ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ನೆರೆಹಾವಳಿಯಿಂದ ಕೃಷಿ ಭೂಮಿಗಳು ಹಾಗೂ ಕಿಂಡಿಅಣೆಕಟ್ಟುಗಳು, ಸೇತುವೆಗಳು ಹಾನಿಯಾಗಿದ್ದು ಇವುಗಳ ದುರಸ್ತಿ ಗೆ 30 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಲಾಗಿದೆ ಎಂದು ರಾಜ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಮತ್ತು ಸಣ್ಣ ನೀರಾವರಿ ಇಲಾಖಾ ಸಚಿವ ಜೆ.ಸಿ ಮಾಧುಸ್ವಾಮಿ ಹೇಳಿದ್ದಾರೆ.
ಅವರು ಶನಿವಾರ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಬಳಿಕ ಪ್ರವಾಹ ಪೀಡಿತ ಪ್ರದೇಶಗಳಾದ ಕುಕ್ಕಾವು, ಪರ್ಲಾಣಿ, ಚಾರ್ಮಾಡಿ ಅರಣೆಪಾದೆ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಅಣೆಕಟ್ಟುಗಳು, ಸೇತುವೆಗಳು ಹಾನಿಯಾಗಿದ್ದು ಮಳೆ ಕಡಿಮೆಯಾದ ತಕ್ಷಣ ಹಾನಿಯಾದ ಕಿಂಡಿಅಣೆಕಟ್ಟುಗಳ ದುರಸ್ಥಿ ಕಾರ್ಯ ಮಾಡಲಾಗುವುದು. ಅಲ್ಲದೆ ನೀರು, ಕೃಷಿ ಭೂಮಿಗೆ ಬರದ ರೀತಿಯಲ್ಲಿ ತಡೆಗೋಡೆ ನಿರ್ಮಾಣ ಮಾಡುವ ಬಗ್ಗೆ ಇಲ್ಲಿನ ಶಾಸಕರು ಈಗಾಗಲೇ ಮನವಿಮಾಡಿದ್ದು ಈ ಬಗ್ಗೆ ಇಲಾಖೆ ಗಂಭೀರವಾಗಿ ಚಿಂತಿಸಿದೆ ಎಂದರು.
ಶಾಸಕ ಹರೀಶ್ ಪೂಂಜಾ ತಾಲೂಕಿನಲ್ಲಿ ಹಾನಿಗೊಳಗಾದ ಪ್ರದೇಶದ ಬಗ್ಗೆ ಸಚಿವರಲ್ಲಿ ಮಾಹಿತಿ ನೀಡಿದರು. ಬಳಿಕ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದರು. ಇದಕ್ಕೆ ಸಚಿವರು ಅನುದಾಣ ಬಿಡುಗಡೆಗೊಳಿಸುವ ಕುರಿತು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಚಾರ್ಮಾಡಿ ಗ್ರಾ.ಪಂ ಅಧ್ಯಕ್ಷೆ ಶೈಲಜಾ, ಜಿ.ಪಂ ಸದಸ್ಯೆ ಸೌಮ್ಯಲತಾ ಜಯಂತ್ ಗೌಡ, ತಾ.ಪಂ ಸದಸ್ಯ ಕೊರಗಪ್ಪ ಗೌಡ, ಸಣ್ಣ ನೀರಾವರಿ ಇಲಾಖಾ ಅಧೀನ ಕಾರ್ಯದರ್ಶಿ ಮೃತ್ಯುಂಜಯ ಸ್ವಾಮಿ, ಸಹಾಯಕ ಇಂಜಿನಿಯರ್ ಪ್ರಸನ್ನ, ರಾಕೇಶ್, ತಹಶಿಲ್ದಾರ್ ಗಣಪತಿ ಶಾಸ್ತ್ರಿ, ತಾ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯರಾಮ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ, ಜಯಕೀರ್ತಿ, ಉಪಸ್ಥಿತರಿದ್ದರು.
ಎಂತ ಮಾರ್ರೇ.... ಈ ಮನುಷ್ಯರಿಗೆ ಒಂದು ಸೊಲ್ಪ ಹೊತ್ತು ಕರೆಂಟ್ ಹೊದ್ರೆ ಕೂಡ್ಲೆ…
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಸುಳ್ಯ, ಪುತ್ತೂರು,ಚೆಂಬು ಪ್ರದೇಶದ ಕೆಲವು ಕಡೆ 100…
ಬಿತ್ತನೆ ಬೀಜ ಮತ್ತು ರಸಗೊಬ್ಬರವನ್ನು ಕಾಳಸಂತೆಯಲ್ಲಿ ಮಾರಾಟಮಾಡುವವರು ಮತ್ತು ಕೃತಕ ಅಭಾವ ಸೃಷ್ಟಿಸುವವರ…
ರೈತರು ಉತ್ತಮ ಇಳುವರಿ ಪಡೆಯಲು ಡಿಎಪಿ ಗೊಬ್ಬರಕ್ಕೆ ಪರ್ಯಾಯವಾಗಿ ಸಂಯುಕ್ತ ರಸಗೊಬ್ಬರ ಬಳಸಲು…
‘ಏಕಲವ್ಯ’ – ಈ ಪದವು ಸಾಧನೆಯ ಐಕಾನ್. ಪರ್ಯಾಯ ಪದ. ಸಾಧನೆಗೆ ಜಾತಿ,…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490