ಬಾಲ್ಯ ಕಳೆದು ಹೋಗಿದೆ
ಇಂದು ಬೀಗುತ್ತಿದೆ ಯೌವನ
ಬೆನ್ನ ಹಿಂದೆ ಬರುತಿರುವುದು
ಮುಪ್ಪಲ್ಲವೇ…?
ಮನದಲ್ಲಿ ಹಳೆನೆನಪು
ಡಂಗೂರ ಸಾರುತಿರೆ
ಮುಪ್ಪಿನ ಚಿಂತೆಯೇಕೆ ಮನಕೆ?
ಬೇಡವೆಂದರೂ ಬರುವ ಮುಪ್ಪು
ಕರೆದಾಗ ಬರುವುದೇ ಬಾಲ್ಯ ?
ನಿನ್ನೆ,ನಾಳೆಯ ಅರಿವಿಲ್ಲದೆ
ಇಂದು ಮನದಲ್ಲಿ ‘ಅಹಂ’
ನಿನ್ನೆ ಆಡಿದ ಜಗಳ
ಇಂದು ಅದೇ..!
ಬದಲಾವಣೆ ಇದೆ
ನಿನ್ನೆ ಆಟಿಕೆಗಳಿಗಾಗಿ
ಇಂದು ಮೂರಡಿ ಜಾಗಕ್ಕಾಗಿ
ನಾಳೆ ನಿನ್ನೆಯ ದಿನಗಳ ಹಿನ್ನೋಟವಷ್ಟೇ..!
ನಿನ್ನೆ ಅಂತರಾಳದ ಮಾತು
ಇಂದು ಜಗಳದಿಂದ ಮುನಿಸು
ನಾಳೆ ಬರೀ ಚಿಂತೆ
ಮತ್ತೆ ಚಿತೆ
ಇದೇ ಮನುಜನ ಜೀವನ
ನಿನ್ನೆ ಇಂದು ನಾಳೆಗಳ ಸಮಾಗಮ
ಅಪೂರ್ವ ಕೊಲ್ಯ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement