ಮಳೆಗಾಲ ದೂರವಾಗುತ್ತಿದೆಯಾ ? ಹವಾಮಾನ ಇಲಾಖೆಯ ವರದಿ ಹಾಗೂ ಮಳೆ ಬಿದ್ದ ಲೆಕ್ಕದ ಬಗ್ಗೆ ಬಾಳಿಲದ ಪಿ ಜಿ ಎಸ್ ಎನ್ ಪ್ರಸಾದ್ ಅವರು ಮಾಡಿರುವ ವಿಶ್ಲೇಷಣೆ ಇಲ್ಲಿದೆ…..
ಹವಾಮಾನ ಇಲಾಖೆಯ ಪ್ರಕಾರ ನಿನ್ನೆಯಿಂದ ದೇಶದ ವಾಯುವ್ಯ ಭಾಗದಿಂದ ನೈರುತ್ಯ ಮುಂಗಾರು ಮಾರುತದ ಹಿಂತೆಗೆತ ಆರಂಭವಾಗಿದೆ.
1961 ರ ಬಳಿಕ ಅತ್ಯಂತ ವಿಳಂಬವಾಗಿ ಹಿಂದೆ ಸರಿಯುತ್ತಿದೆ. ಇಲಾಖೆಯ ಪ್ರಕಟಣೆ ಪ್ರಕಾರ ನಿನ್ನೆ ಉತ್ತರ ರಾಜಸ್ಥಾನ,ಪಂಜಾಬ್ ಹಾಗೂ ಹರ್ಯಾಣದ ಕೆಲವು ಭಾಗಗಳಿಂದ ಮುಂಗಾರು ಮಳೆ ಹಿಂದೆ ಸರಿದಿದೆ. ಸಾಮಾನ್ಯವಾಗಿ ಜೂನ್ 1 ಭಾರತಕ್ಕೆ ಕಾಲಿಡುವ ನೈರುತ್ಯ ಮುಂಗಾರು ಸೆ.1 ರಿಂದ ಆರಂಭಿಸಿ ಸೆ.30 ರ ವೇಳೆಗಾಗುವಾಗ ಇಡೀ ದೇಶದಿಂದ ಹಿಂದೆ ಸರಿಯುವುದು ವಾಡಿಕೆ. ಈ ಬಾರಿ ತಡವಾಗಿ ಜೂನ್ 8 ರಂದು ಕೇರಳಕ್ಕೆ ಪ್ರವೇಶಿಸಿದ ನೈರುತ್ಯ ಮುಂಗಾರು ಇದೀಗ ಅತ್ಯಂತ ತಡವಾಗಿ ಹಿಂದೆ ಸರಿಯುತ್ತಿದೆ. ಈ ವರ್ಷದ ಆರಂಭದಲ್ಲಿ ಮುಂಗಾರು ಮಳೆಯ ಕೊರತೆ ಇರಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಎಲ್ಲ ಮುನ್ಸೂಚನೆಗಳನ್ನು ಸುಳ್ಳಾಗಿಸಿ ದೇಶದಾದ್ಯಂತ ಶೇ.10 ರ ಅಧಿಕ ಮಳೆ ದಾಖಲಾಯಿತು.!
ಮಳೆಯೊಂದಿಗೆ ಮಾತುಕತೆ:
ಇಂದಿನಿಂದ ಮಹಾ/ಮಳೆ ನಕ್ಷತ್ರ ಚಿತ್ರಾ ಆರಂಭ
ಮಹಾ/ಮಳೆ ನಕ್ಷತ್ರ ಹಸ್ತಾ ( ಸೆ.27 – ಅ.10) ಅವಧಿಯಲ್ಲಿ ದಾಖಲಾದ ಮಳೆ = 166 ಮಿ.ಮೀ.( ಕಳೆದ ವರ್ಷ 148 ಮಿ.ಮೀ.)
ಸರಾಸರಿ (ಮಿ.ಮೀ.ಗಳಲ್ಲಿ)
1976 – 2000 = 189
2001 – 2019 = 143
1976 – 2019 = 169
ಗರಿಷ್ಟ 1999 ರಲ್ಲಿ ದಾಖಲಾದ 445
ಕನಿಷ್ಟ 2005 ರಲ್ಲಿ ದಾಖಲಾದ 024
Advertisement
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…