Advertisement
Categories: Uncategorized

ನೀರಿಗಾಗಿ ಗ್ರಾಮಸ್ಥರೇ ಇಳಿದು ಕೆಲಸ ಮಾಡಿದರು..!

Share

ಗುತ್ತಿಗಾರು: ನೀರಿಲ್ಲ ಎಂದು ಗ್ರಾಮ ಪಂಚಾಯತ್ ಬರಬೇಕು ಎಂದು ಕಾಯಲಿಲ್ಲ. ಪಂಚಾಯತ್ ನಲ್ಲಿ ವ್ಯವಸ್ಥೆ ಏನಿದು ಎಂದು ಕೇಳಿದರು, ತಾವೇ ಕೆಲಸಕ್ಕೆ ಮುಂದಾದರು ಹೀಗೆ ಮಾದರಿಯಾದ್ದು  ಗುತ್ತಿಗಾರು ಗ್ರಾಮದ ಕಮಿಲದ ಯುವಕರು.

ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಕಮಿಲದಲ್ಲಿ  ಸುಮಾರು 10 ರಿಂದ 15 ಮನೆಗಳಿಗೆ ಬೇಸಗೆಯಲ್ಲಿ  ಕುಡಿಯುವ ನೀರಿನ ವ್ಯವಸ್ಥೆ ಸರಿ ಇಲ್ಲ. ಈಗಲ್ಲ ಕಳೆದ ಕೆಲವು ವರ್ಷಗಳಿಂದ ಈ ಸಮಸ್ಯೆ ಇದೆ. ಇದಕ್ಕಾಗಿ  ಪಂಚಾಯತ್ ವತಿಯಿಂದ ಕೊಳವೆಬಾವಿ ತೋಡಲಾಗಿದೆ, ದುರದೃಷ್ಟವಶಾತ್ ಅದರಲ್ಲಿ ಸರಿಯಾಗಿ ನೀರಿಲ್ಲ. ಹೀಗಾಗಿ ಸಮೀಪದಲ್ಲೇ ಇರುವ ಹೊಳೆಗೆ ಒಪನ್ ವೆಲ್ ನಿರ್ಮಾಣ ಮಾಡಿ ಪಂಪ್ ಸಂಪರ್ಕವೂ ಆಗಿದೆ. ಎತ್ತರದಲ್ಲಿ ನೀರಿನ ಟ್ಯಾಂಕ್ ಕೂಡಾ ಇದೆ. ಆದರೆ ಹೊಳೆಯಲ್ಲೂ ನೀರಿನ ಮಟ್ಟ ಇಳಿದಿದೆ. ಹೀಗಾಗಿ ಈಗ ನೀರಿಲ್ಲ. ಕೆಲವು ಮನೆಯವರು ದೂರದಿಂದ ನೀರು ಹೊತ್ತು ತರುತ್ತಾರೆ. ಕೆಲವು ಬಾರಿ ಸಂಬಂಧಿತರ ಗಮನಕ್ಕೆ ತಂದರು. ಆದರೆ ಆಗಲಿಲ್ಲ.  ಕೆಲವು ವರ್ಷಗಳಿಂದ ಇರುವ ಈ ಸಮಸ್ಯೆಯನ್ನು ಯಾರ ಬಳಿ ಹೇಳುವುದು  ಎನ್ನುವುದು  ತಿಳಿಯದೇ ಮುಗ್ದ ಜನರು ನೀರು ಹೊರುತ್ತಲೇ ಇದ್ದರು.

 

ಹೀಗಾಗಿ ಸ್ಥಳೀಯ ಯುವಕರು ಕೆಲಸಕ್ಕೆ ಮುಂದಾದರು. ಈ ಸಂದರ್ಭ ಸ್ಥಳಿಯ ಪಂಚಾಯತ್ ಸದಸ್ಯ ರಘುವೀರ್ ಜೊತೆ ಮಾತನಾಡಿದರು. ನೀರಿನ ಸಮಸ್ಯೆ ಬಗ್ಗೆ ಮಾತನಾಡಿದರು. ತಕ್ಷಣವೇ ಗ್ರಾಮ ಪಂಚಾಯತ್ ಸಿಬಂದಿಗಳ ಜೊತೆಗೂ ಮಾತನಾಡಿ, ನಾವೇ ಕೆಲಸ ಮಾಡುತ್ತೇವೆ, ಅನುದಾನಗಳು ಇದ್ದರೆ ಕೊಡಿ, ಕೆಲಸ ಮಾಡಿಸುತ್ತೇವೆ ಎಂದರು. ಅದರ ಜೊತೆಗೇ ಕೆಲಸವೂ ಶುರು ಮಾಡಿದರು. ನಂತರ ಪಂಚಾಯತ್ ಪಿಡಿಒ ಸ್ಥಳಕ್ಕೆ ಆಗಮಿಸಿದರು. ಗ್ರಾಪಂ ಸದಸ್ಯ ರಘುವೀರ್ ಜೊತೆಗಿದ್ದರು. ಜೊತೆಗೆ ಸ್ಥಳೀಯ ಗ್ರಾಪಂ ಸದಸ್ಯ  ಜಯಪ್ರಕಾಶ್ ಮೊಗ್ರ ಅವರೂ ಬಂದರು.

 

 

ಯುವಕರ ತಂಡ ಕೆಲಸ ಮಾಡಿತು. ಅನುದಾನಗಳನ್ನು ನೀಡುವ ಭರವಸೆಯನ್ನು ಎಲ್ಲಾ ಪಂಚಾಯತ್ ಸದಸ್ಯರು ನೀಡಿದರು, ಪಿಡಿಒ ಅವರೂ ಅನುದಾನ ಒದಗಿಸುವ ಭರವಸೆ ನೀಡಿದರು.

 

 

ಒಂದು ಊರಿನ ಅಭಿವೃದ್ಧಿ ಹಾಗೂ ಜನರ ಸಮಸ್ಯೆ ನಿವಾರಣೆಗೆ ಯುವಕರೇ ರಚನಾತ್ಮಕವಾಗಿ ಕೆಲಸ ಮಾಡಿದರೆ ಹೇಗೆ ಕಾರ್ಯಗಳು ನಡೆಯುತ್ತದೆ ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ. ಎಲ್ಲದಕ್ಕೂ ರಾಜಕೀಯ ಬೆರೆಸುವುದು ಹಾಗೂ ಯಾರೋ ಇಂತಹ  ಒಳ್ಳೆಯ ಕಾರ್ಯದ ಮೈಲೇಜ್ ಪಡೆಯುತ್ತಾರೆ ಎಂದು ಹೇಳುತ್ತಾ ಕೂತರೆ ಕೆಲಸಗಳು ನಡೆಯದು. ಹೊಂಡ ಗುಂಡಿ ಇರುವ ರಸ್ತೆ, ನೀರಿಲ್ಲದೇ ಪರದಾಡುವ ಜನರ ಸಂಖ್ಯೆ ಹೆಚ್ಚಾದೀತು. ಊರು ಅಭಿವೃದ್ಧಿಯಾಗಲು ರಾಜಕೀಯ ರಹಿತವಾದ ಇಂತಹ ರಚನಾತ್ಮಕ ಕಾರ್ಯಗಳು ಹೆಚ್ಚು ನಡೆಯಬೇಕಾಗಿದೆ. ಇದಕ್ಕಾಗಿ ಕಮಿಲದ ಯುವಕರು ಮಾದರಿಯಾಗಿದ್ದಾರೆ.

 

ಕಳೆದ ಅನೇಕ ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಇದೆ. ಸ್ಥಳೀಯ ಮುಖಂಡರು ನೀರಿನ ಸಮಸ್ಯೆ ನಿವಾರಣೆಗೆ ಪ್ರಯತ್ನ ಮಾಡಿದ್ದಾರೆ. ಆದರೆ ಈಗ ನೀರಿಲ್ಲದೆ ಎಲ್ಲೆಲ್ಲಿಂದಲೋ ತರಬೇಕಾದ ಸ್ಥಿತಿ ಇದೆ ಎಂದು ಹೇಳುತ್ತಾರೆ ಕಮಿಲದ ನಿವಾಸಿ ವಾಡ್ಯಪ್ಪ.

 

 

 

ಕಮಿಲದ ನೀರಿನ ಸಮಸ್ಯೆ ನಿವಾರಣೆಗೆ ಶಾಶ್ವತವಾದ ಪರಿಹಾರ ಬೇಕಾಗಿದೆ. ಕೊಳವೆಬಾವಿಯಲ್ಲಿ ನೀರಿಲ್ಲ. ಹೀಗಾಗಿ ಒಂದು ವ್ಯವಸ್ಥೆ ಬೇಕಾಗಿದೆ ಎಂದು ಹೇಳುತ್ತಾರೆ ಕಮಿಲದ ನಿತ್ಯಾನಂದ ಕಾಂತಿಲ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅಡಿಕೆಯಷ್ಟೇ ಅಲ್ಲ ಅದೇ ಮರಕ್ಕೆ ವೆನಿಲ್ಲಾ ಬಳ್ಳಿ | ಅಸ್ಸಾಂನಲ್ಲಿ ಅಡಿಕೆಯ ಜೊತೆಗೆ ಇನ್ನೊಂದು ಬೆಳೆ..

ಅಸ್ಸಾಂನ ಗುಹಾಟಿ ಸಮೀಪದ 10 ಅರಣ್ಯ ಅಂಚಿನ ಗ್ರಾಮಗಳಲ್ಲಿ ಅಡಿಕೆ, ತೆಂಗು ಮತ್ತು…

7 hours ago

ದೇಶಾದ್ಯಂತ ಮುಂಗಾರು ಬಿತ್ತನೆ 1,086 ಲಕ್ಷ ಹೆಕ್ಟೇರ್ ದಾಟಿದೆ – ಕರ್ನಾಟಕದಲ್ಲಿ ಭತ್ತ, ದ್ವಿದಳ ಧಾನ್ಯ ಕೃಷಿ ಕುಸಿತ

ದೇಶದ ಪ್ರಸಕ್ತ ಮುಂಗಾರು ಬೆಳೆಗಳ ಬಿತ್ತನೆ ಪ್ರದೇಶ 1,086 ಲಕ್ಷ ಹೆಕ್ಟೇರ್ ದಾಟಿದ್ದರೂ…

8 hours ago

ಜಾನುವಾರುಗಳ ಮೇವಿನ ಕೊರತೆಗೆ ಅಜೋಲಾ ಪರಿಹಾರ – ರಾಜ್ಯದಲ್ಲಿ 12 ಸಾವಿರ ಘಟಕಗಳ ಸ್ಥಾಪನೆಗೆ ಚಾಲನೆ

ರಾಜ್ಯದಲ್ಲಿ ಜಾನುವಾರುಗಳಿಗೆ ಪೌಷ್ಟಿಕ ಪೂರಕ ಮೇವು ಒದಗಿಸಲು ₹3.78 ಕೋಟಿ ವೆಚ್ಚದಲ್ಲಿ 12…

9 hours ago

ಹವಾಮಾನ ವರದಿ | 08-09-2026 | ಕರಾವಳಿಯಲ್ಲಿ ಮೋಡ ಹೆಚ್ಚಳ – ಸೆ.12ರ ಬಳಿಕ ಬಂಗಾಳಕೊಲ್ಲಿ ಬದಲಾವಣೆ?

ಕರಾವಳಿಯಲ್ಲಿ ಮೋಡದ ವಾತಾವರಣ ಹೆಚ್ಚಾಗಿದ್ದು, ಮಧ್ಯಾಹ್ನದ ನಂತರ ತೀರ ಮತ್ತು ಘಟ್ಟದ ಕೆಳಭಾಗಗಳಲ್ಲಿ…

15 hours ago

‘ಅರ್ಧ ಎಕರೆ ಸಾಕು… ಹಳ್ಳಿಯಲ್ಲೇ ಜೀವನ ಮಾಡಬಹುದು’ ಈ ಮಾತಿನ ಹಿಂದೆ ಇರುವ ದೊಡ್ಡ ಪ್ರಶ್ನೆ ಏನು..?

“ಅರ್ಧ ಎಕರೆ ಇದ್ದರೂ ಕುಟುಂಬ ಜೀವನ ಮಾಡಬಹುದು” ಎನ್ನುವ ರೈತನ ಮಾತು, ಭೂಮಿ…

21 hours ago

ಭಾರತದ ಆಹಾರ ನಾಳೆ ಬೆಳೆಯೋರು ಯಾರು? ರೈತರ ವಯಸ್ಸು ಹೆಚ್ಚುತ್ತಿದೆ, ಯುವಕರು ಕೃಷಿಯಿಂದ ದೂರವಾಗುತ್ತಿದ್ದಾರೆ..!

ಭಾರತ ಯುವ ದೇಶವಾಗಿದ್ದರೂ ಕೃಷಿಕರ ಸರಾಸರಿ ವಯಸ್ಸು 50–55 ವರ್ಷವಾಗಿದ್ದು, ಗ್ರಾಮೀಣ ಯುವಕರಲ್ಲಿ…

1 day ago