Advertisement
ಸುದ್ದಿಗಳು

ನಾಲ್ಕು ದಶಕಗಳ ಕಾಲ ಕಳಂಕರಹಿತವಾಗಿ ಕ್ಯಾಂಪ್ಕೋ ವ್ಯವಹಾರ ನಡೆಸಿರುವುದೇ ಮಹತ್ತರ ಸಾಧನೆ

Share

ಮಂಗಳೂರು: ವಾರಣಾಶಿ ಸುಬ್ರಾಯ ಭಟ್ಟರಿಂದ ಸ್ಥಾಪಿತವಾದ  ಕ್ಯಾಂಪ್ಕೊ ಸಂಸ್ಥೆಯು ತನ್ನ ನಾಲ್ಕು ದಶಕಗಳ ಕಾಲ ಕಳಂಕರಹಿತವಾಗಿ ವ್ಯವಹಾರ ನಡೆಸಿರುವುದೇ ಒಂದು ಮಹತ್ತರ ಸಾಧನೆ ಎಂದು ಹಿರಿಯ ಸಹಕಾರಿ, ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ನುಡಿದರು.

Advertisement
Advertisement
Advertisement

ಅವರು ಮಂಗಳೂರಿನಲ್ಲಿರುವ ಕ್ಯಾಂಪ್ಕೊದ ಪ್ರಧಾನ ಕಚೇರಿಯಲ್ಲಿ ಜರುಗಿದ ಕ್ಯಾಂಪ್ಕೊದ ಸಂಸ್ಥಾಪನಾ ದಿನಾಚಾರಣೆಯನ್ನು ಉದ್ಘಾಟಿಸಿ ಮಾತನಾಡುತ್ತಾ ಅವರು ಕ್ಯಾಂಪ್ಕೊದ ಸ್ಥಾಪಕಾಧ್ಯಕ್ಷರಾದ  ವಾರಣಾಶಿಯವರ ಸಾಧನೆಯ ಗುಣಗಾನ ಮಾಡಿದರು. ವಾರಣಾಶಿ ಸುಬ್ರಾಯ ಭಟ್ಟರು ಓರ್ವ ಅಪೂರ್ವ ಸಂಘಟಕ. ಕ್ಯಾಂಪ್ಕೊ ಸ್ಥಾಪನೆಗಾಗಿ ಕರ್ನಾಟಕ ಕೇರಳಗಳಲ್ಲಿ ಅಡಿಕೆ ಕೊಕ್ಕೊ ಬೆಳೆಗಾರರನ್ನು ಸಂಪರ್ಕ ಮಾಡಿ ಅನೇಕ ಸಮಾವೇಶಗಳನ್ನು ನಡೆಸಿ ಬೆಳೆಗಾರರ ಸಮಸ್ಯೆಗಳಿಗೆ ಒಂದು ಶಾಶ್ವತ ಪರಿಹಾರವನ್ನು ಕಂಡು ಹಿಡಿಯುವ ನಿಟ್ಟಿನಲ್ಲಿ ಅಗಾಧವಾದ ಸಾಧನೆಯನ್ನು ಮಾಡಿದ್ದಾರೆ.  ಎಪ್ಪತ್ತರ ದಶಕದಲ್ಲಿ ಅಡಿಕೆ ಬೆಳೆಗಾರರ ಕಷ್ಟದ ಪರಿಸ್ಥಿತಿಯನ್ನು ಕಂಡು ಇದನ್ನು ಸರಿಪಡಿಸಲು ಅವರು ಅಡಿಕೆ ಬೆಳೆಗಾರರನ್ನೊಳಗೊಂಡ ಒಂದು ಬಹುರಾಜ್ಯ ಸಹಕಾರಿ ಸಂಸ್ಥೆಯನ್ನು ಅಸ್ತಿತ್ವಕ್ಕೆ ತರುವ ಬಗೆಗೆ ದಿವ್ಯಕಲ್ಪನೆ ಹೊಂದಿ ಅದನ್ನು ಸಾಕಾರಗೊಳಿಸುವತ್ತ ನಡೆಸಿದ ವಿಶಿಷ್ಟ ಪ್ರಯತ್ನಗಳು ಅನನ್ಯವಾದದ್ದು ಎಂದು ಹೇಳಿದರು.

Advertisement

ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಕ್ಯಾಂಪ್ಕೊ ಸಂಸ್ಥೆಯ ಸರ್ವಪ್ರಥಮ ವ್ಯವಸ್ಥಾಪಕ ನಿರ್ದೇಶಕರಾದ  ಜಿ.ಕೆ. ಸಂಗಮೇಶ್ವರ ಅವರು 1973 ರಲ್ಲಿನ ಕ್ಯಾಂಪ್ಕೊ ಸಂಸ್ಥೆಯ ಬೆಳೆವಣಿಗೆಯ ಬಗ್ಗೆ, ವಾರಣಾಸಿಯವರ ಒಡನಾಟದ ಬಗ್ಗೆ ಹಾಗೂ ಪ್ರಥಮ ಆಡಳಿತ ಮಂಡಳಿಯ ಆಯ್ಕೆ ಮತ್ತು ಆರ್ಥಿಕ ಕ್ರೂಡೀಕರಣ ಮತ್ತು ಅಡಿಕೆ ಮಾರುಕಟ್ಟೆಯ ಬಗ್ಗೆ ಅಧ್ಯಯನಕ್ಕಾಗಿ ವಾರಣಾಸಿಯವರ ಜೊತೆ ಮಾಡಿದ ಪ್ರವಾಸಗಳ ಬಗ್ಗೆ ಸ್ಥೂಲವಾದ ಮಾಹಿತಿಯನ್ನು ನೀಡಿದರು.

ಕ್ಯಾಂಪ್ಕೊ ಸ್ಥಾಪನಾದಿನದ ಸಂದರ್ಭದಲ್ಲಿ ಕೃಷಿಕ – ತಂತ್ರಜ್ಞ – ಸಂಶೋಧಕ ಬಂಟ್ವಾಳ ತಾಲೂಕು ಕೋಡಪದವಿನ ನಿಟಿಲೆ ಮಹಾಬಲೇಶ್ವರ ಭಟ್‍ ಅವರಿಗೆ ಈ ಸಾಲಿನ “ಕ್ಯಾಂಪ್ಕೊ ಪ್ರಶಸ್ತಿ” ಯನ್ನು ನೀಡಿ ಸನ್ಮಾನಿಸಲಾಯಿತು.  ಕಳೆದ ಹತ್ತೊಂಬತ್ತು ವರ್ಷಗಳಲ್ಲಿ 22 ಕೃಷಿ ಉಪಕರಣಗಳನ್ನು ಮತ್ತು 4 ಕೃಷಿ ಯಂತ್ರಗಳನ್ನು ಆವಿಷ್ಕಾರಗೊಳಿಸಿದ್ದು ಹಲವಾರು ಪ್ರಶಸ್ತಿಗಳನ್ನು ಪಡೆದಿರುತ್ತಾರೆ.

Advertisement

ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೇಂದ್ರ ಸರಕಾರದ ಮಾಜಿ ಕಾರ್ಯದರ್ಶಿ, ಇಸ್ರೋದ ಸದಸ್ಯ ನಿವೃತ ಐ.ಎ.ಎಸ್. ಅಧಿಕಾರಿ  ವಿ.ವಿ.ಭಟ್,  ಯಾವುದೇ ಸಂಸ್ಥೆಯು ತನ್ನ ಬೆಳವಣಿಗೆಯಲ್ಲಿ ಸಂದರ್ಭಕ್ಕನುಗುಣವಾಗಿ ಬದಲಾವಣೆಯನ್ನು ಮಾಡಿಕೊಂಡು ಮಾನವ ಸಂಪನ್ಮೂಲಗಳ ಪೂರ್ಣ ಬಳಕೆ ಮಾಡಿದಾಗ ಮಾತ್ರ ಸಂಸ್ಥೆಯ ಸಮಗ್ರ ಬೆಳವಣಿಗೆ ಸಾಧ್ಯ ಎಂದು ಹೇಳಿದರು.

ಸಭಾದ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ  ಎಸ್.ಆರ್.ಸತೀಶ್ಚಂದ್ರ ಕ್ಯಾಂಪ್ಕೊ ಸ್ಥಾಪನೆಯ ಪೂರ್ವದ ಘಟನಾವಳಿಗಳ ಅವಲೋಕನ ಮಾಡಿ ವಾರಣಾಶಿಯವರ ಸಾಧನೆಯ ಫಲಶ್ರುತಿಯಾಗಿ ಇಂದು ಕ್ಯಾಂಪ್ಕೊ ವಿಸ್ತಾರವಾಗಿದ್ದು ಕೃಷಿಕರ ಹಿತರಕ್ಷಣೆಯ ಧ್ಯೇಯವನ್ನು ಸಾಧಿಸುತ್ತಿದೆ. ರಾಷ್ಟ್ರ ಮಟ್ಟದಲ್ಲಿ ನೀತಿ ಆಯೋಗದ ನೀತಿ ನಿರೂಪಣಾ ಸಭೆಯಲ್ಲಿ ಭಾಗವಹಿಸುವ ಅವಕಾಶ ಕ್ಯಾಂಪ್ಕೊ ಪಾಲಿಗೆ ಒದಗಿರುವುದು ಇದರ ಪ್ರಾಮ್ಯುಖತೆಯ ಸಂಕೇತವಾಗಿದೆ. ಕ್ಯಾಂಪ್ಕೊ ತನ್ನ ಧ್ಯೇಯ್ಯೋದ್ದೇಶಗಳಿಗೆ ಸದಾ ಬದ್ಧವಾಗಿದೆ ಎಂದು  ನುಡಿದರು.

Advertisement

ರಾಜೇಶ್ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ  ಸುರೇಶ ಭಂಡಾರಿಯವರು ಸ್ವಾಗತಿಸಿ, ಉಪಾಧ್ಯಕ್ಷರಾದ  ಶಂಕರನಾರಾಯಣ ಭಟ್ ಖಂಡಿಗೆ  ವಂದಿಸಿದರು. ಟಿ.ಎಸ್. ಭಟ್ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅಡಿಕೆ ಬೆಳೆಗಾರರು ಏಕೆ ಜಾಗ್ರತರಾಗಬೇಕಿದೆ..?

ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…

3 hours ago

ಮೊಗ್ರದಲ್ಲಿ ಕಾಲಾವಧಿ ನೇಮ

https://youtu.be/YgcAfgYUbGQ?si=vp1TmN5dQYAkVPBy

18 hours ago

ಸಿರಿಧಾನ್ಯ  ಬಳಕೆ  ಕುರಿತು  ಕೃಷಿ ಇಲಾಖೆಯಿಂದ  ಸಿರಿಧಾನ್ಯ ಓಟ

ಸಿರಿಧಾನ್ಯಗಳ  ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು  ಕೃಷಿ ಇಲಾಖೆ  “ಸಿರಿಧಾನ್ಯ ಓಟ…

2 days ago

ಬೆಂಗಳೂರಿನಲ್ಲಿ ತುಂತುರು ಮಳೆ | ರಾಜ್ಯಾದ್ಯಂತ ಮುಂದಿನ ಐದು ದಿನ ಮಳೆ ಸಾಧ್ಯತೆ

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…

2 days ago

ಹವಾಮಾನ ವರದಿ | 19.01.2025 | ಇಂದು ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಕೃಷಿಕರೇ ಇರಲಿ ಎಚ್ಚರ |

20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…

3 days ago