Advertisement
ಜಿಲ್ಲೆ

ಧೈರ್ಯ ಮತ್ತು ವಿಶ್ವಾಸವಿದ್ದಲ್ಲಿ ಯಶಸ್ವಿ ಉದ್ಯಮಿಗಳಾಗಬಹುದು

Share

ಧರ್ಮಸ್ಥಳ : ಧೈರ್ಯ ಮತ್ತು ವಿಶ್ವಾಸವಿದ್ದಲ್ಲಿ ಯಶಸ್ವಿ ಉದ್ಯಮಿಗಳಾಗಬಹುದುಎಂದು ಶಾಸಕ ಹರೀಶ್ ಪೂಂಜ ಹೇಳಿದರು.

Advertisement
Advertisement
Advertisement
Advertisement

ಅವರು ಉಜಿರೆಯಲ್ಲಿ ಸ್ವ-ಉದ್ಯೋಗತರಬೇತಿಕೇಂದ್ರದಲ್ಲಿರುಡ್‍ಸೆಟ್ ಯಶಸ್ವೀ ಉದ್ಯಮಿಗಳ ಸಂಘ “ಆಸರೆ”ಆಶ್ರಯದಲ್ಲಿ ಆಯೋಜಿಸಿದ ಉದ್ಯಮಿಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾವಂತ ಯುವಜನತೆಗೆ ನೌಕರಿ ಸಿಗುವುದು ಕಷ್ಟ ಸಾಧ್ಯ. ಆದುದರಿಂದ ಕಠಿಣ ಪರಿಶ್ರಮದೊಂದಿಗೆ ಸ್ವ-ಉದ್ಯೋಗದ ಮೂಲಕ ಸ್ವಾವಲಂಬಿ ಜೀವನ ನಡೆಸಬಹುದು.ತನ್ಮೂಲಕ ಯುವಜನತೆ ಸಾಮಾಜಿಕ ಪರಿವರ್ತನೆಯ ರೂವಾರಿಗಳಾಗಬೇಕು ಎಂದುಅ ವರು ಸಲಹೆ ನೀಡಿದರು.

Advertisement

ವಿಧಾನ ಪರಿಷತ್‍ ಸದಸ್ಯ ಕೆ. ಹರೀಶ್‍ಕುಮಾರ್ ಮಾತನಾಡಿ, ಬದುಕಿನಲ್ಲಿ ಎದುರಾಗುವ ಸಮಸ್ಯೆಗಳನ್ನು, ಸವಾಲುಗಳನ್ನು ಧೃತಿಗೆಡದೆ ಧೈರ್ಯದಿಂದ ಎದುರಿಸಿದಾಗ ಮಾತ್ರಯಶಸ್ಸು ಪಡೆಯಲು ಸಾಧ್ಯವಾಗುತ್ತದೆ. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಪ್ರಾರಂಭಿಸಿದ ರುಡ್‍ಸೆಟ್ ಸಂಸ್ಥೆ ಇಂದುರಾಷ್ಟ್ರಮಟ್ಟದಲ್ಲಿ ಮನ್ನಣೆ ಪಡೆದಿದೆಎಂದುವ ಮೆಚ್ಚುಗೆ ವ್ಯಕ್ತ ಪಡಿಸಿದರು.
ಕಳೆದ ಎಂಟು ವರ್ಷಗಳಲ್ಲಿ ಪ್ರತಿ ವರ್ಷ ಎಸ್.ಎಸ್.ಎಲ್.ಸಿ.ಪಬ್ಲಿಕ್ ಪರೀಕ್ಷೆಯಲ್ಲಿ ಶೇ.ನೂರು ಫಲಿತಾಂಶ ಪಡೆದಗುರುವಾಯನಕೆರೆ ಸರ್ಕಾರಿ ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಜಗನ್ನಾಥ್ ಮತ್ತು ಆಸರೆ ಸಂಘಟನೆಯ ಸಕ್ರಿಯ ಕಾರ್ಯಕರ್ತ ಗೋಪಾಲಕೃಷ್ಣ ಅವರನ್ನು ಗೌರವಿಸಲಾಯಿತು.

ಸಿಂಡಿಕೇಟ್ ಬ್ಯಾಂಕಿನ ಪ್ರಾಂತೀಯ ಪ್ರಬಂಧಕಆರ್.ರಾಘವೇಂದ್ರ, ಮತ್ತು ಪುತ್ತೂರು ಶಾಖಾ ಪ್ರಬಂಧಕಕುಮಾರ್,ರುಡ್‍ಸೆಟ್‍ನ ಹಿರಿಯಉಪನ್ಯಾಸಕರಾದಜೇಮ್ಸ್‍ಅಬ್ರಾಹಂ ಮತ್ತುಅನಸೂಯ, ಸುನಿಲ್ ರೈ ಬೆಳ್ಳಾರೆ ಉಪಸ್ಥಿತರಿದ್ದರು.

Advertisement

“ಆಸರೆ” ಅಧ್ಯಕ್ಷ ವೆಂಕಟ್ರಮಣ ಪುಣಚ ಸ್ವಾಗತಿಸಿದರು.ಕಾರ್ಯದರ್ಶಿ ಪ್ರಶಾಂತ್‍ ಕುದ್ಯಾಡಿ ಧನ್ಯವಾದವಿತ್ತರು. ಕಡಬದ ನಾಗರಾಜ, ಎನ್.ಕೆ.ಮತ್ತುಪ್ರಶಾಂತ್ ಲಾೈಲ ಕಾರ್ಯಕ್ರಮ ನಿರ್ವಹಿಸಿದರು.

ಮುಖ್ಯಾಂಶಗಳು:

Advertisement

2010ರಲ್ಲಿ ರುಡ್‍ಸೆಟ್ ಯಶಸ್ವಿ ಉದ್ಯಮಿಗಳ ಸಂಘ “ಆಸರೆ” ಪ್ರಾರಂಭ.
• ದೇಶದಲ್ಲಿ 27 ರುಡ್‍ಸೆಟ್ ಸಂಸ್ಥೆಗಳು ಹಾಗೂ 586 ಆರ್‍ಸೆಟಿಗಳು ಕಾರ್ಯನಿರ್ವಹಿಸುತ್ತಿವೆ.
• ಅಲ್ಪಾವಧಿತರಬೇತಿ ಮೂಲಕಸ್ವ-ಉದ್ಯೋಗ ಪ್ರಾರಂಭಿಸಲು ಮಾರ್ಗದರ್ಶನ.
• ರುಡ್‍ಸೆಟ್‍ಕಾರ್ಯನಿರ್ವಹಣೆ ಬಗ್ಯೆ 12 ನಿಮಿಷಗಳ ಸಾಕ್ಷ್ಯಚಿತ್ರರೂಪಿಸಲಾಗಿದೆ.
• ಪ್ರತಿ ತಿಂಗಳ ಮೊದಲ ಭಾನುವಾರಉಜಿರೆಯಲ್ಲಿರುವರುಡ್‍ಸೆಟ್ ಸಂಸ್ಥೆಯಲ್ಲಿ “ಆಸರೆ” ಸದಸ್ಯರ ಸಮಾಲೋಚನಾ ಸಭೆ ನಡೆಯುತ್ತದೆ.
• ಆಸರೆ ಮೂಲಕ ದೀನ ದಲಿತರಿಗೆನೆರವು, ಸ್ವಚ್ಛತಾಆಂದೋಲನ, ಜಲಮರುಪೂರಣ ಮೊದಲಾದ ಸೇವಾ ಕಾರ್ಯಗಳನ್ನು ಮಾಡಲಾಗುತ್ತದೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ವಿಶ್ವೇಶ್ವರ ಭಟ್‌ ಬಂಗಾರಡ್ಕ ಅವರಿಂದ ಬಜೆಟ್‌ ವಿಶ್ಲೇಷಣೆ |

‌ಆರ್ಥಿಕತೆಯ ಬಗ್ಗೆ ಸಮರ್ಥವಾಗಿ ವಿಷಯ ಮಂಡಿಸಬಲ್ಲ ಕೃಷಿಕ, ಸಾಮಾಜಿಕ ಮುಖಂಡ ವಿಶ್ವೇಶ್ವರ ಭಟ್‌…

4 hours ago

ಗ್ರಾಮೀಣ, ನಗರ ಪ್ರದೇಶದ ಕಟ್ಟೆಗಳ ಅಭಿವೃದ್ಧಿ – ಧಾರ್ಮಿಕ ಪರಂಪರೆ ಸಂರಕ್ಷಣೆ

ದೇಶಾದ್ಯಂತ ನಗರೀಕರಣ ಬೆಳವಣಿಗೆಯಾದಂತೆ ಸಮುದಾಯದ ಸ್ಥಳಗಳು ಕಣ್ಮರೆಯಾಗಿವೆ. ಕರಾವಳಿ ನಗರದಾದ್ಯಂತ  ಸುಮಾರು 250…

1 day ago

ಮಾನವ-ವನ್ಯಜೀವಿ ಸಂಘರ್ಷ ತಗ್ಗಿಸಲು ಸಕಲ ಕ್ರಮ | ಮುಖ್ಯಮಂತ್ರಿ  ಸಿದ್ದರಾಮಯ್ಯ

ರಾಜ್ಯದ ಕಾಡಂಚಿನ ಪ್ರದೇಶದಲ್ಲಿ  ಮಾನವ ಮತ್ತು  ವನ್ಯಜೀವಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಸರ್ಕಾರ…

1 day ago

ಎಲ್ಲಾ ಕೃಷಿ ಉತ್ಪನ್ನಗಳಿಗೆ ಎಂಎಸ್‌ಪಿ ಕಾನೂನು ಜಾರಿಗೆ ರಾಜ್ಯ ರೈತ ಸಂಘಟನೆಗಳ ಮನವಿ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಾಳೆ ಮಂಡಿಸಲಿರುವ ಕೇಂದ್ರ ಬಜೆಟ್ 2025…

1 day ago