ಸುಳ್ಯ: ಸುಳ್ಯ ನಗರ ಪಂಚಾಯತ್ ಚುನಾವಣೆಗೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಸುಳ್ಯ ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆಯಿತು.
ಶಾಸಕ ಎಸ್.ಅಂಗಾರ ಪ್ರಣಾಳಿಕೆ ಬಿಡುಗಡೆ ಮಾಡಿದರು. ನಗರ ಸಭೆಯಲ್ಲಿ ಇ-ಆಡಳಿತ, ಆನ್ ಲೈನ್ ಸೌಲಭ್ಯಕ್ಕೆ ಆದ್ಯತೆ, ನಾಗರಿಕರಿಗೆ ತ್ವರಿತ ಸೇವೆ, ಭ್ರಷ್ಟಾಚಾರ ರಹಿತ ಆಡಳಿತ, ಸಕಾಲ ಯಶಸ್ವಿ ನಿರ್ವಹಣೆಗೆ ಕ್ರಮ, ಖಾತೆ ಬದಲಾವಣೆ ಸರಳೀಕರಣ, ಕಟ್ಟಡ ಪರವಾನಗಿ, ಡೋರ್ ನಂಬ್ರ, ಖಾತೆ ಬದಲಾಣೆಗೆ ಏಕ ಗವಾಕ್ಷಿ, ಟ್ರೇಡ್ ಲೈಸೆನ್ಸ್ ಶುಲ್ಕ ಮರು ಪರಿಶೀಲನೆ, ನಗರದ ಸಮಗ್ರ ಅಭಿವೃದ್ಧಿಗೆ ಕ್ರಮ, ಶುದ್ಧ ಕುಡಿಯುವ ನೀರು, ಗುಣ ಮಟ್ಟದ ವಿದ್ಯುತ್, ಘನ ತ್ಯಾಜ್ಯ ವಿಲೇವಾರಿಗೆ ಶಾಶ್ವತ ಕ್ರಮ, ರಸ್ತೆ ಅಭಿವೃದ್ಧಿಗೆ ಕ್ರಮ, ನಿವೇಶನ ರಹೀತರಿಗೆ ನಿವೇಶನ, ವಸತಿ ರಹಿತರಿಗೆ ವಸತಿ ಸೌಲಭ್ಯ, ನ.ಪಂ.ನಲ್ಲಿ ದಾಖಲೆಗಳ ನಿರ್ವಹಣೆಗೆ ಪ್ರತ್ಯೇಕ ದಾಖಲೆ ಕೊಠಡಿ, ಇ-ಫೈಲಿಂಗ್ ವ್ಯವಸ್ಥೆ, ಶುಲ್ಕ ಪಾವತಿಗೆ ಮೆಸ್ಕಾಂ ಮಾದರಿಯಲ್ಲಿ ಕಿಯೋಸ್ಕ್ ಗಳ ಸ್ಥಾಪನೆ, ಕಟ್ಟಡ ನಿರ್ಮಾಣ ಪರವಾನಿಗೆಗೆ ಏಕ ಗವಾಕ್ಷಿ, ತೆರಿಗೆ ಪಾವತಿಗೆ ಆನ್ ಲೈನ್ ವ್ಯವಸ್ಥೆ, ಸೌಲಭ್ಯಗಳನ್ನು ಫಲಾನುಭವಿಗಳ ಖಾತೆಗೆ ನೇರ ಪಾವತಿ ವ್ಯವಸ್ಥೆ, ಜನನ ಮರಣ ಪತ್ರಗಳ ಶೀಘ್ರ ನೀಡಿಕೆಗೆ ಕ್ರಮ, ಕಾಮಗಾರಿಗಳ ಪಾರದರ್ಶಕ ಅನುಷ್ಠಾನಕ್ಕೆ ಅನುಷ್ಠಾನ ಸಮಿತಿ. ಪುರಭವನದ ಅಭಿವೃದ್ಧಿ, 25 ಜನವಸತಿ ಕೇಂದ್ರಗಳಲ್ಲಿ ಕುಡಿಯುವ ನೀರಿನ ಘಟಕ ಸ್ಥಾಪನೆ, ಕುಡಿಯುವ ನೀರು ಮತ್ತು ಅಂತರ್ಜಲ ವೃದ್ಧಿಗೆ ಪಯಸ್ವಿನಿ ನದಿಗೆ ನಾಗಪಟ್ಟಣ, ಕಾಂತಮಂಗಲ, ಓಡಬಾಯಿಯಲ್ಲಿ ಮತ್ತು ಕಂದಡ್ಕ ಹೊಳೆಗೆ ಕೊಡಿಯಾಲಬೈಲ್, ಮೊಗರ್ಪಣೆಯಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣ, ಒಳಚರಂಡಿ ಯೋಜನೆಯ ಸಮಗ್ರ ಅಭಿವೃದ್ಧಿ, ಕೊಳಚೆ ನೀರು, ದ್ರವ ತ್ಯಾಜ್ಯ ಸಂಸ್ಕರಣೆಗೆ ವೈಜ್ಞಾನಿಕ ತಂತ್ರಜ್ಞಾನ ಅಳವಡಿಕೆ, ಘನ ತ್ಯಾಜ್ಯ ನಿರ್ವಹಣೆಗೆ ವೈಜ್ಞಾನಿಕ ಕಸ ವಿಲೇವಾರಿ ಘಟಕ ಸ್ಥಾಪನೆ, ಕಸ ವಿಲೇವಾರಿ ತಪಾಸಣೆಗೆ ಮೊಬೈಲ್ ಸ್ಕ್ವಾಡ್, ಸ್ವಚ್ಛ ಸುಳ್ಯಕ್ಕೆ ಸಾರ್ವಜನಿಕ ಶೌಚಾಲಯಗಳ ನಿರ್ಮಾಣಕ್ಕೆ ಆದ್ಯತೆ, ಬೀದಿ ದೀಪಗಳಲ್ಲಿ ಸೌರ ವಿದ್ಯುತ್ ಅಳವಡಿಕೆ, ಮನೆಗಳಲ್ಲಿ ಸೋಲಾರ್ ಅಳವಡಿಸಿದವರಿಗೆ ತೆರಿಗೆಯಲ್ಲಿ ಶೇ.5 ರಿಯಾಯತಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ, ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಸಂಬಂಧಪಟ್ಟ ಶುಲ್ಕಕ್ಕೆ ಸಹಾಯಧನ, ಸರ್ಕಾರಿ ಸೇವೆಗಳ ಮಾಹಿತಿಗಾಗಿ ಸೇವಾ ಕೇಂದ್ರ ಸ್ಥಾಪನೆ, ಕಾಲೋನಿಗಳ ಸಂಪರ್ಕ ರಸ್ತೆಗಳ ಅಭಿವೃದ್ಧಿ ಪ್ರಣಾಳಿಕೆಯಲ್ಲಿ ನೀಡುವ ಪ್ರಮುಖ ಭರವಸೆಗಳು.
ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಪ್ರಕಾಶ್ ಹೆಗ್ಡೆ, ಸುಬೋದ್ ಶೆಟ್ಟಿ ಮೇನಾಲ, ನಗರ ಬಿಜೆಪಿ ಅಧ್ಯಕ್ಷ ಹಾಗು ನ.ಪಂ.ಅಭ್ಯರ್ಥಿವಿನಯಕುಮಾರ್ ಕಂದಡ್ಕ, ಅಭ್ಯರ್ಥಿಗಳಾದ ಹರೀಶ್ ಬೂಡುಪನ್ನೆ, ಶಶಿಕಲಾ ಎ, ಜಿ.ಪಂ.ಸದಸ್ಯರಾದ ಹರೀಶ್ ಕಂಜಿಪಿಲಿ, ಆಶಾ ತಿಮ್ಮಪ್ಪ, ಪುಷ್ಪಾವತಿ ಬಾಳಿಲ, ತಾ.ಪಂ.ಅಧ್ಯಕ್ಷ ಚನಿಯ ಕಲ್ತಡ್ಕ, ಉಪಾಧ್ಯಕ್ಷೆ ಶುಭದಾ ಎಸ್ ರೈ, ಸದಸ್ಯರಾದ ಪುಷ್ಪಾ ಮೇದಪ್ಪ, ಜಾಹ್ನವಿ ಪ್ರಮುಖರಾದ ಪಿ.ಕೆ.ಉಮೇಶ್, ಸೋಮನಾಥ ಪೂಜಾರಿ, ಗಿರೀಶ್ ಕಲ್ಲುಗದ್ದೆ, ವೇದಾವತಿ ಮಾಣಿಬೆಟ್ಟು ಉಪಸ್ಥಿತರಿದ್ದರು.