ನಿಮ್ಮ ಮಕ್ಕಳಿಗೆ ನೀವು ಬಯಸುವ ಶಿಕ್ಷಣ ಯಾವುದು ? – ವೆಂಕಟ್ರಮಣ ಭಟ್ ಮಂಕುಡೆ

August 1, 2019
5:35 PM

ಎಲಿಮಲೆ: ನಿಮ್ಮ ಮಕ್ಕಳಿಗೆ ನೀವು ಬಯಸುವ ಶಿಕ್ಷಣ ಯಾವುದು ? ಹೀಗೊಂದು ಪ್ರಶ್ನೆಯನ್ನು  ಮಕ್ಕಳ ಪೋಷಕರ ಮುಂದೆ ಇಟ್ಟವರು ವಿದ್ಯಾಭಾರತಿಯ ನೈತಿಕ ಶಿಕ್ಷಣ ವಿಭಾಗದ ಪ್ರಾಂತ ಸಂಚಾಲಕ, ಕಡಬದ  ಸರಸ್ವತಿ ವಿದ್ಯಾಲಯದ ಸಂಚಾಲಕ ಮಂಕುಡೆ ವೆಂಕ್ರಮಣ ಭಟ್.

Advertisement
Advertisement
Advertisement

ಎಲಿಮಲೆ ಜ್ಞಾನದೀಪ ವಿದ್ಯಾಸಂಸ್ಥೆಯಲ್ಲಿ  ಗುರುವಾರ ಎಲ್ ಕೆ ಜಿ/ಯು ಕೆ ಜಿ ಪೋಷಕರ ಸಭೆಯಲ್ಲಿ ಅವರು ಮಾತನಾಡಿದರು. ಮಕ್ಕಳಿಗೆ ಬೇಕಾದ ಶಿಕ್ಷಣದ ಬಗ್ಗೆ ಪೋಷಕರು ಹೇಳಿದ್ದು ಶಿಸ್ತು,  ಸಂಸ್ಕಾರದಿಂದ ಕೂಡಿರುವ  ಶಿಕ್ಷಣ ಎಂದು.

Advertisement

. ಮರುಪ್ರಶ್ನೆ ಹಾಕುತ್ತಾ ಮಾತು ಮುಂದುವರಿಸಿದ ವೆಂಕಟ್ರಮಣ ಭಟ್, ಇದೆರಡೂ ಇಂದಿನ ವಿದ್ಯಾರ್ಥಿಗಳಲ್ಲಿ ಕಾಣಲು ಸಿಗುತ್ತದೆಯೇ ಎಂಬ ಆತ್ಮಾವಲೋಕನ ಬೇಕು, ಹಾಗೂ ಇದಕ್ಕೆ ಕಾರಣವೇನು ಎಂಬುದನ್ನು ಪೋಷಕರು ಚಿಂತನೆ ಮಾಡಬೇಕು ಎಂದರು. ಮನೆಯೇ ಮೊದಲ ಪಾಠ ಶಾಲೆ ಎಂಬ ಮಾತಿದೆ, ಇಲ್ಲಿಂದಲೇ ಇಂದು ಶಿಕ್ಷಣದ ವ್ಯವಸ್ಥೆ ಬದಲಾಗಬೇಕು ಎಂದರು. ಹೀಗಾಗಿ  ಅನ್ನಮಯ, ಜ್ಞಾನಮಯ, ಮನೋಮಯ  ಸೇರಿದಂತೆ  ಪಂಚಕೋಶಗಳಿಗೆ ಬೇಕಾದ ಶಿಕ್ಷಣದ ಕಡೆಗೆ ವಿದ್ಯಾಭಾರತಿ ಗಮನಹರಿಸುತ್ತಿದೆ ಎಂದು ವೆಂಕಟ್ರಮಣ ಭಟ್ ಹೇಳಿದರು.

ಶಿಕ್ಷಣ ಎನ್ನುವುದು ಕೇವಲ ಅಂಕ ಗಳಿಸುವುದು ಅಲ್ಲವೇ ಅಲ್ಲ. ಇನ್ನೊಬ್ಬರ ನೋವನ್ನು ಅರ್ಥ ಮಾಡುವ ಹಾಗೂ ನೋವನ್ನು ನೀಡದೇ ಇರುವ ಗುಣ ಬೆಳೆಸುವುದೇ ಶಿಕ್ಷಣದ ತಳಹದಿ. ಇಂತಹ ಗುಣಗಳನ್ನು  ಬೆಳೆಸುವ ಶಿಕ್ಷಣದ ಅಗತ್ಯವಿದೆ, ಒಟ್ಟಿನಲ್ಲಿ ಅಂಕದ ಶಿಕ್ಷಣದ ಬದಲಿಗೆ ಗುಣ ಬೆಳೆಸುವ ಗುಣಾತ್ಮಕ ಶಿಕ್ಷಣ ಬೇಕಾಗಿದೆ,  ಬದುಕಿಗೆ ಬೇಕಾದ ಶಿಕ್ಷಣ ನೀಡುವ ವ್ಯವಸ್ಥೆ ಬರಬೇಕಾಗಿದೆ. ವಿದ್ಯಾರ್ಥಿಯ ಓದಿನ ಅಂಕಪಟ್ಟಿ ಜೊತೆಗೆ ಆತನ ಗುಣದ ಮಾರ್ಕ್ ಕಾರ್ಡ್ ಪೋಷಕರು ಗಮನಿಸಬೇಕು. ಗುಣ-ನಡತೆಯಲ್ಲಿನ ವ್ಯತ್ಯಾಸ ನಿತ್ಯವೂ ಗಮನಿಸಬೇಕು, ಅದಕ್ಕಾಗಿಯೇ ಮನೆಯೇ ಮೊದಲ ಪಾಠಶಾಲೆ ಎನಿಸಿದೆ ಎಂದರು. ಮಕ್ಕಳು ಹಾದಿ ತಪ್ಪುವಂತಾದರೆ ಮೊದಲು ಆತ್ಮಾವಲೋಕನ ಮಾಡಬೇಕಾದ್ದು ಪೋಷಕರು, ಮಕ್ಕಳ ಮುಂದೆ ಮಾತನಾಡುವ ನುಡಿ, ನಡೆಯುವ ನಡೆ ಎಲ್ಲವೂ ಎಚ್ಚರವಾಗಿರಬೇಕು ಎಂದು ವೆಂಕಟ್ರಮಣ ಭಟ್ ಹೇಳಿದರು.

Advertisement

ವೇದಿಕೆಯಲ್ಲಿ ಜ್ಞಾನದೀಪ ವಿದ್ಯಾಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ತಳೂರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಗಧಾಧರ ಬಾಳುಗೋಡು ಸ್ವಾಗತಿಸಿ ವಂದಿಸಿದರು.

 

Advertisement

 

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆ ಬೆಳೆಗಾರರು ಏಕೆ ಜಾಗ್ರತರಾಗಬೇಕಿದೆ..?
January 22, 2025
6:48 AM
by: ದ ರೂರಲ್ ಮಿರರ್.ಕಾಂ
ಮೊಗ್ರದಲ್ಲಿ ಕಾಲಾವಧಿ ನೇಮ
January 21, 2025
3:55 PM
by: ದ ರೂರಲ್ ಮಿರರ್.ಕಾಂ
ಮೊಗ್ರದಲ್ಲಿ ಕನ್ನಡ ದೇವತೆ ನೇಮ | ತುಳುನಾಡಿನಲ್ಲಿ ಈಗ ನೇಮ-ನಡಾವಳಿ ದಿನಗಳು |
January 21, 2025
3:50 PM
by: ದ ರೂರಲ್ ಮಿರರ್.ಕಾಂ
ಸಿರಿಧಾನ್ಯ  ಬಳಕೆ  ಕುರಿತು  ಕೃಷಿ ಇಲಾಖೆಯಿಂದ  ಸಿರಿಧಾನ್ಯ ಓಟ
January 19, 2025
10:13 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror