ಪಂಜ: ಸುಳ್ಯ ತಾಲೂಕಿನ ಹಿರಿಯ ಸಹಕಾರಿ, ಸಾಮಾಜಿಕ ರಾಜಕೀಯ ಧುರೀಣ ಜಾಕೆ ಮಾಧವ ಗೌಡರಿಗೆ 70 ಸಂವತ್ಸರಗಳು ತುಂಬಿದ ಹಿನ್ನಲೆಯಲ್ಲಿ ಅವರ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲು ಅವರ ಅಭಿಮಾನಿಗಳು ಮತ್ತು ಹಿತೈಷಿಗಳು ನಿರ್ಧರಿಸಿದ್ದಾರೆ.
ಅ. 18ರಂದು ಪಂಜದ ಶಾರದಾಂಬಾ ಭಜನಾ ಮಂದಿರದ ಸಭಾಭವನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ಕುರಿತಂತೆ ಅಂತಿಮ ನಿರ್ಧಾರ ಕೈಗೊಳ್ಳಲಾಯಿತು. ಸಮಾರಂಭದ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಸಲಾಯಿತು. ಅಭಿನಂದನಾ ಸಮಿತಿ ಗೌರವಾಧ್ಯಕ್ಷ ಟಿ.ಜಿ.ಮುಡೂರು, ಅಧ್ಯಕ್ಷ ಪರಮೇಶ್ವರ ಗೌಡ ಬಿಳಿಮಲೆ, ಪ್ರಧಾನ ಕಾರ್ಯದರ್ಶಿ ಶಶಿಧರ ಪಳಂಗಾಯ, ಕೋಶಾಧಿಕಾರಿ ಸುರೇಶ್‌ಕುಮಾರ್ ನಡ್ಕ ಉಪಸ್ಥಿತರಿದ್ದರು.
ನವೆಂಬರ್ 16ರಂದು ಸಂಜೆ ಪಂಜ ಸೊಸೈಟಿ ಬಳಿಯಿಂದ ಮೆರವಣಿಗೆ ನಡೆಸಿ ಬಳಿಕ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇಗುಲದ ಸಭಾಭವನದಲ್ಲಿ ಅಭಿನಂದನಾ ಕಾರ್ಯಕ್ರಮ ನಡೆಸುವುದು, ಸಮಾರಂಭದಲ್ಲಿ ಜಯಪ್ರಕಾಶ್ ಹೆಗ್ಡೆ, ಡಾ. ಮೋಹನ್ ಆಳ್ವ, ಡಾ.ಎಂ.ಎನ್.ರಾಜೇಂದ್ರಕುಮಾರ್, ಡಾ.ಪುರುಷೋತ್ತಮ ಬಿಳಿಮಲೆ, ಶಾಸಕ ಎಸ್.ಅಂಗಾರ, ಡಾ.ಕೆ.ವಿ.ಚಿದಾನಂದ ಮೊದಲಾದ ಗಣ್ಯರನ್ನು ಆಹ್ವಾನಿಸುವುದು, ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವುದು ಮೊದಲಾದ ವಿಚಾರಗಳ ಬಗ್ಗೆ ಚರ್ಚಿಸಲಾಯಿತು.ಸಮಾರಂಭದಲ್ಲಿ ಜಾಕೆ ಮಾಧವ ಗೌಡರ ಕುರಿತಾದ ಸಾಕ್ಷ್ಯಚಿತ್ರ ಬಿಡುಗಡೆ ಹಾಗೂ ಸಮಾರಂಭದ ಬಳಿಕ ಪೂರ್ಣ ಪ್ರಮಾಣದ ಅಭಿನಂದನಾ ಗ್ರಂಥದ ಸಮರ್ಪಣೆ ಕುರಿತು ನಿರ್ಧಾರ ಕೈಗೊಳ್ಳಲಾಯಿತು.
ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ಸವಣೂರು ವಿದ್ಯಾರಶ್ಮಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಸೀತಾರಾಮ ಕೇವಳ, ಪತ್ರಕರ್ತರಾದ ಹರೀಶ್ ಬಂಟ್ವಾಳ್, ದುರ್ಗಾಕುಮಾರ್ ನಾಯರ್‌ಕೆರೆ, ಲಯನ್ಸ್ ವಲಯಾಧ್ಯಕ್ಷ ಬಿಟ್ಟಿ ಬಿ. ನೆಡುನಿಲಂ, ಬಾಲಕೃಷ್ಣ ಗೌಡ ಕುದ್ವ ಮೊದಲಾದವರು ಸಲಹೆ ಸೂಚನೆಗಳನ್ನಿತ್ತರು.
ಅಭಿನಂದನಾ ಸಮಿತಿಯ ಪ್ರಧಾನ ಸಂಚಾಲಕ ಬಾಲಕೃಷ್ಣ ಪುತ್ಯ, ಶ್ರೇಯಾಂಸ್ ಕುಮಾರ್ ಶೆಟ್ಟಿಮೂಲೆ, ವಿಶ್ವನಾಥ ಜಾಕೆ, ಪುರುಷೋತ್ತಮ ದಂಬೆಕೋಡಿ, ಸವಿತಾರ ಮುಡೂರು, ಕರುಣಾಕರ ಎಣ್ಣೆಮಜಲು, ತುಕರಾಂ ಏನೆಕಲ್, ದೇವಿಪ್ರಸಾದ್ ಜಾಕೆ, ಬಾಲಕೃಷ್ಣ ಗೌಡ ಮೂಲೆಮನೆ, ಸಂತೋಷ್ ಜಾಕೆ, ಪ್ರವೀಣ್ ಮುಂಡೋಡಿ, ಸೋಮಶೇಖರ ನೇರಳ, ಮಹಾಬಲ ಕುಳ, ನೇಮಿರಾಜ್ ಪಲ್ಲೋಡಿ, ಸುಬ್ಬಪ್ಪ ಕಲ್ಲುಗುಂಡಿ, ಮಧುಪಂಜ, ಅನುರಾಜ್ ಕಕ್ಯಾನ, ಜಯರಾಮ್ ಕಲ್ಲಾಜೆ, ವಾಸುದೇವ ಮೇಲ್ಪಾಡಿ, ನಾಗೇಶ್ ಕಿನ್ನಿಕುಮ್ರಿ, ದ್ರುವಕುಮಾರ್ ಕಂಬಳ, ಸುಧಾಕರ ಎಂ., ಚಿನ್ನಪ್ಪ ಸಂಕಡ್ಕ, ಲಕ್ಷ್ಮಣ ಗೌಡ ಬೇರ್ಯ, ಹರಿಯಪ್ಪ ಎಸ್.ಪಿ., ವೆಂಕಪ್ಪ ಎನ್.ಪಿ., ಪುರುಷೋತ್ತಮ ಗೌಡ, ಪುರುಷೋತ್ತಮ ಶೆಟ್ಟಿ, ಪ್ರಶಾಂತ್ ರೈ, ಚೇತನ್ ತಂಟೆಪ್ಪಾಡಿ, ಮೇದಪ್ಪ, ತೀರ್ಥಾನಂದ ಕೊಡೆಂಕಿರಿ, ಶರತ್‌ಕುಮಾರ್, ಚಿದಾನಂದ ಬಿಳಿಮಲೆ, ಮಹಾಲಿಂಗ ಸಂಪ ಮೊದಲಾದರು ಉಪಸ್ಥಿತರಿದ್ದರು.