Advertisement
ಯಕ್ಷಗಾನ : ಮಾತು-ಮಸೆತ

ನನ್ನನ್ನೇ ನಾನು ವಿಕ್ರಯಿಸಿಕೊಳ್ಳುವಾಗ ನನಗಿಷ್ಟು ಮೌಲ್ಯ ಅಂತ ಹೇಳಕೂಡದು…..

Share

ಹರಿದಾಸ್ ಶೇಣಿ ಗೋಪಾಲಕೃಷ್ಣ ಭಟ್ಟರ ‘ಹರಿಶ್ಚಂದ್ರ)
ಪ್ರಸಂಗ : ರಾಜಾ ಹರಿಶ್ಚಂದ್ರ

Advertisement
Advertisement

(ವಾಗ್ದಾನದಂತೆ ವಿಶ್ವಾಮಿತ್ರ ಮಹರ್ಷಿಗೆ ಸಲ್ಲಬೇಕಾದ ಹೊನ್ನನ್ನು ಪಾವತಿಸಲು ತೊಂದರೆಯಾದಾಗ, ಕೊನೆಗೆ ತನ್ನನ್ನು ತಾನು ‘ವೀರಬಾಹುಕ’ನಿಗೆ ಮಾರುವ ಸಂದರ್ಭ)

Advertisement

“ಮಹನೀಯ…. ಸ್ಮಶಾನದ ಕಾವಲುಗಾರ ನೀನು. ಒಬ್ಬ ಮನಷ್ಯನು ಹುಟ್ಟಿ ಸಾಯುವಲ್ಲಿಯ ವರೆಗೆ ಹಲವಾರು ಕ್ಷೇತ್ರಗಳಲ್ಲಿ ದುಡಿದು ಅನುಭವಿಸಿಕೊಳ್ಳಬೇಕು ಎಂಬ ಹಿರಿಯರ ಮಾತು ಮಿಕ್ಕವರಿಗೆ ಸಿಕ್ಕಲಿಲ್ಲವೋ, ದಕ್ಕಲಿಲ್ಲವೋ, ಆದರೆ ನನಗೆ ಮಾತ್ರ ಸಿಕ್ಕಿದೆ. ಅದನ್ನು ದಕ್ಕಿಸಿಕೊಳ್ಳುವ ಯತ್ನದಲ್ಲಿ ನಾನಿದ್ದೇನೆ. ಸುಡುಗಾಡಿನಲ್ಲಿ ನಾವು ಕಲಿಯಬೇಕಾದ ಅಂಶ ಬೇಕಾದಷ್ಟಿದೆ. ಬದುಕಿದ್ದರೆ ತಾನೆ ‘ನಾನು’, ‘ನನ್ನದು’.. ಆಮೇಲೆ ಅದಕ್ಕೆ ಸಂಬಂಧಿಸಿದಂತಹ ಇತರ ವಿಭಕ್ತಿಗಳ ಸಂಬಂಧ. ಹೇಳಿಕೇಳಿ ನಮ್ಮ ಪೌರಾಣಿಕರು ಭಾವುಕತೆಯಲ್ಲಿ ಸತ್ಯಸ್ವರೂಪನಾದ ಶಿವನ ಆಸ್ಥಾನವೇ ‘ಸ್ಮಶಾನ’ ಅಂತ ಕಲ್ಪಿಸಿದರು. ಎಲ್ಲಿ ಭೌತಿಕವಾದುದೆಲ್ಲಾ ಸ್ಥೂಲವಾಗಿ ಸುಟ್ಟು ಬೂದಿಯಾಗುತ್ತಾ ಇದೆಯೋ ಆ ಸ್ಥಾನವೇ ಶಿವನ ಸ್ಥಾನ ಎಂಬುದಕ್ಕೊಂದು ಸಂಕೇತ.

ಆಯುಷ್ಯದಲ್ಲಿ ಬಹುಭಾಗವನ್ನು ನಾನು ಸಾಗಿ ಬಂದಿದ್ದೇನೆ. ಆದ್ದರಿಂದ ನಿನ್ನ ಆಣತಿಯಂತೆ, ಕಾವಲುಗಾರನಾಗಿದ್ದು ಹೆಣ ಸುಡಬೇಕಾದರೆ ಒಂದು ಹಣದಂತೆ ದೊರಕಿಸು. ನಿನ್ನ ಋಣದಿಂದ ಮುಕ್ತವಾಗುವುದಕ್ಕೆ ನಾನು ಪ್ರಯತ್ನಿಸುತ್ತೇನೆ. ಆದರೆ ಒಂದಿದೆ, ‘ನನ್ನನ್ನೇ ನಾನು ವಿಕ್ರಯಿಸಿಕೊಳ್ಳುವಾಗ ನನಗಿಷ್ಟು ಮೌಲ್ಯ ಅಂತ ಹೇಳಕೂಡದು’. ಯಾವನೂ ತನ್ನ ಬಗ್ಗೆ ಮೌಲ್ಯವನ್ನು ಕಲ್ಪಿಸಿಕೊಳ್ಳಕೂಡದು. ನಮ್ಮ ಬಗ್ಗೆ ನಾವೇ ಮೌಲ್ಯವನ್ನು ಕಲ್ಪಿಸುತ್ತೇವೆಂದಾದರೆ ಸ್ವಾಭಾವಿಕವಾಗಿ ಮಿಕ್ಕವರಿಗೆ ನಾವು ಕಲ್ಪಿಸುವ ಮೌಲ್ಯಕ್ಕಿಂತ ಸ್ವಲ್ಪ ಅಧಿಕವೇ ಆದ ‘ಸ್ವಾರ್ಥ’ ಆಗಿ ಬಿಡುತ್ತದೆ. ಮನುಷ್ಯ ಸಹಜವದು.

Advertisement

ಆದರೆ ನಾನು ನಿನ್ನ ಭೋಗಕ್ಕಾಗಿಯೋ, ಸುಖಕ್ಕಾಗಿಯೋ ವಿಕ್ರಯಿಸಿಕೊಳ್ಳುತ್ತಾ ಇಲ್ಲ. ಪರಮ ಋಷಿ, ಬ್ರಹ್ಮರ್ಷಿ, ನನ್ನ ಪಿತೃಗಳನ್ನು ಉದ್ಧಾರ ಮಾಡಿದ ನನ್ನ ಆತ್ಯಂತಿಕ ಆಚಾರ್ಯಸ್ಥಾನದಲ್ಲಿದ್ದ ವಿಶ್ವಾಮಿತ್ರರು. ಮೊದಲ ವಾಗ್ದಾನದಂತೆ ಅವರ ಋಣದಿಂದ ನಾನು ಮುಕ್ತನಾಗಬೇಕಾದರೆ ಆನೆಯ ಮೇಲೆ ಕಟ್ಟಾಳುವಾದ ಒಬ್ಬನು ನಿಂತು ಕೈಯಲ್ಲಿ ಹಿಡಿದ ಕವಡೆಯನ್ನು ಎತ್ರರಕ್ಕೆ ಹಾರಿಸಿದರೆ ಅದು ಎಷ್ಟು ಔನ್ನತ್ಯವನ್ನು ತೋರಿಸುತ್ತದೋ ಅಷ್ಟು ಎತ್ತರದ ಹೊನ್ನ ರಾಶಿಯನ್ನು ಕೊಡಬೇಕಾಗುತ್ತದೆ. ನಾನು ಹೊನ್ನನ್ನು ಕೊಟ್ಟ ಬಳಿಕ ‘ನಾನು ಸಾಲ ನಿವೃತ್ತಿ ಹೊಂದಿದ್ದೇನೆ’ ಅಂತ ಅವರು ಹೇಳಿದರೆ ಸಾಕು. ಯಾಕೆಂದರೆ ನಿನ್ನ ಉದ್ಯೋಗ ಅಥವಾ ನಿನ್ನದ್ದಾದ ವ್ಯಕ್ತಿತ್ವ ಉಪಯೋಗಿಸಿ, ಕೌಶಿಕರಲ್ಲಿ ನೀನು ಮೌಲ್ಯವನ್ನು ಕಡಿಮೆ ಮಾಡಿಸಿಕೊಳ್ಳುತ್ತಿ ಅಂತಾದರೆ ಅದು ನಿನಗಿದ್ದ ಲಾಭ. ನಾನು ಆ ಲಾಭದಲ್ಲಿ ಕೈ ನೀಡಲಾರೆ…”

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ನಾ.ಕಾರಂತ ಪೆರಾಜೆ

ಪತ್ರಕರ್ತ , ಕಲಾವಿದ , ಅಂಕಣಕಾರ

Published by
ನಾ.ಕಾರಂತ ಪೆರಾಜೆ

Recent Posts

ಭಾರತದಲ್ಲಿ ಏರಿದ ತಾಪಮಾನ : ಅತ್ತ ತಾಂಜಾನಿಯಾದಲ್ಲಿ ಭಾರೀ ಮಳೆ, ಪ್ರವಾಹ : 155 ಮಂದಿ ಸಾವು

ಭಾರತದಲ್ಲಿ(India) ಉರಿ ಬಿಸಿಲಿನ ತಾಪ(Heat) ಏರುತ್ತಿದ್ದರೆ ತಾಂಜಾನಿಯಾದಲ್ಲಿ (Tanzania) ಕಳೆದ ವಾರದಿಂದ ಭಾರೀ…

4 hours ago

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಮುಂದಿನ ವಾರ ಕಾಡಲಿದೆ ರಣ ಬಿಸಿಲು : ದೂರ ಸಾಗಿದ ಮಳೆ : ಬಿಸಿ ಗಾಳಿಯ ಮುನ್ಸೂಚನೆ

ಮಳೆ ಬರುವ ಕುರುಹೇ ಇಲ್ಲ. ಎಲ್ಲೆಲ್ಲೂ ಬಿಸಿಗಾಳಿಯ ಅಬ್ಬರ, ನೆತ್ತಿ ಸುಡುವ ಸೂರ್ಯ. ರಾಜ್ಯಾದ್ಯಂತ…

4 hours ago

ಹವಾಮಾನ ವೈಪರೀತ್ಯ | ಕೃಷಿ ಕಾರ್ಮಿಕರಿಗೆ ಈಗ ಬಿಸಿಗಾಳಿ ಸಂಕಷ್ಟ | ಕೃಷಿಗೂ ಸಮಸ್ಯೆ-ಕೃಷಿ ಬೆಳವಣಿಗೆ ಕುಂಠಿತ |

ತಾಪಮಾನ ಏರಿಕೆಯಿಂದ ಹಲವು ಕಡೆ ಸಮಸ್ಯೆಯಾಗುತ್ತಿದೆ. ಕೃಷಿ ನಷ್ಟದ ಜೊತೆಗೆ ಗ್ರಾಮೀಣ ಭಾಗದಲ್ಲಿ…

5 hours ago

ಮಳೆಗಾಗಿ ಪುತ್ತೂರು ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನದಲ್ಲಿ‌ಪರ್ಜನ್ಯ ಜಪ |

ಮಳೆಗಾಗಿ ಪುತ್ತೂರಿನ ಶ್ರೀ‌ಮಹಾಲಿಂಗೇಶ್ವರ ದೇವಳದಲ್ಲಿ‌ ಪರ್ಜನ್ಯ ಜ‌ಪ ನೆರವೇರಿತು.

6 hours ago

ವಾರದ ಅತಿಥಿ | ರಾಜಕಾರಣದಲ್ಲಿ “ನೈತಿಕ ಮೌಲ್ಯ” ತುಂಬಬೇಕು | ಸಮಾಜದಲ್ಲಿ”ಅನೇಕಾಂತವಾದ” ಬೆಳೆಯಬೇಕು |

ರಾಜಕಾರಣದಲ್ಲಿ ನೈತಿಕ ಮೌಲ್ಯ ತುಂಬಬೇಕಾದ್ದು ಏಕೆ ? ಸಮಾಜದಲ್ಲಿ ಸಾಮರಸ್ಯ ಮೂಡಲು ಏನು…

8 hours ago

ಮೇ.1 | ಮಳೆಗಾಗಿ ನಡೆಯಲಿದೆ ಪಂಜದಲ್ಲಿ ಪ್ರಾರ್ಥನೆ

ಮಳೆಗಾಗಿ ಸಾಮೂಹಿಕ ಪ್ರಾರ್ಥನೆ, ವಿಶೇಷ ಪೂಜೆ ನಡೆಯಲಿದೆ.

9 hours ago