ಸವಣೂರು: ಪುತ್ತೂರು ತಾಲೂಕಿನಲ್ಲಿ ವಲ್ಮಿಕ (ಹುತ್ತ)ಕ್ಕೆ ಪೂಜೆ ಸಲ್ಲುವ ಏಕೈಕ ಕ್ಷೇತ್ರ ಹಾಗೂ ಕಾರಣಿಕ ಸಾನಿಧ್ಯ ಕೊಳ್ತಿಗೆ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಮಹೋತ್ಸವ ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ಡಿ.1 ಮತ್ತು ಡಿ.2 ರಂದು ನಡೆಯಿತು.
ಡಿ.1ರ ರಾತ್ರಿ ವಿಶೇಷ ಕಾರ್ತಿಕ ಪೂಜೆ ನಡೆಯಿತು. ಡಿ.2ರಂದು ಬೆಳಿಗ್ಗೆ ಗಣಪತಿ ಹೋಮ, ಕ್ಷೇತ್ರದ ನಾಗನಕಟ್ಟೆಯಲ್ಲಿ ನಾಗತಂಬಿಲ, ಸಾಮೂಹಿಕ ಆಶ್ಲೇಷ ಬಲಿ ಸೇವೆ , ಮದ್ಯಾಹ್ನ ಚಂಪಾಷಷ್ಠಿ ಮಹೋತ್ಸವ, ಹೂವಿನ ಪೂಜೆ, ವಿಶೇಷ ಪೂಜೆ, ದೈವಸ್ಥಾನದಲ್ಲಿ ಪರಿವಾರ ದೈವಗಳಿಗೆ ತಂಬಿಲ ಸೇವೆ, ಪ್ರಸಾದ ವಿತರಣೆ ಸಾರ್ವಜನಿಕ ಅನ್ನಸಂತರ್ಪಣೆ ಸೇವೆಗಳು ನಡೆಯಿತು.
ನಳೀಲು ಶ್ರೀಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಹುತ್ತಕ್ಕೆ ಆರಾಧನೆ ನಡೆಯುತ್ತದೆ. ಆದ್ದರಿಂದ ಇದು ಭಕ್ತರ ಪಾಲಿನ ಶ್ರದ್ದೆಯ ಹಾಗೂ ಭಕ್ತಿಯ ಕ್ಷೇತ್ರವಾಗಿದೆ. ಪುತ್ತೂರು ತಾಲೂಕಿನಲ್ಲಿ ಹುತ್ತಕ್ಕೆ ಸೇವೆ ಪಡೆಯುವ ಏಕೈಕ ಕ್ಷೇತ್ರವಾಗಿರುವ ಇಲ್ಲಿ ಕಂಕಣ ಭಾಗ್ಯಕ್ಕಾಗಿ, ಸಂತಾನ ಭಾಗ್ಯಕ್ಕೆ, ಉದ್ಯೋಗ, ಇಷ್ಟಾರ್ಥ ಸಿದ್ದಿಗೆ, ವಿದ್ಯೆಗಾಗಿ ಪೂಜೆ ಸಲ್ಲಿಸಿದರೆ ಫಲ ಪ್ರಾಪ್ತಿ ಆಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.
ಕ್ಷೇತ್ರದಲ್ಲಿ ಷಷ್ಠಿ ವ್ರತಾಚರಣೆಗೆ ಮಹತ್ವವಿದ್ದು, ಹೆಚ್ಚು ವೃತದಾರಿಗಳು ಪಾಲ್ಗೊಂಡಿದ್ದರು. ಇಲ್ಲಿ ಹುತ್ತದ ರೂಪದಲ್ಲಿರುವ ಸುಬ್ರಹ್ಮಣ್ಯನಿಗೆ ರಂಗಪೂಜೆ, ಹೂವಿನ ಪೂಜೆ, ರಾಹು ಜಪ, ಆಶ್ಲೇಷ ಬಲಿ, ಕುಂಕುಮಾರ್ಚನೆ, ಕಾರ್ತಿಕ ಪೂಜೆ, ನಾಗನ ಕಟ್ಟೆಯಲ್ಲಿ ನಾಗತಂಬಿಲ ಹಾಗೂ ಇತರ ಸೇವೆಗಳಾದ ಆಶ್ಲೇಷ ಬಲಿ, ಸರ್ಪ ಸಂಸ್ಕಾರ, ನವಗ್ರಹ ಶಾಂತಿ ಹೋಮ ನಡೆಯುತ್ತದೆ.
ಈ ಸಂದರ್ಭದಲ್ಲಿ ದೇವಳದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ, ಮೊಕ್ತೇಸರರಾದ ಮೋಹನ್‍ದಾಸ್ ರೈ, ಡಾ.ಸುಚೇತಾ ಜೆ.ಶೆಟ್ಟಿ, ನಾರಾಯಣ ರೈ ಮೊದೆಲ್ಕಾಡಿ, ಎನ್ ಚಂದ್ರಶೇಖರ್ ರೈ, ಕಿಶೋರ್ ಕುಮಾರ್, ಅರುಣ್ ಕುಮಾರ್, ಸತೀಶ್ ರೈ, ಪ್ರವೀಣ್ ಕುಮಾರ್, ಅರ್ಚಕ ಶ್ರೀನಿವಾಸ್ ಹೆಬ್ಬಾರ್, ಹರಿನಾರಾಯಣ ಮನೋಳಿತ್ತಾಯ ಭಕ್ತಾದಿಗಳು ಉಪಸ್ಥಿತರಿದ್ದರು.
ಭಾರತೀಯ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಮತ್ತು ಇತರ ಮೂವರು ಸಿಬ್ಬಂದಿಯನ್ನು…
ಸಾಮಾಜಿಕ ವ್ಯವಸ್ಥೆಯಲ್ಲಿ ‘ಸೇವೆ’ಗೆ ಮೌಲ್ಯ ನಿರ್ಧರಿಸಲು ಕಷ್ಟಸಾಧ್ಯ. ಆತ್ಮಾರ್ಥ ಸೇವೆಗಳು ಸದ್ದಾಗುವುದಿಲ್ಲ. ಫಕ್ಕನೆ…
15.07.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…
ಧಾತ್ರಿ ಕೆ ರಾವ್ , 7ನೇ ತರಗತಿ ಶ್ರೀ ಅನ್ನಪೂರ್ಣೇಶ್ವರಿ ವಿದ್ಯಾಮಂದಿರ, ನಿಲುವಾಗಿಲು,…
ಭವಿಷ್ಯ ಕೆ ಪಿ, 8 ನೇ ತರಗತಿ, ಸೈಂಟ್ ಆನ್ಸ್ ಇಂಗ್ಲಿಷ್ ಮೀಡಿಯಂ…
ರಾಜ್ಯದ ವಿವಿದೆಡೆ ಸದ್ಯ ಸಾಧಾರಣ ಮಳೆಯಾಗುತ್ತಿದೆ. ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಕೂಡಾ…