ಸವಣೂರು: ಶ್ರೀ ಷಣ್ಮುಖ ಯುವಕ ಮಂಡಲ ಸರ್ವೆ ವತಿಯಿಂದ ಸರ್ವೆ ಗ್ರಾಮದಲ್ಲಿ ನಡೆಯುತ್ತಿರುವ “ನೀರಿಂಗಿಸೋಣ ಬನ್ನಿ”ಅಭಿಯಾನದ 5 ನೆಯ ಕಾರ್ಯಕ್ರಮವಾಗಿ ಸರ್ವೆ ಕಂಚರಮೂಲೆ ಸತೀಶ್ ಮರಡಿತ್ತಾಯ ಅವರ ಜಮೀನಿನಲ್ಲಿ ನೀರಿಂಗಿಸಲು ಬೃಹತ್ ಹೊಂಡ ನಿರ್ಮಿಸಲಾಯಿತು. ಯುವಕ ಮಂಡಲದ ಸದಸ್ಯರು ಶ್ರಮದಾನದ ಮೂಲಕ ಸುತ್ತಲಿನ ಗುಡ್ಡದಲ್ಲಿ ಬೀಳುವ ಮಳೆ ನೀರನ್ನು ಇಂಗುಗುಂಡಿಗೆ ಸಂಪರ್ಕಿಸಲು ಚರಂಡಿ ನಿರ್ಮಿಸಿದರು.
ಸತೀಶ್ ಮರಡಿತ್ತಾಯ ಅವರು ಮಾತನಾಡಿ ಯುವಕ ಮಂಡಲದ ಸದಸ್ಯರು ಸರ್ವೆ ಗ್ರಾಮದಲ್ಲಿ ಹಮ್ಮಿಕೊಂಡಿರುವ “ನೀರಿಂಗಿಸೋಣ ಬನ್ನಿ ” ಅಭಿಯಾನವನ್ನು ಬೆಂಬಲಿಸಿ ಇಂಗು ಗುಂಡಿ ನಿರ್ಮಿಸಿದ್ದೇನೆ. ಯುವಕ ಮಂಡಲದ ಸದಸ್ಯರು ಅಂತರ್ಜಲ ವೃದ್ಧಿಗಾಗಿ ನಮ್ಮ ಜಮೀನಿನಲ್ಲಿ ಹಮ್ಮಿಕೊಂಡಿರುವ ಶ್ರಮದಾನ ಕಾರ್ಯಕ್ರಮ ಅಭಿನಂದನೀಯ ಎಂದರು.
ಎಸ್ ಜಿ ಎಂ ಪ್ರೌಢಶಾಲೆಯ ಮುಖ್ಯಗುರುಗಳಾದ ಶ್ರೀನಿವಾಸ್ ಎಚ್ ಬಿ ಮಾತನಾಡಿ ಯುವಕ ಮಂಡಲದ ಯುವಕರೊಂದಿಗೆ “ನೀರಿಂಗಿಸೋಣ ಬನ್ನಿ ” ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದೇನೆ. ಯುವಕ ಮಂಡಲದ ಪ್ರತಿ ಜನಪರ ಕಾರ್ಯಕ್ರಮಗಳಿಗೆ ನನ್ನ ಬೆಂಬಲ ಇದೆ ಎಂದರು.
ಯುವಕ ಮಂಡಲದ ಅಧ್ಯಕ್ಷರಾದ ಕಮಲೇಶ್ ಸರ್ವೆದೋಳಗುತ್ತು ಸತೀಶ್ ಮರಡಿತ್ತಾಯ ಅವರನ್ನು ಅಭಿನಂದಿಸಿ ಮಾತನಾಡಿ ಸತೀಶ್ ಮರಡಿತ್ತಾಯ ಅವರು ತಮ್ಮ ಜಮೀನಿನಲ್ಲಿರುವ ಬಹುಪಾಲು ಕಾಡನ್ನು ಸಂರಕ್ಷಿಸಿದ್ದಾರೆ. ಕಳೆದ ವರ್ಷ್ ಅಂತರ್ಜಲ ವೃದ್ಧಿಗಾಗಿ ವೆಂಟೆಡ್ ಡ್ಯಾಮ್ ನಿರ್ಮಿಸಿಕೊಂಡಿದ್ದಾರೆ. ಇದೀಗ ಯುವಕ ಮಂಡಲದ ಅಭಿಯಾನಕ್ಕೆ ಬೆಂಬಲವಾಗಿ ಇಂಗುಗುಂಡಿ ನಿರ್ಮಿಸಿರುವುದು ಅವರ ಪರಿಸರ ಪ್ರೇಮಕ್ಕೆ ಸಾಕ್ಷಿ ಎಂದರು.
ಕಾರ್ಯಕ್ರಮ ಸಂಯೋಜಕರಾದ ನಾಗೇಶ್ ಪಟ್ಟೆಮಜಲು ಕಾರ್ಯಕ್ರಮ ಸಂಯೋಜಿಸಿದರು. ಯುವಕ ಮಂಡಲದ ಗೌರವಾಧ್ಯಕ್ಷರು ಹಾಗು ಮುಂಡೂರು ಗ್ರಾಮ ಪಂ ಅಧ್ಯಕ್ಷರಾದ ವಸಂತ್ ಎಸ್ ಡಿ, ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷರಾದ ಸುಭ್ರಮಣ್ಯ ಕರಂಬಾರು, ಉಪಾಧ್ಯಕ್ಷರಾದ ಪ್ರವೀಣ್ ಚೆನ್ನಾವರ, ಯುವಕ ಮಂಡಲದ ಅಧ್ಯಕ್ಶರಾದ ಕಮಲೇಶ್ ಸರ್ವೆದೋಳಗುತ್ತು, ಪ್ರ ಕಾರ್ಯದರ್ಶಿ ತಿಲಕ್ ರಾಜ್ ಕರಂಬಾರು, ಮಾಜಿ ಅಧ್ಯಕ್ಷರಾದ ರಾಜೇಶ್ ಎಸ್ ಡಿ, ಪದಾಧಿಕಾರಿಗಳಾದ ರಾಮಣ್ಣ ಪೂಜಾರಿ ವಿಜಯ ಬ್ಯಾಂಕ್, , ಅಶೋಕ್ ಎಸ್ ಡಿ, ಕಿಶೋರ್ ಸರ್ವೆದೋಳಗುತ್ತು, , ಗೌತಮ್ ರಾಜ್ ಕರಂಬಾರು, ಜಯರಾಜ್ ಸುವರ್ಣ ಸೊರಕೆ, ಮನೋಜ್ ಸುವರ್ಣ ಸೊರಕೆ, ಗುರುರಾಜ್ ಪಟ್ಟೆಮಜಲು, ಸದಸ್ಯರಾದ ರಾಮಕೃಷ್ಣ ಸರ್ವೆದೋಳಗುತ್ತು , ನಂದನ್ ಸರ್ವೆದೋಳಗುತ್ತು, ಯೋಗೀಶ್ ಮಡಿವಾಳ ಕಲ್ಪಣೆ, ಮೊದಲಾದವರು ಭಾಗವಹಿಸಿದರು.