Advertisement
ಸುದ್ದಿಗಳು

ನನ್ನ ಕಸ ನನ್ನ ಹೊಣೆ : ಜಾಗೃತಿ ಸಂದೇಶ ಸಾರಿದ 24 ಸೈಕಲಿಸ್ಟ್ ಗಳು

Share

ಮಡಿಕೇರಿ: ವಿರಾಜಪೇಟೆ ರೋಟರಿ ಕ್ಲಬ್ ವತಿಯಿಂದ ಕ್ಲಬ್ ಮಹೀಂದ್ರ ಹಾಗೂ ಕೂರ್ಗ್  ಕ್ಲೀನ್ ಸಂಘಟನೆಯ ಸಹಯೋಗದಲ್ಲಿ ಸ್ವಚ್ಛತೆಯ ಜಾಗೃತಿ ಸೈಕಲ್‍ಜಾಥಾ ಆಯೋಜಿಸಲಾಗಿತ್ತು.

ವಿರಾಜಪೇಟೆಯಿಂದ ಕರಡ ಗ್ರಾಮದವರೆಗಿನ 15 ಕಿ.ಮೀ. ಸೈಕಲ್‍ ಜಾಥಾಕ್ಕೆರೋಟರಿ ವಲಯ 6 ರ ಕಾರ್ಯದರ್ಶಿ ಅನಿಲ್ ಎಚ್.ಟಿ. ವಿರಾಜಪೇಟೆಯಲ್ಲಿ ಹಸಿರು ನಿಶಾನೆ ಮೂಲಕ ಚಾಲನೆ ನೀಡಿದರು. ಸ್ವಚ್ಛದೇಶ, ಸ್ವಚ್ಛ ಸಮಾಜದ ಯೋಜನೆ ದೇಶವ್ಯಾಪಿ ಕ್ರಾಂತಿಯಂತಾಗಿದ್ದು ವಿರಾಜಪೇಟೆ ರೋಟರಿ ಸೈಕಲ್‍ ಜಾಥಾದ ಮೂಲಕ ಈ ಸಂದೇಶನ್ನು ವಿನೂತನವಾಗಿ ಸಾರುತ್ತಿರುವುದು ಶ್ಲಾಘನೀಯ ಎಂದು ಅನಿಲ್ ಹೇಳಿದರು.

ವಿರಾಜಪೇಟೆ ರೋಟರಿಯ ಜೋನಲ್ ಲೆಫ್ಟಿನೆಂಟ್ ಡಾ.ಎಸ್.ವಿ.ನರಸಿಂಹನ್ ಮಾತನಾಡಿ, ಸ್ವಚ್ಛತೆಯ ಜಾಗೃತಿ ಪ್ರತೀಯೋರ್ವರಲ್ಲಿಯೂ ಸದಾ ಕಾಲ ಇರುವಂತಾಗಬೇಕು. ಜೀವನಪೂರ್ತಿ ಸಾಮಾಜಿಕ ಹೊಣೆಗಾರಿಕೆಯಂತೆ ಸ್ವಚ್ಛತೆ ಬಗ್ಗೆ ತಿಳುವಳಿಕೆ ಮೂಡಬೇಕೆಂದು ಅಭಿಪ್ರಾಯಪಟ್ಟರು.

ಕೂರ್ಗ್ ಕ್ಲೀನ್ ಸಂಸ್ಥೆಯ ಬಡುವಂಡ ಅರುಣ್ ಅಪ್ಪಚ್ಚು ಮಾಹಿತಿ ನೀಡಿ, 24 ಸೈಕಲಿಸ್ಟ್ ಗಳು ವಿರಾಜಪೇಟೆಯಿಂದ ಕದನೂರು ಗ್ರಾಮಕ್ಕಾಗಿ ಕ್ಲಬ್ ಮಹೀಂದ್ರದವರೆಗೆ ಸೈಕಲಿಂಗ್‍ ಜಾಥಾ ನಡೆಸುತ್ತಿದ್ದು, ಜನರಲ್ಲಿ ಸ್ವಚ್ಛತೆಯ ಮಹತ್ವದ ಬಗ್ಗೆ ಸೈಕಲ್‍ಜಾಥಾದ ಮೂಲಕ ತಿಳುವಳಿಕೆ ಮೂಡಿಸುವ ಪ್ರಯತ್ನ ಇದಾಗಿದೆ. ಈಗಾಗಲೇ ಹಲವಾರು ಕಡೆ ಕೂರ್ಗ್ ಕ್ಲೀನ್ ಸಂಘಟನೆಯಿಂದ ಸ್ವಚ್ಛತಾ ಜಾಗೃತಿ ಅಭಿಯಾನಗಳು ನಡೆದಿದೆ. ನನ್ನ ಕಸ – ನನ್ನ ಹೊಣೆ ಎಂಬುದು ಪ್ರತಿಯೋರ್ವನ ಮನಸ್ಸಿನಲ್ಲಿ ತಾನಾಗಿಯೇ ಮೂಡಿದರೆ ಸ್ವಚ್ಛ ಸಮಾಜದ ಪರಿಕಲ್ಪನೆ ಸುಲಭವಾಗಿ ಈಡೇರುತ್ತದೆ ಎಂದರಲ್ಲದೇ, ಅನೇಕರು ಕೊಡಗಿನ ನದಿಗಳಿಗೆ ಮನೆಯ ತ್ಯಾಜ್ಯ ತಂದು ಸುರಿದು ಪವಿತ್ರ ನದಿಯನ್ನು ಮಲಿನಗೊಳಿಸುತ್ತಿದ್ದಾರೆ. ಈ ಮಾಲಿನ್ಯ ನಿಲ್ಲಬೇಕುಎಂದು ಮನವಿ ಮಾಡಿದರು.

ಕ್ಲೀನ್ ಕೂರ್ಗ್ ಸಂಘಟನೆಯ ಸಂಚಾಲಕ ಪ್ರಶಾಂತ್ , ವಿರಾಜಪೇಟೆ ರೋಟರಿ ಕ್ಲಬ್‍ಅಧ್ಯಕ್ಷ ಕೆ,ಎಚ್, ಆದಿತ್ಯ , ಕ್ಲಬ್ ಮಹೀಂದ್ರ ರೆಸಾರ್ಟ್  ಮ್ಯಾನೇಜರ್ ಜಿಷ್ಣುಉಣ್ಣಿ ಮಾತನಾಡಿದರು. ವಿರಾಜಪೇಟೆರೋಟರಿ ಕಾಯದರ್ಶಿ ಭರತ್‍ರಾಮ್‍ರೈ , ರೋಟರಿ ಸದಸ್ಯರು ಹಾಜರಿದ್ದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಯ ಭಯದಲ್ಲಿ ಕೇರಳದ ರಬ್ಬರ್ ರೈತರು – ತೋಟಗಾರಿಕೆಗೆ ಮುಂದೆ ಏನು?

ಪಶ್ಚಿಮ ಘಟ್ಟದ ESA ಪ್ರಸ್ತಾವನೆ ಮತ್ತೆ ಕೇರಳದ ರಬ್ಬರ್ ಹಾಗೂ ಇತರ ತೋಟಗಾರಿಕಾ…

11 hours ago

ಫ್ಲೈಓವರ್ ಬಳಿಕ ಕಲ್ಲಡ್ಕದಲ್ಲಿ ಏನು ಬದಲಾವಣೆಯಾಗಿದೆ..?

ಕಲ್ಲಡ್ಕದ 2.1 ಕಿ.ಮೀ. ಉದ್ದದ ಫ್ಲೈಓವರ್ ಸಂಚಾರಕ್ಕೆ ಮುಕ್ತವಾದ ಬಳಿಕ ಪೇಟೆಯೊಳಗಿನ ವಾಹನ…

19 hours ago

ಹಲಸಿನಂತೆಯೇ ಕಾಣುವ ಈ ಹಣ್ಣು ನಿಮಗೆ ಗೊತ್ತೇ?

ಹಲಸಿನ ಹಣ್ಣಿನಂತೆ ಕಾಣುವ ಚೆಂಪೆಡಕ್ ಹಣ್ಣು ರುಚಿ ಮತ್ತು ಸುವಾಸನೆಯ ಜತೆಗೆ ವಿಟಮಿನ್‌…

20 hours ago

ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಮಹಿಳೆಯರ ಓಟಕ್ಕೆ ಚಿನ್ನದ ಹೊಳಪು – 4×400 ಮೀ. ರಿಲೇಯಲ್ಲಿ ಭರ್ಜರಿ ಗೆಲುವು

ಏಷ್ಯನ್ ಗೇಮ್ಸ್‌ನಲ್ಲಿ ಮಹಿಳೆಯರ 4×400 ಮೀಟರ್ ರಿಲೇಯಲ್ಲಿ ಭಾರತ 3:29.69 ಸಮಯದೊಂದಿಗೆ ಚಿನ್ನ…

21 hours ago

ಕಾಳುಮೆಣಸು ಮಾರುಕಟ್ಟೆಯಲ್ಲಿ ಏನಾಗುತ್ತಿದೆ?

ಆಗಮನ ಕಡಿಮೆಯಾಗಿದ್ದರೂ ದೇಶದ ಕಾಳುಮೆಣಸು ಬೆಲೆಯಲ್ಲಿ ಇಳಿಕೆ ಕಂಡುಬಂದಿದ್ದು, ದಾಸ್ತಾನು ಮತ್ತು ಬೇಡಿಕೆ…

1 day ago

ಹವಾಮಾನ ವರದಿ | 29-09-2026 | ಅ.6 ರವರೆಗೆ ಹಲವು ಜಿಲ್ಲೆಗಳಲ್ಲಿ ಮಳೆಯ ಸಾಧ್ಯತೆ

ಅರಬ್ಬಿ ಸಮುದ್ರದ ಗಾಳಿಯು ಶ್ರೀಲಂಕಾ ಹಾಗೂ ತಮಿಳುನಾಡು ಕರಾವಳಿ ಮೂಲಕ ರಾಜ್ಯಕ್ಕೆ ಪ್ರವೇಶಿಸುತ್ತಿರುವ…

1 day ago