ಸುಳ್ಯ: ಸುಳ್ಯ ನಗರ ಸೇರಿದಂತೆ ತಾಲೂಕಿನಲ್ಲಿ ವಿಜೃಂಭಣೆಯ ಆಯುಧ ಪೂಜಾ ಉತ್ಸವ ನಡೆಯಿತು. ತಾಲೂಕಿನ ವಿವಿಧ ದೇವಸ್ಥಾನಗಳಲ್ಲಿ ನವರಾತ್ರಿ ಮಹೋತ್ಸವದ ವಿಜೃಂಭಣೆಯ ಮಧ್ಯೆಯೇ ಸೋಮವಾರ ಆಯುಧ ಪೂಜೆ’ಯ ಸಂಭ್ರಮ ಕಂಡು ಬಂತು.
ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನ ಸೇರಿದಂತೆ ತಾಲೂಕಿನ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯಿತು. ದೇವಸ್ಥಾನಗಳಲ್ಲಿ ನಡೆದ ಆಯುಧ ಪೂಜೆಯಲ್ಲಿ ಸಾವಿರಾರು ವಾಹನಗಳನ್ನು ಪೂಜಿಸಲು ತರಲಾಗಿತ್ತು.
ವಿವಿಧ ಸರಕಾರಿ ಕಚೇರಿಗಳಲ್ಲಿ, ವಿವಿಧ ಸಂಸ್ಥೆಗಳ ಕಚೇರಿ, ಅಂಗಡಿ, ಗ್ಯಾರೇಜ್, ಮಳಿಗೆ ಸಹತ ನಗರ ಮತ್ತು ಗ್ರಾಮೀಣ ಪ್ರದೇಶ ಸೇರಿ ವಿವಿಧೆಡೆ ಸಂಭ್ರಮದಿಂದ ಆಯುಧ ಪೂಜೆ ನಡೆಯಿತು. ಎಲ್ಲೆಡೆ ವರ್ಣಮಯ ಶೃಂಗಾರವನ್ನು ಮಾಡಲಾಗಿತ್ತು. ಸಾವಿರಾರು ವಾಹನಗಳ ಪೂಜೆ ನಡೆಸಲಾಯಿತು. ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ ಮತ್ತು ದಸರಾ ಉತ್ಸವ ಸಮಿತಿಯ ನೇತೃತ್ವದಲ್ಲಿ ನಡೆಯುತ್ತಿರುವ ಸುಳ್ಯ ಶಾರದಾಂಬಾ ಉತ್ಸವದ ವೇದಿಕೆಯಲ್ಲಿಯೂ ಆಯುಧ ಪೂಜೆ ನಡೆಯಿತು. ನೂರಾರು ವಾಹನಗಳಿಗೆ ಪೂಜೆ ಸಲ್ಲಿಸಲಾಯಿತು.
ಸೋಮವಾರ ಬೆಳಿಗ್ಗೆ ಆರಂಭಗೊಂಡ ಆಯುಧ ಪೂಜಾ ಉತ್ಸವ ರಾತ್ರಿಯವರೆಗೂ ಮುಂದುವರಿಯಿತು.
ಸರಕಾರಿ ಮತ್ತು ಖಾಸಗಿ ಬಸ್‌ಗಳ ಸಹಿತ ಎಲ್ಲಾ ವಾಹನಗಳನ್ನು ಶ್ರೀಗಂಧ, ವೈವಿಧ್ಯಮಯ ಹೂವುಗಳಿಂದ ಅಲಂಕರಿಸಲಾಗಿತ್ತು. ಆಯುಧ ಪೂಜೆ ಪ್ರಯುಕ್ತ ಹೂ, ಹಣ್ಣು ಹಂಪಲು, ತೆಂಗಿನ ಕಾಯಿ, ನಿಂಬೆ ಹಣ್ಣಿಗೆ ಭಾರೀ ಬೇಡಿಕೆ ಇತ್ತು. ರಸ್ತೆ ಬದಿಗಳಲ್ಲಿಯೂ ಹೂವಿನ ಮಾರಾಟದ ಭರಾಟೆ ಕಂಡು ಬಂದಿತ್ತು. ಸೇವಂತಿಗೆ, ಮಲ್ಲಿಗೆ ಮತ್ತಿತರ ಹೂವುಗಳಿಗೆ ಹೆಚ್ಚಿನ ಬೇಡಿಕೆ ಕಂಡು ಬಂದಿತ್ತು. ಆಯುಧ ಪೂಜೆಗೆ ಲಿಂಬೆಹಣ್ಣು ಮತ್ತು ಹಸಿ ಮೆಣಸಿನ ಕಾಯಿಯನ್ನು ಹೆಚ್ಚಾಗಿ ಬಳಸಲಾಗುತ್ತಿದ್ದು ಹೆಚ್ಚಿನ ಬೇಡಿಕೆ ಇತ್ತು ಎನ್ನುತ್ತಾರೆ ವ್ಯಾಪಾರಿಗಳು.
ಹಲವು ಕಡೆಗಳಲ್ಲಿ ಭಾನುವಾರವೂ ವಾಹನಗಳ ಪೂಜೆ ನಡೆದಿತ್ತು.
ವಿಧಾನ ಪರಿಷತ್ ಇಂದು ಬೆಳಗ್ಗೆ ಸಮಾವೇಶಗೊಳ್ಳುತ್ತಿದ್ದಂತೆ ಸಭಾಪತಿ ಬಸವರಾಜ ಹೊರಟ್ಟಿ ಪ್ರಶ್ನೋತ್ತರ ಕಲಾಪಕ್ಕೆ…
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಮನಗರ ಜಿಲ್ಲೆಯ ರೈತರಿಂದ ರಾಗಿ ಖರೀದಿಸಲು ಜಿಲ್ಲೆಯ…
ಬೇಸಿಗೆ ಸಮಯದಲ್ಲಿ ಅಗತ್ಯಕ್ಕೆ ತಕ್ಕಂತೆ ವಿದ್ಯುತ್ ಪೂರೈಸುತ್ತಿದ್ದು, ರಾಜ್ಯದಲ್ಲಿ ವಿದ್ಯುತ್ ಮಾರ್ಗವನ್ನು ಮತ್ತಷ್ಟು…
ಹಕ್ಕಿ ಜ್ವರದ ಪ್ರಕರಣಗಳು ರಾಜ್ಯದ ಅಲ್ಲಲ್ಲಿ ವರದಿಯಾಗುತ್ತಿದ್ದು, ಜನರು ಭಯಪಡುವ ಅಗತ್ಯವಿಲ್ಲ ಎಂದು…
ರಾಜ್ಯದಲ್ಲಿದ್ದ 56 ಲಕ್ಷ ಕಟ್ಟಡ ಕಾರ್ಮಿಕರ ಕಾರ್ಡ್ಗಳನ್ನು ತಪಾಸಣೆ ನಡೆಸಿ 26 ಲಕ್ಷ…
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ,…