ಬೆಳ್ಳಾರೆ: ಸಮಸ್ತ ಭದ್ರವಾಗಿ ನೆಲೆಯಾಗಲು ನಮ್ಮ ಅವಶ್ಯಕತೆಯಿರುವುದಿಲ್ಲ. ನಮ್ಮ ನೆಲೆಯಾಗಬೇಕಾದರೆ ಸಮಸ್ತದ ಅಗತ್ಯವಿದೆ. ನಾವೆಲ್ಲರೂ ಶಂಸುಲ್ ಉಲಾಮರ ಅನುಯಾಯಿಗಳಾದರೆ ಏಳಿಗೆ ಇದೆ ಎಂದು ಅಡ್ವಕೇಟ್ ಹನೀಫ್ ಹುದವಿ ದೇಲಂಪಾಡಿ ಹೇಳಿದರು.
ಬೆಳ್ಳಾರೆಯಲ್ಲಿ ನಡೆದ ಶಂಸುಲ್ ಉಲಾಮಾ ನೂತನ ಟ್ರಸ್ಟ್ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಭಾಷಣಕಾರರಾಗಿ ಅವರು ಮಾತನಾಡಿದರು. ಟ್ರಸ್ಟಿನ ಉದ್ಘಾಟನೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಉದ್ಘಾಟಿಸಿದರು. ಎಸ್‍ಕೆಎಸ್‍ಎಸ್‍ಎಫ್ ಜಿಲ್ಲಾ ಕೋಶಾಧಿಕಾರಿ ಅಮೀರ್ ತಂಙಳ್ ದುವಾಃ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಇತ್ತೀಚೆಗೆ ಮರಣಹೊಂದಿದ ಆಲಿ ಮೇಸ್ತ್ರಿ ಕುಟುಂಬಕ್ಕೆ 50,000 ರೂಪಾಯಿಗಳ ಧನಸಹಾಯವನ್ನು ಮಾಡಲಾಯಿತು. ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಅವರನ್ನು, ಅಬ್ದುಲ್ ಹಾಜಿ ಬಾಯಂಬಾಡಿ ಹಾಗು ದಕ್ಷಿಣ ಕನ್ನಡ ಜಿಲ್ಲಾ ವಿಖಾಯ ತಂಡದ ಸದಸ್ಯರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟಿನ ಸ್ಥಾಪಕಾಧ್ಯಕ್ಷ ಯು.ಹೆಚ್ ಅಬೂಬಕ್ಕರ್ ವಹಿಸಿದರು. ವೇದಿಕೆಯಲ್ಲಿ ಬಾಳಿಲ ಮಸೀದಿಯ ಅಧ್ಯಕ್ಷ ಹಾಜಿ.ಪಿ ಇಸಾಖ್ ಸಾಹೇಬ್, ರಶೀದ್ ಹಾಜಿ ಪರ್ಲಡ್ಕ, ಇಬ್ರಾಹಿಂ ಕತ್ತರ್ ಮಂಡೇಕೋಲು, ನೂರುಲ್ ಹುದಾ ಅಧ್ಯಕ್ಷ ಬುಶ್ರಾ ಅಬ್ದುಲ್ ಅಝೀಝ್, ದಕ್ಷಿಣ ಕನ್ನಡ ವಿಖಾಯ ಅಧ್ಯಕ್ಷ ಅಶ್ರಫ್ ಶೇಡಿಗುಂಡಿ, ಜಿಲ್ಲಾ ಎಸ್‍ಕೆ.ಎಸ್‍ಎಸ್‍ಎಫ್ ಸಂಘಟನಾ ಕಾರ್ಯದರ್ಶಿ ಸಿದ್ದಿಕ್ ಬಂಟ್ವಾಳ, ಯಾಕೂಬ್ ಖಾಸ್, ಶಾಫಿ ಇರ್ಫಾನಿ ಕಕ್ಕಿಂಜೆ, ಬೆಳ್ಳಾರೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮುಸ್ತಫಾ ಬೆಳ್ಳಾರೆ, ಸದಸ್ಯ ಆರಿಫ್ ಬೆಳ್ಳಾರೆ, ಹಾಜಿ ಮಹಮ್ಮದ್ ಇಂಜಿನಿಯರ್ ಬೆಳ್ಳಾರೆ, ಝಕರಿಯಾ ಜುಮಾ ಮಸೀದಿ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ.ಪಿ, ಸುಳ್ಯ ತಾಲೂಕು ವಿಖಾಯ ಮೇಲ್ವಿಚಾರಕ ತಾಜುದ್ದೀನ್ ಟರ್ಲಿ ಉಪಸ್ಥಿತರಿದ್ದರು.
ಎಸ್‍ಕೆ.ಎಸ್‍ಎಸ್‍ಎಫ್ ವಲಯಾಧ್ಯಕ್ಷ ಹಸನ್ ಅರ್ಶದಿ ಬೆಳ್ಳಾರೆ ಸ್ವಾಗತಿಸಿದರು. ಎಸ್‍ಕೆ.ಎಸ್‍ಎಸ್‍ಎಫ್ ಜಿಲ್ಲಾಧ್ಯಕ್ಷ ಖಾಸಿಂ ದಾರಿಮಿ ಪ್ರಸ್ತಾವಿಸಿದರು. ಎಸ್‍ಕೆ.ಎಸ್‍ಎಸ್‍ಎಫ್ ಜಿಲ್ಲಾ ಸಂಚಾಲಕ ಕೆ.ಎಂ ಇಕ್ಬಾಲ್ ಬಾಳಿಲ ಕಾರ್ಯಕ್ರಮ ನಿರೂಪಿಸಿದರು.
ಆಹಾರೋತ್ಪಾದನೆಯ ಕ್ಷೇತ್ರದಲ್ಲಿ ಹಾಲಿ ಉತ್ಪಾದನೆಯ ಪಾತ್ರ ಅತ್ಯಂತ ಪ್ರಮುಖವಾಗಿದೆ. ಭಾರತದಲ್ಲಿ ಆಹಾರ ಪದಾರ್ಥಗಳಿಗಾಗಿ…
ಸಂಕ್ರಾಂತಿ ಹಬ್ಬದ ಪ್ರಯುಕ್ತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವಿಶೇಷ ಹೆಚ್ಚುವರಿ…
ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ತೋಟಗಾರಿಕೆ ಇಲಾಖೆ ವತಿಯಿಂದ ಮಂಗಳೂರಿನ…
2024 ನೇ ಇಸವಿಯಲ್ಲಿ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ…
ಬೆಂಬಲಬೆಲೆ ಯೋಜನೆಯಡಿ ಶೇಂಗಾ ಖರೀದಿ ನೋಂದಣಿ ಮತ್ತು ಖರೀದಿ ಅವಧಿಯನ್ನು ವಿಸ್ತರಿಸಲಾಗಿದೆ ಎಂದು…
2024-25 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತಿಯ ಪಿಯುಸಿ ಪರೀಕ್ಷೆ-1 ರ ಅಂತಿಮ…