದ 87ನೇ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿದರು. ನಾವು ಒಳ್ಳೆಯ ವರ್ತನೆಯನ್ನು ಹೊಂದಿದಾಗ ಮಾತ್ರಇತರರೂ ಒಳ್ಳೆಯ ವ್ಯಕ್ತಿಗಳಾಗಿ ರೂಪಿಗೊಳ್ಳಲು ನಾವು ಆದರ್ಶ ವ್ಯಕ್ತಿಗಳಾಗಿ ನಮ್ಮ ವರ್ತನೆಯಿಂದ ಮಾರ್ಗದರ್ಶನ ನೀಡಲು ಸಾಧ್ಯವಾಗುತ್ತದೆ.ಎಂದುಅವರು ಹೇಳಿದರು. ಭಾರತೀಯರ ನಂಬಿಕೆ, ನಡವಳಿಕೆ, ಜೀವನ ಸಿದ್ಧಾಂತ, ನೈತಿಕತೆ ಹಾಗೂ ಜೀವನ ಮೌಲ್ಯಗಳು ವಿಶಿಷ್ಟವಾಗಿವೆ. ದೇಶದ ಹಿತ ಮತ್ತು ಪ್ರಗತಿಗಾಗಿಎಲ್ಲರೂಆದರ್ಶ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು.ಧರ್ಮ ಮತ್ತು ನೈತಿಕ ಹಿನ್ನೆಲೆಯಲ್ಲಿ ಭೌತಿಕ ಸಂಪತ್ತಿನ ಸಂಗ್ರಹ ಮಾಡಬೇಕು. ಪ್ರಾಮಾಣಿಕತೆ ಮತ್ತು ನಿಸ್ವಾರ್ಥ ಭಾವನೆಯಿಂದ ಸರಳ ಜೀವನ ನಡೆಸಬೇಕು. ಎಲ್ಲಾ ಕ್ಷೇತ್ರಗಳಲ್ಲಿ ನಿಷ್ಠೆ ಮತ್ತು ನೈತಿಕತೆ ಇದ್ದಾಗ ಸ್ವ-ಪರ ಹಿತ ಸಾಧನೆಯೊಂದಿಗೆ ದೇಶದ ಪ್ರಗತಿಯಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ ಇಸ್ಕಾನ್‍ನ ಹಿರಿಯ ವಿದ್ವಾಂಸ ಗೌರ್ ಗೋಪಾಲದಾಸ್ ಮಾತನಾಡಿ, ವಿಮಾನಯಾನದಂತೆ ಹುಟ್ಟು ಮತ್ತು ಸಾವು ನಮ್ಮಅಧೀನದಲ್ಲಿಇಲ್ಲ. ಆದುದರಿಂದ ಬದುಕಿನಲ್ಲಿ ನಮಗೆ ಸಿಕ್ಕಿದ ಅವಕಾಶದ ಸದುಪಯೋಗ ಪಡೆದು, ಪ್ರೀತಿ-ವಿಶ್ವಾಸದಿಂದತ್ಯಾಗ ಮತ್ತು ಸೇವಾ ಮನೋಭಾವದಿಂದಉತ್ತಮ ಸಂವಹನ ಕಲೆಯೊಂದಿಗೆಎಲ್ಲರೊಂದಿಗೂ ಮುಕ್ತವಾಗಿ ಬೆರೆತು ಸೌಹಾರ್ದಯುತಜೀವನ ನಡೆಸಬೇಕು. “ಐಸ್‍ಕ್ರೀಂ” ನಂತೆಬದುಕಿನಲ್ಲಿಕರಗಿ ಹೋಗದೆ ಮೇಣದಬತ್ತಿಯಂತೆತಾನೂಕರಗಿಇತರರ ಬದುಕಿಗೂ ಬೆಳಕನ್ನು ನೀಡುವ ದೀಪಗಳಾಗಬೇಕು.ದ್ವೀಪಗಳಾಗಬಾರದು ಎಂದುಅವರು ಸಲಹೆ ನೀಡಿದರು.
ಬದುಕುಎಂಬುದೇ ಸಂಘರ್ಷವಾಗಿದೆ.ಜೀವನದಲ್ಲಿಎದುರಾಗುವ ಸಮಸ್ಯೆಗಳನ್ನು ಮತ್ತು ಸವಾಲುಗಳನ್ನು ಧೈರ್ಯ ಮತ್ತುಆತ್ಮವಿಶ್ವಾಸದಿಂದಎದುರಿಸಬೇಕುಎಂದುಅವರು ಸಲಹೆ ನೀಡಿದರು.ಆತ್ಮಹತ್ಯೆಯಾವುದೇ ಸಮಸ್ಯೆಗೆ ಪರಿಹಾರವಲ್ಲ. ಆದುದರಿಂದದೈಹಿಕಆರೋಗ್ಯಕ್ಕೆ ಗಮನ ಕೊಟ್ಟಂತೆ ಮಾನಸಿಕ ಆರೋಗ್ಯಕ್ಕೂ ಗಮನ ಕೊಡಬೇಕುಎಂದುಅವರು ಹೇಳಿದರು.
ಜೀವನ ಮತ್ತುಧರ್ಮದ ಬಗ್ಯೆ ಮೈಸೂರಿನ ಫೋಕಸ್‍ಅಕಾಡೆಮಿಯ ಮುಖ್ಯಕಾರ್ಯನಿರ್ವಾಹಕ ಡಿ.ಟಿ. ರಾಮಾನುಜಮ್ ಮಾತನಾಡಿ,ಜೀವನದಲ್ಲಿ ನೈತಿಕತೆ ಮುಖ್ಯವಾಗಿದೆ.ಧರ್ಮದ ಪಾಲನೆಯೊಂದಿಗೆ ಬದುಕಿನ ನೈಜತೆಯನ್ನು ತಿಳಿದುಕೊಳ್ಳಬೇಕು.ಮಾನವೀಯ ಮೌಲ್ಯಗಳೊಂದಿಗೆ ಆಶಾವಾದಿಗಳಾಗಿ ಉತ್ಸಾಹದಿಂದ ಸಾರ್ಥಕಜೀವನ ನಡೆಸಬೇಕುಎಂದುಅವರು ಸಲಹೆ ನೀಡಿದರು.
“ರಾಜಕೀಯ ಮತ್ತು ಭಾರತೀಯ” ದ ಬಗ್ಗೆ ಮಂಗಳೂರಿನ ಕದ್ರಿ ನವನೀತ ಶೆಟ್ಟಿ ಮಾತನಾಡಿ,ರಾಜಕೀಯದಲ್ಲಿ ಪ್ರಾಮಾಣಿಕತೆ ಮತ್ತು ನೈತಿಕತೆಕಾಪಾಡಬೇಕುಎಂದು ಸಲಹೆ ನೀಡಿದರು.
ಮಹಾತ್ಮಾಗಾಂಧೀಜಿ ಬಗ್ಗೆ ಮಾತನಾಡಿದ ಬೊಳುವಾರ್ ಮಹಮ್ಮದ್‍ಕುಂಞ, ಸತ್ಯ ಮತ್ತುಅಹಿಂಸೆಯ ಪಾಲನೆಯೊಂದಿಗೆ ನಮ್ಮದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಗಾಂಧೀಜಿಯವರ ಜೀವನ ಸಿದ್ಧಾಂತ ಸಾರ್ವಕಾಲಿಕ ಮೌಲ್ಯ ಹೊಂದಿದೆ.ಅವರ ಆದರ್ಶಗಳನ್ನು ನಮ್ಮದೈನಂದಿನ ಜೀವನದಲ್ಲಿ ಅನುಷ್ಠಾನಗೊಳಿಸಬೇಕು.ಸರಳ ಜೀವನ ಮತ್ತುಉನ್ನತಚಿಂತನೆ ನಮ್ಮ ಬದುಕಿನಧ್ಯೇಯವಾಗಿರಬೇಕುಎಂದುಅವರು ಸಲಹೆ ನೀಡಿದರು.
ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತ ಭಾಷಣ ಮಾಡಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಲೋಕ ಕಲ್ಯಾಣವೇ ಸರ್ವಧರ್ಮಗಳ ಮೂಲ ಉದ್ದೇಶವಾಗಿದೆ. ಸಮಕಾಲೀನ ಸಮಾಜದ ಆಗು ಹೋಗುಗಳಿಗೆ ಲಯಬದ್ಧವಾಗಿ ಸ್ಪಂದಿಸಿ ಧಾರ್ಮಿಕ ವಿಚಾರಗಳ ವಿಮರ್ಶೆಗಳೊಂದಿಗೆ ವಿವೇಕ, ಕ್ಷಮೆ, ಸಹಾನುಭೂತಿ, ಶ್ರದ್ಧೆ, ಪ್ರೀತಿ-ವಿಶ್ವಾಸ ಹಾಗೂ ಸತ್ಯವನ್ನೊಳಗೊಂಡ ನಡತೆಯ ನಾಗರಿಕತೆಯೇಧರ್ಮದ ಮೂಲ ಜೀವದ್ರವ್ಯವಾಗಿದೆಎಂದುಅವರುಹೇಳಿದರು.
Advertisement
ಎ.ಪಿ.ಎಂ.ಸಿ. ಅಧ್ಯಕ್ಷ ಕೇಶವ ಗೌಡ ಬೆಳಾಲು ಧನ್ಯವಾದವಿತ್ತರು.ಉಜಿರೆಯಎಸ್.ಡಿ.ಎಂ. ಕಾಲೇಜಿನಉಪನ್ಯಾಸಕಡಾ.ಶ್ರೀಧರ ಭಟ್‍ಕಾರ್ಯಕ್ರಮ ನಿರ್ವಹಿಸಿದರು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…