ಸುಳ್: ಸುಳ್ಯ ನಗರ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸುವ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಮೆ.12ಕ್ಕೆ ಅಂತಿಮಗೊಳಿಸಲಾಗುವುದು ಎಂದು ಮೂಲಗಳು ತಿಳಿಸಿದೆ.
20 ವಾರ್ಡ್ ಗಳ ಪೈಕಿ 12 ವಾರ್ಡ್ ಗಳಲ್ಲಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ. ಇವರಲ್ಲಿ ನಾಮಪತ್ರ ಸಲ್ಲಿಕೆಗೆ ಅಗತ್ಯವಾದ ದಾಖಲೆಯನ್ನು ಸಿದ್ಧಪಡಿಸಲು ಸೂಚನೆ ನೀಡಲಾಗಿದೆ. ಉಳಿದ ವಾರ್ಡ್ ಗಳಲ್ಲಿ 12ರಂದು ಜಿಲ್ಲಾ ಮುಖಂಡರ ಉಪಸ್ಥಿತಿಯಲ್ಲಿ ಚರ್ಚೆ ನಡೆಸಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗುವುದು ಎಂದು ತಿಳಿದು ಬಂದಿದೆ.
5 ವಾರ್ಡ್ ಗಳಲ್ಲಿ ಆಯ್ಕೆ ಬಿಕ್ಕಟ್ಟು:
ಬಹುತೇಕ ವಾರ್ಡ್ ಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಸುಲಲಿತವಾಗಿ ನಡೆದಿದ್ದರೂ ನಗರದ ಐದು ವಾರ್ಡ್ ಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿದೆ. ಕೆರೆಮೂಲೆ, ಬೂಡು, ನಾವೂರು, ಬೋರುಗುಡ್ಡೆ ಮತ್ತು ಬೀರಮಂಗಲ ವಾರ್ಡ್ ಗಳಲ್ಲಿ ಅಭ್ಯರ್ಥಿ ಆಕಾಂಕ್ಷಿಗಳ ಪಟ್ಟಿ ಉದ್ದ ಇರುವ ಕಾರಣ ಆಯ್ಕೆ ಅಂತಿಮಗೊಳಿಸಿಲ್ಲ.
ಕೆರೆಮೂಲೆ ವಾರ್ಡ್ ನಲ್ಲಿ ಕೆ.ಪಿ.ಸಿ.ಸಿ.ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ, ದಿನೇಶ್ ಅಂಬೆಕಲ್ಲು, ಬೂಡು ವಾರ್ಡ್ ನಲ್ಲಿ ಕೆ.ಗೋಕುಲ್ ದಾಸ್. ರಿಯಾಝ್ ಕಟ್ಟೆಕ್ಕಾರ್, ಲಕ್ಷ್ಮಣ ಶೆಣೈ, ಬೀರಮಂಗಲ ವಾರ್ಡ್ ನಲ್ಲಿ ಎಂ.ವೆಂಕಪ್ಪ ಗೌಡ, ಧೀರಾ ಕ್ರಾಸ್ತಾ, ನಾವೂರು ವಾರ್ಡ್ ನಲ್ಲಿ ಕೆ.ಎಂ.ಮುಸ್ತಫಾ, ಶರೀಫ್ ಕಂಠಿ, ಶಾಫಿ ಕುತ್ತಮೊಟ್ಟೆ, ಆರ್.ಕೆ.ಮಹಮ್ಮದ್,
ಬೋರುಗುಡ್ಡೆ ವಾರ್ಡ್ ನಲ್ಲಿ ಕೆ.ಎಂ.ಮುಸ್ತಫಾ, ಆರ್.ಕೆ.ಮಹಮ್ಮದ್, ಸಿದ್ದಿಕ್, ರಫೀಕ್ ಪಡು ಮತ್ತಿತರ ಹೆಸರುಗಳು ಕೇಳಿ ಬರುತಿವೆ. ಐದು ವಾರ್ಡ್ ಗಳ ಪೈಕಿ ನಾವೂರು, ಬೋರುಗುಡ್ಡೆ, ಬೂಡು ವಾರ್ಡ್ ಗಳಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ದು ಆಯ್ಕೆ ಕ್ಲಿಷ್ಟಕರವಾಗಿದೆ. ಪಕ್ಷದಿಂದ ಸೀಟ್ ಸಿಗದಿದ್ದರೆ ಪಕ್ಷೇತರನಾಗಿ ನಾಮ ಪತ್ರ ಸಲ್ಲಿಸುವುದು ಖಚಿತ ಎಂದು ಕೆಲವು ಯುವ ಕಾಂಗ್ರೆಸ್ ಮುಖಂಡರು ಈಗಾಗಲೇ ಹೇಳಿಕೊಂಡಿದ್ದಾರೆ.
ಮುಂದಿನ ಎರಡು ಮೂರು ದಿನಗಳಲ್ಲಿ ದೇಶದ ವಾಯುವ್ಯ ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ…
ವಿಧಾತ್ರಿ ಎಂ, 6 ನೇ ತರಗತಿ, ರೋಟರಿ ಮಿಡ್‌ಟೌನ್ ಶಾಲೆ, ಮೈಸೂರು | …
ನೈನಿಕಾ.ಬಿ.ಸಿ , 4ನೇ ತರಗತಿ , ಸೈಂಟ್ ಆನ್ಸ್ ಇಂಗ್ಲಿಷ್ ಮಾಧ್ಯಮ ಶಾಲೆ,…
ನಯೋನಿಕಾ.ಬಿ.ಸಿ., 4 ನೇ ತರಗತಿ, ಸೈಂಟ್ ಆನ್ಸ್ ಶಾಲೆ ಕಡಬ | -…
ನಿಪಾ ವೈರಸ್ ಹರಡುವಿಕೆಯ ವಿರುದ್ಧ ರಾಜ್ಯವು ತನ್ನ ತಡೆಗಟ್ಟುವ ಕ್ರಮಗಳನ್ನು ತೀವ್ರಗೊಳಿಸಿದೆ ಎಂದು…
ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ವಿಶೇಷವಾದ ಸ್ಥಾನವನ್ನು ನೀಡಲಾಗಿದೆ. ದೇವರು ಹಾಗೂ ಗುರು…