ಹರಿದಾಸ್ ಶೇಣಿ ಗೋಪಾಲಕೃಷ್ಣ ಭಟ್ಟರ ‘ಹರಿಶ್ಚಂದ್ರ)
ಪ್ರಸಂಗ : ರಾಜಾ ಹರಿಶ್ಚಂದ್ರ
(ವಾಗ್ದಾನದಂತೆ ವಿಶ್ವಾಮಿತ್ರ ಮಹರ್ಷಿಗೆ ಸಲ್ಲಬೇಕಾದ ಹೊನ್ನನ್ನು ಪಾವತಿಸಲು ತೊಂದರೆಯಾದಾಗ, ಕೊನೆಗೆ ತನ್ನನ್ನು ತಾನು ‘ವೀರಬಾಹುಕ’ನಿಗೆ ಮಾರುವ ಸಂದರ್ಭ)
“ಮಹನೀಯ…. ಸ್ಮಶಾನದ ಕಾವಲುಗಾರ ನೀನು. ಒಬ್ಬ ಮನಷ್ಯನು ಹುಟ್ಟಿ ಸಾಯುವಲ್ಲಿಯ ವರೆಗೆ ಹಲವಾರು ಕ್ಷೇತ್ರಗಳಲ್ಲಿ ದುಡಿದು ಅನುಭವಿಸಿಕೊಳ್ಳಬೇಕು ಎಂಬ ಹಿರಿಯರ ಮಾತು ಮಿಕ್ಕವರಿಗೆ ಸಿಕ್ಕಲಿಲ್ಲವೋ, ದಕ್ಕಲಿಲ್ಲವೋ, ಆದರೆ ನನಗೆ ಮಾತ್ರ ಸಿಕ್ಕಿದೆ. ಅದನ್ನು ದಕ್ಕಿಸಿಕೊಳ್ಳುವ ಯತ್ನದಲ್ಲಿ ನಾನಿದ್ದೇನೆ. ಸುಡುಗಾಡಿನಲ್ಲಿ ನಾವು ಕಲಿಯಬೇಕಾದ ಅಂಶ ಬೇಕಾದಷ್ಟಿದೆ. ಬದುಕಿದ್ದರೆ ತಾನೆ ‘ನಾನು’, ‘ನನ್ನದು’.. ಆಮೇಲೆ ಅದಕ್ಕೆ ಸಂಬಂಧಿಸಿದಂತಹ ಇತರ ವಿಭಕ್ತಿಗಳ ಸಂಬಂಧ. ಹೇಳಿಕೇಳಿ ನಮ್ಮ ಪೌರಾಣಿಕರು ಭಾವುಕತೆಯಲ್ಲಿ ಸತ್ಯಸ್ವರೂಪನಾದ ಶಿವನ ಆಸ್ಥಾನವೇ ‘ಸ್ಮಶಾನ’ ಅಂತ ಕಲ್ಪಿಸಿದರು. ಎಲ್ಲಿ ಭೌತಿಕವಾದುದೆಲ್ಲಾ ಸ್ಥೂಲವಾಗಿ ಸುಟ್ಟು ಬೂದಿಯಾಗುತ್ತಾ ಇದೆಯೋ ಆ ಸ್ಥಾನವೇ ಶಿವನ ಸ್ಥಾನ ಎಂಬುದಕ್ಕೊಂದು ಸಂಕೇತ.
ಆಯುಷ್ಯದಲ್ಲಿ ಬಹುಭಾಗವನ್ನು ನಾನು ಸಾಗಿ ಬಂದಿದ್ದೇನೆ. ಆದ್ದರಿಂದ ನಿನ್ನ ಆಣತಿಯಂತೆ, ಕಾವಲುಗಾರನಾಗಿದ್ದು ಹೆಣ ಸುಡಬೇಕಾದರೆ ಒಂದು ಹಣದಂತೆ ದೊರಕಿಸು. ನಿನ್ನ ಋಣದಿಂದ ಮುಕ್ತವಾಗುವುದಕ್ಕೆ ನಾನು ಪ್ರಯತ್ನಿಸುತ್ತೇನೆ. ಆದರೆ ಒಂದಿದೆ, ‘ನನ್ನನ್ನೇ ನಾನು ವಿಕ್ರಯಿಸಿಕೊಳ್ಳುವಾಗ ನನಗಿಷ್ಟು ಮೌಲ್ಯ ಅಂತ ಹೇಳಕೂಡದು’. ಯಾವನೂ ತನ್ನ ಬಗ್ಗೆ ಮೌಲ್ಯವನ್ನು ಕಲ್ಪಿಸಿಕೊಳ್ಳಕೂಡದು. ನಮ್ಮ ಬಗ್ಗೆ ನಾವೇ ಮೌಲ್ಯವನ್ನು ಕಲ್ಪಿಸುತ್ತೇವೆಂದಾದರೆ ಸ್ವಾಭಾವಿಕವಾಗಿ ಮಿಕ್ಕವರಿಗೆ ನಾವು ಕಲ್ಪಿಸುವ ಮೌಲ್ಯಕ್ಕಿಂತ ಸ್ವಲ್ಪ ಅಧಿಕವೇ ಆದ ‘ಸ್ವಾರ್ಥ’ ಆಗಿ ಬಿಡುತ್ತದೆ. ಮನುಷ್ಯ ಸಹಜವದು.
ಆದರೆ ನಾನು ನಿನ್ನ ಭೋಗಕ್ಕಾಗಿಯೋ, ಸುಖಕ್ಕಾಗಿಯೋ ವಿಕ್ರಯಿಸಿಕೊಳ್ಳುತ್ತಾ ಇಲ್ಲ. ಪರಮ ಋಷಿ, ಬ್ರಹ್ಮರ್ಷಿ, ನನ್ನ ಪಿತೃಗಳನ್ನು ಉದ್ಧಾರ ಮಾಡಿದ ನನ್ನ ಆತ್ಯಂತಿಕ ಆಚಾರ್ಯಸ್ಥಾನದಲ್ಲಿದ್ದ ವಿಶ್ವಾಮಿತ್ರರು. ಮೊದಲ ವಾಗ್ದಾನದಂತೆ ಅವರ ಋಣದಿಂದ ನಾನು ಮುಕ್ತನಾಗಬೇಕಾದರೆ ಆನೆಯ ಮೇಲೆ ಕಟ್ಟಾಳುವಾದ ಒಬ್ಬನು ನಿಂತು ಕೈಯಲ್ಲಿ ಹಿಡಿದ ಕವಡೆಯನ್ನು ಎತ್ರರಕ್ಕೆ ಹಾರಿಸಿದರೆ ಅದು ಎಷ್ಟು ಔನ್ನತ್ಯವನ್ನು ತೋರಿಸುತ್ತದೋ ಅಷ್ಟು ಎತ್ತರದ ಹೊನ್ನ ರಾಶಿಯನ್ನು ಕೊಡಬೇಕಾಗುತ್ತದೆ. ನಾನು ಹೊನ್ನನ್ನು ಕೊಟ್ಟ ಬಳಿಕ ‘ನಾನು ಸಾಲ ನಿವೃತ್ತಿ ಹೊಂದಿದ್ದೇನೆ’ ಅಂತ ಅವರು ಹೇಳಿದರೆ ಸಾಕು. ಯಾಕೆಂದರೆ ನಿನ್ನ ಉದ್ಯೋಗ ಅಥವಾ ನಿನ್ನದ್ದಾದ ವ್ಯಕ್ತಿತ್ವ ಉಪಯೋಗಿಸಿ, ಕೌಶಿಕರಲ್ಲಿ ನೀನು ಮೌಲ್ಯವನ್ನು ಕಡಿಮೆ ಮಾಡಿಸಿಕೊಳ್ಳುತ್ತಿ ಅಂತಾದರೆ ಅದು ನಿನಗಿದ್ದ ಲಾಭ. ನಾನು ಆ ಲಾಭದಲ್ಲಿ ಕೈ ನೀಡಲಾರೆ…”
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…
ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ 200…