ನಾವು ನೆಲೆಯಾಗಬೇಕಾದರೆ ಸಮಸ್ತದ ಅಗತ್ಯ ಇದೆ

August 23, 2019
10:45 AM

ಬೆಳ್ಳಾರೆ: ಸಮಸ್ತ ಭದ್ರವಾಗಿ ನೆಲೆಯಾಗಲು ನಮ್ಮ ಅವಶ್ಯಕತೆಯಿರುವುದಿಲ್ಲ. ನಮ್ಮ ನೆಲೆಯಾಗಬೇಕಾದರೆ ಸಮಸ್ತದ ಅಗತ್ಯವಿದೆ. ನಾವೆಲ್ಲರೂ ಶಂಸುಲ್ ಉಲಾಮರ ಅನುಯಾಯಿಗಳಾದರೆ ಏಳಿಗೆ ಇದೆ ಎಂದು ಅಡ್ವಕೇಟ್ ಹನೀಫ್ ಹುದವಿ ದೇಲಂಪಾಡಿ ಹೇಳಿದರು.
ಬೆಳ್ಳಾರೆಯಲ್ಲಿ ನಡೆದ ಶಂಸುಲ್ ಉಲಾಮಾ ನೂತನ ಟ್ರಸ್ಟ್ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಭಾಷಣಕಾರರಾಗಿ ಅವರು ಮಾತನಾಡಿದರು. ಟ್ರಸ್ಟಿನ ಉದ್ಘಾಟನೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಉದ್ಘಾಟಿಸಿದರು. ಎಸ್‍ಕೆಎಸ್‍ಎಸ್‍ಎಫ್ ಜಿಲ್ಲಾ ಕೋಶಾಧಿಕಾರಿ ಅಮೀರ್ ತಂಙಳ್ ದುವಾಃ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಇತ್ತೀಚೆಗೆ ಮರಣಹೊಂದಿದ ಆಲಿ ಮೇಸ್ತ್ರಿ ಕುಟುಂಬಕ್ಕೆ 50,000 ರೂಪಾಯಿಗಳ ಧನಸಹಾಯವನ್ನು ಮಾಡಲಾಯಿತು. ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಅವರನ್ನು, ಅಬ್ದುಲ್ ಹಾಜಿ ಬಾಯಂಬಾಡಿ ಹಾಗು ದಕ್ಷಿಣ ಕನ್ನಡ ಜಿಲ್ಲಾ ವಿಖಾಯ ತಂಡದ ಸದಸ್ಯರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟಿನ ಸ್ಥಾಪಕಾಧ್ಯಕ್ಷ ಯು.ಹೆಚ್ ಅಬೂಬಕ್ಕರ್ ವಹಿಸಿದರು. ವೇದಿಕೆಯಲ್ಲಿ ಬಾಳಿಲ ಮಸೀದಿಯ ಅಧ್ಯಕ್ಷ ಹಾಜಿ.ಪಿ ಇಸಾಖ್ ಸಾಹೇಬ್, ರಶೀದ್ ಹಾಜಿ ಪರ್ಲಡ್ಕ, ಇಬ್ರಾಹಿಂ ಕತ್ತರ್ ಮಂಡೇಕೋಲು, ನೂರುಲ್ ಹುದಾ ಅಧ್ಯಕ್ಷ ಬುಶ್ರಾ ಅಬ್ದುಲ್ ಅಝೀಝ್, ದಕ್ಷಿಣ ಕನ್ನಡ ವಿಖಾಯ ಅಧ್ಯಕ್ಷ ಅಶ್ರಫ್ ಶೇಡಿಗುಂಡಿ, ಜಿಲ್ಲಾ ಎಸ್‍ಕೆ.ಎಸ್‍ಎಸ್‍ಎಫ್ ಸಂಘಟನಾ ಕಾರ್ಯದರ್ಶಿ ಸಿದ್ದಿಕ್ ಬಂಟ್ವಾಳ, ಯಾಕೂಬ್ ಖಾಸ್, ಶಾಫಿ ಇರ್ಫಾನಿ ಕಕ್ಕಿಂಜೆ, ಬೆಳ್ಳಾರೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮುಸ್ತಫಾ ಬೆಳ್ಳಾರೆ, ಸದಸ್ಯ ಆರಿಫ್ ಬೆಳ್ಳಾರೆ, ಹಾಜಿ ಮಹಮ್ಮದ್ ಇಂಜಿನಿಯರ್ ಬೆಳ್ಳಾರೆ, ಝಕರಿಯಾ ಜುಮಾ ಮಸೀದಿ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ.ಪಿ, ಸುಳ್ಯ ತಾಲೂಕು ವಿಖಾಯ ಮೇಲ್ವಿಚಾರಕ ತಾಜುದ್ದೀನ್ ಟರ್ಲಿ ಉಪಸ್ಥಿತರಿದ್ದರು.
ಎಸ್‍ಕೆ.ಎಸ್‍ಎಸ್‍ಎಫ್ ವಲಯಾಧ್ಯಕ್ಷ ಹಸನ್ ಅರ್ಶದಿ ಬೆಳ್ಳಾರೆ ಸ್ವಾಗತಿಸಿದರು. ಎಸ್‍ಕೆ.ಎಸ್‍ಎಸ್‍ಎಫ್ ಜಿಲ್ಲಾಧ್ಯಕ್ಷ ಖಾಸಿಂ ದಾರಿಮಿ ಪ್ರಸ್ತಾವಿಸಿದರು. ಎಸ್‍ಕೆ.ಎಸ್‍ಎಸ್‍ಎಫ್ ಜಿಲ್ಲಾ ಸಂಚಾಲಕ ಕೆ.ಎಂ ಇಕ್ಬಾಲ್ ಬಾಳಿಲ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

 ದಕ್ಷಿಣ ವಲಯ ಡೈರಿ ಶೃಂಗಸಭೆ | ವಾರ್ಷಿಕ ಹಾಲಿನ ಉತ್ಪನ್ನಗಳ ಮೇಲಿನ ಹಣದುಬ್ಬರ ಕೇವಲ 2.4ರಷ್ಟಿದೆ |
January 11, 2025
7:31 AM
by: The Rural Mirror ಸುದ್ದಿಜಾಲ
ಸಂಕ್ರಾಂತಿ ಹಬ್ಬ | ಕೆಎಸ್‌ಆರ್‌ಟಿಸಿಯಿಂದ ವಿಶೇಷ ಬಸ್ಸುಗಳ ಓಡಾಟ ಆರಂಭ
January 11, 2025
7:21 AM
by: The Rural Mirror ಸುದ್ದಿಜಾಲ
ಮಂಗಳೂರು | ಕದ್ರಿ ಉದ್ಯಾನದಲ್ಲಿ ಜ.23 ರಿಂದ  ಫಲಪುಷ್ಪ ಪ್ರದರ್ಶನ | 20 ಸಾವಿರಕ್ಕೂ ಅಧಿಕ ಹೂವಿನ ಗಿಡಗಳ ಪ್ರದರ್ಶನ |
January 11, 2025
7:18 AM
by: The Rural Mirror ಸುದ್ದಿಜಾಲ
 ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ | ಕಳೆದ ವರ್ಷ 4 ಕೋಟಿ ಮಂದಿ ಪ್ರಯಾಣ
January 11, 2025
7:14 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror