ಧರ್ಮಸ್ಥಳ : ರಾಜ್ಯದಲ್ಲೇ ಇಂದು ಬರದ ಲಕ್ಷಣ ಇದೆ. ಈ ವರ್ಷ ದ.ಕ ಜಿಲ್ಲೆಯಲ್ಲಿ ಭಾರೀ ನೀರಿನ ಸಮಸ್ಯೆಯಾಗಿದೆ. ಧರ್ಮಸ್ಥಳದಲ್ಲೂ ಈ ಸಮಸ್ಯೆ ಇದೆ. ಹೀಗೇ ಮುಂದುವರಿದರೆ ದೇವರ ಅಭಿಷೇಕಕ್ಕೂ ನೀರಿನ ಸಮಸ್ಯೆ ಕಾಡಬಹುದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಆತಂಕ ವ್ಯಕ್ತಪಡಿಸಿದ್ದಾರೆ.
ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನೀರಿಗೆ ಬರದ ಹಿನ್ನೆಲೆಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮಾಧ್ಯಮದವರೊಂದಿಗೆ ಮಾತನಾಡಿದರು.
ಘಟ್ಟದ ಭಾಗದಿಂದ ನೀರು ಹರಿದು ಬರುವುದರಿಂದ ನೇತ್ರಾವತಿಯಲ್ಲಿ ನೀರು ಹೆಚ್ಚಿರುತ್ತದೆ. ಆದರೆ ಈ ಬಾರಿ ಮಳೆ ಸಾಕಷ್ಟಿದ್ದರೂ ನೇತ್ರಾವತಿಯಲ್ಲಿ ನೀರು ಈಗ ಬತ್ತಿದೆ. ಈಗ ಹವಾಮಾನ ಇಲಾಖೆ ಇನ್ನೂ ಹತ್ತು ದಿನ ಮಳೆ ಇಲ್ಲ ಎಂದಿರುವುದರಿಂದ ಕ್ಷೇತ್ರ ದರ್ಶನ ಮುಂದೂಡಿ ಎಂದು ವಿನಂತಿ ಮಾಡುತ್ತೇವೆ ಎಂದರು.
ಈಗ ಕಿಂಡಿ ಅಣೆಕಟ್ಟು ಕಟ್ಟಿದ ಕಾರಣ ತೀರ್ಥ ಮತ್ತು ಅಭಿಷೇಕಕ್ಕೆ ನೀರಿದೆ. ಈಗ ಅಲ್ಲಿ ತೀರ್ಥ ಗುಂಡಿಯಲ್ಲೂ ನೀರು ಕಡಿಮೆ ಆಗುತ್ತಿದೆ. ಈ ಹಿಂದೆಯೂ ಈ ರೀತಿ ಆಗಿದೆ, ಇಷ್ಟು ತೀವ್ರವಾಗಿ ಆಗಿಲ್ಲ ಎಂದರು.
ಆರ್ಥಿಕತೆಯ ಬಗ್ಗೆ ಸಮರ್ಥವಾಗಿ ವಿಷಯ ಮಂಡಿಸಬಲ್ಲ ಕೃಷಿಕ, ಸಾಮಾಜಿಕ ಮುಖಂಡ ವಿಶ್ವೇಶ್ವರ ಭಟ್…
ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ಮಲೆನಾಡಿನ ಗ್ರಾಮೀಣ ಭಾಗಕ್ಕೂ ಶುದ್ಧವಾಗಿರುವ ಕುಡಿಯುವ…
ದೇಶಾದ್ಯಂತ ನಗರೀಕರಣ ಬೆಳವಣಿಗೆಯಾದಂತೆ ಸಮುದಾಯದ ಸ್ಥಳಗಳು ಕಣ್ಮರೆಯಾಗಿವೆ. ಕರಾವಳಿ ನಗರದಾದ್ಯಂತ ಸುಮಾರು 250…
ರಾಜ್ಯದ ಕಾಡಂಚಿನ ಪ್ರದೇಶದಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಸರ್ಕಾರ…
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಾಳೆ ಮಂಡಿಸಲಿರುವ ಕೇಂದ್ರ ಬಜೆಟ್ 2025…