(ಹರಿದಾಸ್ ಶೇಣಿ ಗೋಪಾಲಕೃಷ್ಣ ಭಟ್ಟರ ‘ಚಾರ್ವಾಕ’)
ಪ್ರಸಂಗ : ತ್ರಿಪುರ ಮಥನ
(ಸಂದರ್ಭ : ನಾರದನ ಸೂಚನೆಯಂತೆ ತ್ರಿಪುರಾಸುರರ ಹನನಕ್ಕಾಗಿ ಅವರ ಪತ್ನಿಯರ ಶೀಲವನ್ನು ಶಿಥಿಲಗೊಳಿಸಲು ನಾರಾಯಣನನು ಚಾರ್ವಾಕನಾಗುತ್ತಾನೆ)
“… ತ್ರಿಪುರರಿಗೆ ಏನಿದೆ ಸಾಮಥ್ರ್ಯ? ಬ್ರಹ್ಮನ ವರ ಮಾತ್ರ. ಆದರೆ ಅವರ ಚಿರಂಜೀವಿತಕ್ಕೆ ಕಾರಣ- ‘ನಮ್ಮ ಶಿವ ದೇವರು ವಿಷ ಕುಡಿದರೂ ಸಾಯಲಿಲ್ಲ’ ಅಂತ ಭಾವುಕರು ಹೇಳ್ತಾರಲ್ಲ. ‘ಯಾಕೆ ಶಿವ ಸಾಯಲಿಲ್ಲ’? ಶಿವದೇವರ ಅರ್ಧ ಶರೀರ ಸರ್ವಮಂಗಳೆಯಾದ ಪಾರ್ವತಿ. ಸತಿಯಾದವಳು ತನ್ನ ಮಾಂಗಲ್ಯದ ಪ್ರಭಾವದಿಂದ ಸರ್ವಮಂಗಳೆ, ಪೂರ್ಣಮಂಗಳೆಯಾಗಿರುತ್ತಾಳೆ. ಅವಳ ಮಾಂಗಲ್ಯದ ಪ್ರಭಾವ ಇದ್ದುದರಿಂದ ಗಂಡ ಸಾಯಬೇಕು ಅಂತ ಹೊರಟರೂ ಸಾಯುವುದಕ್ಕೆ ಆ ಮಂಗಳಸೂತ್ರ ಬಿಡುವುದಿಲ್ಲ. ಇದು ಪ್ರಪಂಚಕ್ಕೆ ಬಹು ದೊಡ್ಡದಾದ ಪಾಠ. ಹಾಗಾಗಿಯೇ ವಿವಾಹ ಸಂಸ್ಕಾರದಲ್ಲಿ ಗಂಡನಾದವನು ಕಾಮನನ್ನು ಸುಟ್ಟವನೂ ಆಗಿರಬೇಕು. ಕಾಮನನ್ನು ಗೆದ್ದವನೂ ಆಗಬೇಕು. ಕಾಮಜನಕನಾಗಿರಬೇಕು. ಕಾಮ ವಿರೋಧಿಯಾಗಬೇಕು. ಅಂತಹ ಗಂಡನನ್ನು ಯಾವಳು ಆರಿಸಿಕೊಳ್ಳುತ್ತಾಳೋ ಅವಳು ಪೂರ್ಣಮಂಗಳೆಯೂ, ಸರ್ವಮಂಗಳೆಯೂ ಆಗಿರುತ್ತಾಳೆ..”
ಬಿತ್ತನೆ ಬೀಜ ಮತ್ತು ರಸಗೊಬ್ಬರವನ್ನು ಕಾಳಸಂತೆಯಲ್ಲಿ ಮಾರಾಟಮಾಡುವವರು ಮತ್ತು ಕೃತಕ ಅಭಾವ ಸೃಷ್ಟಿಸುವವರ…
ರೈತರು ಉತ್ತಮ ಇಳುವರಿ ಪಡೆಯಲು ಡಿಎಪಿ ಗೊಬ್ಬರಕ್ಕೆ ಪರ್ಯಾಯವಾಗಿ ಸಂಯುಕ್ತ ರಸಗೊಬ್ಬರ ಬಳಸಲು…
‘ಏಕಲವ್ಯ’ – ಈ ಪದವು ಸಾಧನೆಯ ಐಕಾನ್. ಪರ್ಯಾಯ ಪದ. ಸಾಧನೆಗೆ ಜಾತಿ,…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಸುಳ್ಯ ತಾಲೂಕಿನ ಸಂಪಾಜೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ "ಮಹಿಳಾ ಗ್ರಾಮಸಭೆ" ಯು ಈಚೆಗೆ…
ಕರ್ನಾಟಕ ಲಲಿತಕಲಾ ಅಕಾಡೆಮಿಯಿಂದ ನಡೆದ ಕಲಾ ಸ್ಪರ್ಧೆಯಲ್ಲಿ ಸಂಸ್ಕೃತಿಯ ಚಲನೆ ಎನ್ನುವ ಕಲಾ…