ಕಾಸರಗೋಡು ಜಿಲ್ಲೆಯ ಪಡ್ರೆ ಗ್ರಾಮ ನೀರ ನೆಮ್ಮದಿಯತ್ತ ಎಂಬ ಯೋಜನೆಯನ್ನು ಕಳೆದ ವರ್ಷ ಹಮ್ಮಿಕೊಂಡಿದೆ. ಪಡ್ರೆ ಗ್ರಾಮದಲ್ಲಿ ಜಲಸಂರಕ್ಷಣೆ ಹಾಗೂ ಜಲ ಅಭಿಯಾನ ಕಳೆದ ವರ್ಷ ಹಮ್ಮಿಕೊಂಡಿತ್ತು. ಇದಕ್ಕಾಗಿ ಪಡ್ರೆಯ ಹೊಳೆಯಲ್ಲಿ ಹೊಳೆಯ ಆಸುಪಾಸಿನ ಜನರೆಲ್ಲಾ ಹೊಳೆ ನಡಿಗೆ ಮೂಲಕ ಅಧ್ಯಯನ ಮಾಡಿ ಎಲ್ಲಿ , ಹೇಗೆ ಕಟ್ಟ ಕಟ್ಟಬೇಕು, ಜಲಸಂರಕ್ಷಣೆ ಮಾಡಬೇಕು ಎಂದು ಯೋಜನೆ ಹಾಕಿಕೊಂಡಿದ್ದರು. ಈ ವರ್ಷ ಅದರ ಅನುಷ್ಠಾನ. ಈ ಅನುಷ್ಠಾನ ಕಾರ್ಯಕ್ರಮವೂ ಸಮಾಜದ ಇತರ ಕಡೆಗಳಲ್ಲಿ ಪ್ರೇರಣೆಯಾಗಬೇಕು ಎಂಬ ಉದ್ದೇಶದಿಂದ ಇನ್ನೊಂದು ವಿನೂತನ ಜಾಗೃತಿ ಅಭಿಯಾನ “ಚಿಣ್ಣರೇ, ಕಟ್ಟ ನೋಡೋಣು ಬನ್ನಿ…”
ಮುಂದಿನ ಒಂದು ತಿಂಗಳು ತೋಡುಗಳಿಗೆ ಕಟ್ಟ ಕಟ್ಟುವ ಸಮಯ. ಕಾಸರಗೋಡು ಜಿಲ್ಲೆಯ ಪಡ್ರೆ ಗ್ರಾಮ ಈ ವರ್ಷ ಈ ಋತುವಿನಲ್ಲಿ ಹೊಸದೊಂದು ಕಾರ್ಯಕ್ರಮ ಹಾಕಿಕೊಂಡಿದೆ. ಅದುವೇ ಎಳೆ ಪೀಳಿಗೆಗೆ ಕಟ್ಟದ ಬಗ್ಗೆ ಕಂಡರಿವು ಮೂಡಿಸುವ ಯೋಜನೆ.
ಡಿ.1 ರಿಂದ ಪಡ್ರೆಯಲ್ಲಿ ’ನೀರ ನೆಮ್ಮದಿಯತ್ತ ಪಡ್ರೆ’ ( ನೀನೆಪ) ತಂಡ ’ಕಟ್ಟ ಕಟ್ಟುವ ಹಬ್ಬ’ ಆಚರಿಸಲು ತೊಡಗುತ್ತದೆ. ಡಿಸೆಂಬರ್ ಕೊನೆಯ ವರೆಗೆ ಇಲ್ಲಿ ಸುಮಾರು ಎರಡು- ಮೂರು ಡಜನ್ ಕಟ್ಟಗಳ ನಿರ್ಮಾಣವಾಗಲಿದೆ. ಈ ಸಂದರ್ಭದಲ್ಲಿ ಊರ – ಪರವೂರವರಗೆ ಮತ್ತು ಸುತ್ತುಮುತ್ತಲಿನ ಶಾಲೆಯ ಎಳೆಯರಿಗೆ ಈ ತಂತ್ರಜ್ಞಾನದ ತಿಳಿವಳಿಕೆ ಹಂಚುವುದನ್ನೇ ಈ ತಂಡ ಹಬ್ಬದ ಉದ್ದೇಶವಾಗಿಟ್ಟುಕೊಂಡಿದೆ.
ನೆರೆಯ ಕೇರಳ – ಕರ್ನಾಟಕದ ಶಾಲಾ ಕಾಲೇಜಿನ ಅಧ್ಯಾಪಕರು ನೀನೆಪದ ’ಕಟ್ಟ ದರ್ಶನ’ದ ಸಂಯೋಜಕರನ್ನು ಸಂಪರ್ಕಿಸಿ ದಿನ ಗೊತ್ತು ಮಾಡಿಕೊಂಡು ಪಡ್ರೆಗೆ ಭೇಟಿ ನೀಡಬಹುದು. ಕಟ್ಟ ನಿರ್ಮಾಣದ ರೀತಿ, ಅದರ ಮಹತ್ವಗಳ ಬಗ್ಗೆ ಅಲ್ಲಲ್ಲಿನ ಕೃಷಿಕ ಸಂಪನ್ಮೂಲ ವ್ಯಕ್ತಿಗಳು ತಿಳಿಸಿಕೊಡುತ್ತಾರೆ.
ಈ ಅವಕಾಶವನ್ನು ಸುತ್ತಲಿನ ಶಾಲಾ-ಕಾಲೇಜುಗಳ ಪರಿಸರ ಕ್ಲಬ್ಬು, ಎನ್ನೆಸ್ಸೆಸ್ ಇತ್ಯಾದಿ ಘಟಕಗಳ ಪ್ರತಿನಿಧಿಗಳು, ಕೃಷಿಕರ ಗುಂಪುಗಳು ಬಳಸಿಕೊಳ್ಳಬಹುದು. ಆಸಕ್ತರು ’ಕಟ್ಟ ದರ್ಶನ’ದ ಸಂಯೋಜಕ ಶ್ರೀಹರಿ ಆರ್ ಅವರನ್ನು (94950 66261) ಸಂಪರ್ಕಿಸಬಹುದು.
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…