ನವದೆಹಲಿ: ತನ್ನ ಆಡಳಿತದ ಎರಡನೇ ಅವಧಿಯ ಮೊದಲ ನೂರು ದಿನ ದೇಶದಲ್ಲಿ ಬಹು ದೊಡ್ಡ ಬದಲಾವಣೆಗೆ ಮತ್ತು ಅಭಿವೃದ್ಧಿಗೆ ಮುನ್ನುಡಿ ಬರೆದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮೋದಿ ನೇತೃತ್ವದ ಎನ್ಡಿಎ ಒಕ್ಕೂಟದ ಕೇಂದ್ರ ಸರ್ಕಾರ ಎರಡನೇ ಬಾರಿ ಅಧಿಕಾರಕ್ಕೆ ಬಂದು ಇಂದಿಗೆ ನೂರು ದಿನ ಪೂರೈಸಿದ ಹಿನ್ನೆಲೆಯಲ್ಲಿ ಮಾತನಾಡಿದ ಅವರು
ಈ ಬಾರಿ ಜನರು ನಮಗೆ ಅಗಾಧವಾದ ಬೆಂಬಲವನ್ನು ನೀಡಿ ಮತ್ತೆ ಅಧಿಕಾರ ನೀಡಿದ್ದಾರೆ. 100 ದಿನಗಳಲ್ಲಿ ನಾವು ಏನೇ ಮಾಡಿದ್ದರು ಅಥವಾ ಏನೇ ದೊಡ್ಡ ನಿರ್ಧಾರಗಳನ್ನು ತೆಗೆದುಕೊಂಡಿದ್ದರು ಅದು ಜನರ ಮೇಲೆ ನಂಬಿಕೆ ಇಟ್ಟು ಹಾಗೂ ಅವರ ಬೆಂಬಲದೊಂದಿಗೆ ಮಾಡಿದ್ದೇವೆ. ನಮ್ಮ ನಿರ್ಧಾರಗಳ ಹಿಂದೆ ದೇಶದ 130 ಕೋಟಿ ಜನರ ಸ್ಫೂರ್ತಿ ಇದೆ ಎಂದು ಹೇಳಿದರು.
ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು ಹರಿಯಾಣದ ರೋಹಟಕ್ನಲ್ಲಿ ನಡೆದ ಸಮಾವೇಶದಲ್ಲಿ ಈ ವರ್ಷದ ಮೊದಲ ಸಂಸತ್ತಿನಲ್ಲಿ ಕೈಗೊಂಡ ನಿರ್ಣಯಗಳ ಬಗ್ಗೆ ಮೋದಿ ಪ್ರಸ್ತಾಪಿಸಿದರು. ಈ ವರ್ಷ ಸಾಕಷ್ಟು ಮಸೂದೆಗಳು ಸಂಸತ್ತಿನಲ್ಲಿ ಅಂಗೀಕಾರವಾದವು. ಕಳೆದ 60 ವರ್ಷಗಳ ಸಂಸತ್ತಿನ ಕಲಾಪದಲ್ಲಿ ನಡೆಯದ ಸಾಕಷ್ಟು ಕೆಲಸಗಳು ಈ ಬಾರಿ ನಡೆದವು ಎಂದು ಮೋದಿ ಹೇಳಿದರು.
ತ್ರಿವಳಿ ತಲಾಕ್ ಅನ್ನು ಅಪರಾಧ ಎಂದು ಪರಿಗಣಿಸಿದ್ದು, ಮಾಹಿತಿ ಹಕ್ಕು ಕಾಯ್ದೆ ತಿದ್ದುಪಡಿ ಮತ್ತು ಮೋಟಾರು ಕಾಯ್ದೆಯನ್ನು ತಿದುಪಡಿ ಮಾಡಲಾಯಿತು. ಇದರೊಂದಿಗೆ ಮಹತ್ವದ ನಿರ್ಣಯವಾದ ಸಂವಿಧಾನದ ಆರ್ಟಿಕಲ್ 370 ಮತ್ತು 35(ಎ) ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಮತ್ತು ಅಧಿಕಾರವನ್ನು ರದ್ದುಗೊಳಿಸಿ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡುವ ನಿರ್ಣಯವನ್ನು ತೆಗದುಕೊಳ್ಳಲಾಯಿತು ಇದು ಮಹತ್ವದ ಕೆಲಸಗಳು ಎಂದು ಅವರು ಬಣ್ಣಿಸಿದರು.
ಯಕ್ಷಗಾನ ಕಲಾವಿದ ಕುಂಬಳೆ ಶ್ರೀಧರ ರಾವ್ ಅವರ ಸ್ಮೃತಿ ಕಾರ್ಯಕ್ರಮ ಹಾಗೂ ʼಕಲಾ…
ಬಂಗಾಳಕೊಲ್ಲಿಯ ವಾಯುಭಾರ ಕುಸಿತವು ಶಿಥಿಲಗೊಳ್ಳುತ್ತಿದ್ದು, ಬಂಗಾಳಕೊಲ್ಲಿಯ ಕಡೆಯಿಂದ ಗಾಳಿಯು ಹಿಂಗಾರು ರೀತಿ ಬೀಸುತ್ತಿರುವುದರಿಂದ…
ಬಾಂಗ್ಲಾವನ್ನು ಕಟ್ಟಿಹಾಕುವ ಎಲ್ಲಾ ಭೌಗೋಳಿಕ ಅನುಕೂಲಗಳಿದ್ದರೂ ಸರಕಾರವು ಅಂತಹ ಕ್ರಮಗಳಿಗೆ ಉದ್ಯುಕ್ತವಾಗಿಲ್ಲ. ಬಾಂಗ್ಲಾವನ್ನು…
26.12.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಇಂದು ರಾಷ್ಟ್ರೀಯ ರೈತ ದಿನ. ಈ ದೇಶದಲ್ಲಿ ಕೃಷಿಯ ಪ್ರಾಧಾನ್ಯತೆ ಬಹಳಷ್ಟಿದೆ. ಕೃಷಿಗಾಗಿ…
ಬಂಗಾಳಕೊಲ್ಲಿಯ ವಾಯುಭಾರ ಕುಸಿತವು ಡಿ.26 ರಂದು ತಮಿಳುನಾಡು ಕರಾವಳಿಯ ಬಳಿ ಶಿಥಿಲಗೊಳ್ಳುತ್ತಿದ್ದಂತೆಯೇ ಹಿಂಗಾರು…