ಶೇಣಿ ಗೋಪಾಲಕೃಷ್ಣ ಭಟ್ಟರ ‘ವಿಷ್ಣು’
ಪ್ರಸಂಗ : ಶ್ರೀ ದೇವಿಮಹಾತ್ಮ್ಯೆ
(ಸಂದರ್ಭ : ತ್ರಿಮೂರ್ತಿಗಳಿಗೆ ಆದಿಮಾಯೆಯು ಗುಣ, ಕರ್ತವ್ಯ, ನೆಲೆಗಳನ್ನು ಅನುಗ್ರಹಿಸುವ ಸಂದರ್ಭ)
ನಾಮರೂಪಾತ್ಮಕವಾಗಿ ಯಾವುದು ಕಣ್ಣಿಗೆ ಗೋಚರಿಸುತ್ತದೋ, ಅದು ಸ್ವಯಂಭೂ ಆಗಲಾರದು. ತನ್ನಿಂದ ತಾನೆ ಹುಟ್ಟಿಕೊಂಡದ್ದು ಅಲ್ಲದಿದ್ದ ಮೇಲೆ ಇದನ್ನು ಕಾಣೋಣ ಅಂತ ಅಂಗೀಕರಿಸಿದರೆ ಇದಕ್ಕೊಂದು ಕಾರ್ಯವನ್ನು ಗುರುತಿಸಲೇಬೇಕು. ನನ್ನ ಜತೆಗೆ ನನ್ನ ಹಾಗೆ ಇನ್ನಿಬ್ಬರು ಇದ್ದಾರೆ. ನಾವೇನು? ನಾವಾರು? ಎಂಬುದನ್ನು ತಿಳಿಯದೇ ಇದ್ದರೆ ನಮ್ಮ ವ್ಯಕ್ತಿತ್ವಕ್ಕಾಗಲೀ, ಅಸ್ತಿತ್ವಕ್ಕಾಗಲೀ ಅರ್ಥವಿಲ್ಲ ಎಂದಾಗುತ್ತದೆ. ಏನೇ ಆದರೂ ಇದರ ಕುರಿತಾಗಿ ನಾನಂತೂ ಅಜ್ಞನಿದ್ದೇನೆ. ಬಹುಶಃ ಇವರೂ ಹಾಗೆನೇ ಇರಬೇಕು. ಪರಸ್ಪರರು ಮುಖವನ್ನು ಮುಖದಿಂದ ದರ್ಶಿಸುತ್ತಾರೆಯೇ ಹೊರತು ಮುಖದಲ್ಲಿದ್ದ ಶಬ್ದರೂಪವಾದ ಬಾಯಿ ತೆರೆಯುವುದಿಲ್ಲ.
ಯಾವಾಗ ನಮಗೆ ಒಂದು ಕಾರಣ ಗೊತ್ತಾಗುವುದಿಲ್ಲವೋ ಅಲ್ಲಿ ನಾವು ‘ಅವಿದ್ಯಾ’ ಎಂಬ ಸ್ಥಾನವನ್ನು ಗುರುತಿಸಬೇಕಾಗುತ್ತದೆ. ಯಾವಾಗ, ಎಲ್ಲಿ, ಯಾರು ಹೇಳಿದರು ಎಂಬುದು ಪ್ರಜ್ಞೆಗೆ ಬರುವುದಿಲ್ಲವಾದರೂ ಅನಾದಿ, ಅವಿದ್ಯಾ ಎಂಬ ಸ್ಫುರಣವಾಗುತ್ತಿದೆ. ಹಾಗಾದರೆ ಅವಿದ್ಯಾ ಎಂಬುದು ಅನಾದಿ ಎನಿಸುತ್ತದೆ. ಆದರೆ ಬರೇ ಅವಿದ್ಯಾ ಅಲ್ಲ. ವಿದ್ಯೆಯೂ ಅನಾದಿಯೇ. ಹಾಗಾದರೆ ವಿದ್ಯಾ, ಅವಿದ್ಯಾ ಇದು ಎರಡೂ ಬೇರೆ ಬೇರೆಯಲ್ಲ. ಒಂದೇ ಆಗಿರಬೇಕು ಎಂಬ ಸ್ಫುರಣವಾಗುತ್ತಾ ಇದೆ.
ಯಾವುದು ‘ಇದಮಿತ್ಥಂ’ ಎಂದು ಹೇಳುವುದಕ್ಕೆ ಬರುವುದಿಲ್ಲವೋ ಅದಕ್ಕೆ ನಾವು ನಮ್ಮ ಭಾಷೆಯಲ್ಲಿ ಸದ್ಯ ‘ಮಾಯಾ’ ಎಂದು ಹೆಸರಿಸೋಣ. ಈ ಮಾಯೆಯನ್ನು ಪಿತೃಸ್ಥಾನದಲ್ಲಿ ನಿಲ್ಲಿಸುವುದಕ್ಕಾಗುವುದಿಲ್ಲ. ಪಿತೃಸ್ಥಾನ ಇದ್ದರೆ ಆಮೇಲೆ ಗುರುತಿಸೋಣ. ತಾಯಿ ಯಾರೆಂದು ತಿಳಿಯದೆ ತಂದೆ ಯಾರು ಎಂದು ಊಹಿಸುವುದಾದರೂ ಹೇಗೆ? ಅಥವಾ ನಮ್ಮ ಊಹೆ ಕೆಲವೊಂದು ಸಲ ಸುಳ್ಳಾಗಿಯೂ ಹೋದೀತು. ಆದರೆ ಸತ್ಯ ಗೊತ್ತಾಗುವುದು ತಾಯಿಗೆ ತಾನೆ. ಆದ ಕಾರಣ ಅವಿದ್ಯಾ, ವಿದ್ಯಾ, ಮಾಯೆ ಈ ಮೂರನ್ನು ಒಂದೇ ಕಡೆಗೆ ಕ್ರೋಢೀಕರಿಸಿ ಅದನ್ನೇ ‘ತಾಯಿ’ ಅಂತ ಕರೆಯೋಣ.
(ಮುಂದೆ ವಾದ, ಸಂವಾದ ನಡೆದು ಬ್ರಹ್ಮ, ವಿಷ್ಣು ಪರಸ್ಪರ ಉದರದೊಳಗೆ ಪ್ರವೇಶಿಸಿ ‘ಯಾರು ಶ್ರೇಷ್ಠ’ ಎಂದು ನಿರ್ಧರಿಸಲು ಬ್ರಹ್ಮನ ಉದರವನ್ನು ಪ್ರವೇಶಿಸಿದಾಗ)
ಬ್ರಹ್ಮನ ಒಳಮೈಯನ್ನೆಲ್ಲ ಸಂಶೋಧಿಸಿದೆ. ಇದರಲ್ಲಿ ಸ್ಥೂಲವಾದಂತಹ ದ್ರವ್ಯಗಳು ಮಾತ್ರ ಇವೆ. ಇದಕ್ಕೆ ಸರ್ವೇಸಾಮಾನ್ಯವಾಗಿ ‘ಹಿರಣ್ಯ’ ಎಂತ ಹೆಸರಿಸುತ್ತೇವೆ. ಈ ಸತ್ಯ ವಸ್ತುವೆಂಬುದು ಹಿರಣ್ಯಮಯವಾದ ಪಾತ್ರದಿಂದ ಮುಚ್ಚಲ್ಪಟ್ಟಿದೆ. ಈ ಮುಚ್ಚಲ್ಪಟ್ಟ ಪಾತ್ರದಿಂದ ಅನೇಕ ‘ಪಾತ್ರಗಳು’ ಈ ಪ್ರಪಂಚದಲ್ಲಿ ಸೃಷ್ಟಿಯಾಗುತ್ತವೆ. ಇವೆಲ್ಲಾ ಅನಾದಿಗಳಲ್ಲ, ಅನಂತಗಳಲ್ಲ. ಇದಕ್ಕೆಲ್ಲಾ ‘ಅರ್ಥ’ಗಳೆಂದು ಹೆಸರು. ಇವನಲ್ಲಿ ಐಶ್ವರ್ಯವಿದೆ. ಇದು ಪ್ರಪಂಚ ಸೃಷ್ಟಿಗೆ ಬೇಕಾಗುತ್ತದೆ. ಯಾವಾಗ ಈ ಐಶ್ವರ್ಯ ನಾಶವಾಗುತ್ತದೆಯೋ ಆವಾಗ ‘ಕೇವಲತ್ವಂ’ ಸಿದ್ಧಿಸುತ್ತದೆ…
ಈ ಬಾರಿ ಫೆಬ್ರವರಿ ತಿಂಗಳಲ್ಲಿ ವಾಡಿಕೆಗಿಂತ 2.5 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿಲು…
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಮತ್ತು ನಿರ್ವಾಹಕರ ಮೇಲೆ ಪ್ರಯಾಣಿಕರು…
ಕೃಷಿ ಹಾಗೂ ರೈತರ ಅಭ್ಯುದಯವೇ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳ ಮೂಲ ಆಶಯವಾಗಿದೆ…
ಏರುತ್ತಿರುವ ತಾಪಮಾನ ಮತ್ತು ಹವಾಮಾನ ಬದಲಾವಣೆಯು ಮುಂದಿನ ಐದು ವರ್ಷಗಳಲ್ಲಿ ಕೃಷಿ ಮೇಲೆ…
ದೇಶಾದ್ಯಂತ ಸ್ಥೂಲಕಾಯದ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ಮಂದಿಯನ್ನು…
ತೀರಾ ಸಣ್ಣ ಮಟ್ಟಿನ ಆದಾಯವನ್ನೂ ಬ್ಯಾಂಕ್ ಖಾತೆಗೆ ಏಕೆ ತುಂಬಬೇಕು..?