ಸವಣೂರು : ಸರ್ವೆ ಶ್ರೀ ಷಣ್ಮುಖ ಯುವಕ ಮಂಡಲದ ನೀರಿಂಗಿಸೋಣ ಬನ್ನಿ ಅಭಿಯಾನವನ್ನು ಗ್ರಾಮದಾದ್ಯಂತ ವಿಸ್ತರಿಸುವ ಬಗ್ಗೆ ಸಮಾಲೋಚನಾ ಸಭೆ ಹಾಗು ಮಾಹಿತಿ ಕಾರ್ಯಕ್ರಮ ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸುರೇಶ್ ಕುಮಾರ್ ಸೊರಕೆ ಅವರ ಮನೆಯಲ್ಲಿ ನಡೆಯಿತು.
ಸಂಪನ್ಮೂಲ ವ್ಯಕ್ತಿ ಡಾ.ಶ್ರೀಶಕುಮಾರ್ ಅವರು , ಮಳೆ ನೀರಿಂಗಿಸುವ ವಿವಿಧ ವಿಧಾನಗಳು ಹಾಗು ಜನಜಾಗೃತಿ ಅಭಿಯಾನದ ಯಶಸ್ಸಿಗೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿ ಗ್ರಾಮದ ಪ್ರತಿ ನಾಗರಿಕರು ಮಳೆ ನೀರಿಂಗಿಸುವ ಕಾರ್ಯ ಮಾಡುವ ಮೂಲಕ ಗ್ರಾಮವನ್ನು ದೇಶದಲ್ಲೇ ಮಾದರಿ ಗ್ರಾಮವನ್ನಾಗಿ ಮಾಡಬೇಕು ಎಂದರು.
ಜಿ.ಪಂ.ಮಾಜಿ ಸದಸ್ಯ ಸುರೇಶ್ ಕುಮಾರ್ ಸೊರಕೆ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಯುವಕ ಮಂಡಲದ “ನೀರಿಂಗಿಸೋಣ ಬನ್ನಿ ” ಕಾರ್ಯಕ್ರಮವನ್ನು ಗ್ರಾಮದಾದ್ಯಂತ ಯಶಸ್ವಿಗೊಳಿಸಿ ಡಿಸೆಂಬರ್ ಅಂತ್ಯದಲ್ಲಿ ಸೊರಕೆ ಕಿಂಡಿ ಅಣೆಕಟ್ಟೆ ಬಳಿ ಈ ವರ್ಷದ ಸಮಾರೋಪ ಕಾರ್ಯಕ್ರಮವನ್ನು ಊರಿನ ಜನರ ಹಾಗು ಯುವಕ ಮಂಡಲದ ಸಹಭಾಗಿತ್ವದೊಂದಿಗೆ ಆಯೋಜಿಸಲಾಗುವುದು ಎಂದರು.
ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಸುಬ್ರಹ್ಮಣ್ಯ ಕರಂಬಾರು,ಮಾಜಿ ಅಧ್ಯಕ್ಷ ರಾಜೇಶ್ ಎಸ್ ಡಿ, ಗೌರವ ಸಲಹೆಗಾರ ಶಶಿಧರ್ ಎಸ್ ಡಿ, ಪದಾ„ಕಾರಿಗಳಾದ ಡಾ.ಪ್ರವೀಣ್ ಸರ್ವೆದೋಳಗುತ್ತು, ಅಶೋಕ್ ಎಸ್ ಡಿ, ಮನೋಜ್ ಸುವರ್ಣ ಸೊರಕೆ, ಜಯರಾಜ್ ಸುವರ್ಣ ಸೊರಕೆ, ಸದಸ್ಯರಾದ ಹರೀಶ್ ಪಾಲೆತ್ತಗುರಿ, ಸಂದೇಶ ಆಚಾರ್ಯ, ಮಾಜಿ ಪಂಚಾಯತ್ ಸದಸ್ಯರಾದ ರಾಜಗೋಪಾಲ್ ಗೌಡ ಕಂಪ, ಸ್ಥಳೀಯರಾದ ರಾಮಕೃಷ್ಣ ಪ್ರಭು, ಈರಪ್ಪ ಪೂಜಾರಿ ಸೊರಕೆ, ತಾರಾ ಸೊರಕೆ, ಹರ್ಷಿಣಿ ಸುರೇಶ್ ಸೊರಕೆ, ಸುರೇಶ್ ಗೌಡ ಮೊದಲಾದವರು ಉಪಸ್ಥಿತರಿದ್ದರು.
ಸರ್ವೆ ಶ್ರೀ ಷಣ್ಮುಖ ಯುವಕ ಮಂಡಲದ ಅಧ್ಯಕ್ಷ ಕಮಲೇಶ್ ಸರ್ವೆದೋಳಗುತ್ತು ಸ್ವಾಗತಿಸಿ ವಂದಿಸಿದರು.
ಶಿರಸಿಯ ಕಾಳುಮೆಣಸಿನ ಬೆಲೆಯನ್ನು ಸಂಬಾರ ಮಂಡಳಿಯ ದರಪಟ್ಟಿಯಲ್ಲಿ ನಮೂದಿಸುವಂತೆ ಕೇಂದ್ರ ವಾಣಿಜ್ಯ ಸಚಿವ…
ತಂದೆ-ತಾಯಿ ಹಾಗೂ ಹಿರಿಯರನ್ನು ಆರೈಕೆ ಮಾಡದ ಮಕ್ಕಳಿಗೆ ಅಥವಾ ಸಂಬಂಧಿಕರಿಗೆ ನೀಡಿದ ದಾನಪತ್ರವನ್ನು…
ಹೆಣ್ಣಿನ ಸ್ಥಾನಮಾನ, ಶೋಷಣೆ ಮತ್ತು ಸಬಲೀಕರಣದ ಪ್ರಶ್ನೆ ಬಂದಾಗ ತ್ಯಾಗ ಮತ್ತು ಮಮತೆಯ…
ಲಾ ನಿನಾ ಪ್ರಭಾವ ಇರುವುದರಿಂದ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಅದರಲ್ಲೂ ದಕ್ಷಿಣ ಒಳನಾಡು,…
ಅಷ್ಟೊಂದು ಪ್ರಮಾಣದ ಮಳೆಯು ಯಾವ ಮುನ್ಸೂಚನೆಯಲ್ಲೂ ಇರಲಿಲ್ಲ. ನಿರೀಕ್ಷೆಯೂ ಇರಲಿಲ್ಲ. ಬೆಳಿಗ್ಗೆ ಚಳಿ,…
ರಾಜ್ಯದ ಕರಾವಳಿ, ಮಲೆನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ…