ಸುಳ್ಯ: ನಗರ ಪಂಚಾಯತ್ ಚುನಾವಣೆಯಲ್ಲಿ ಬಿರುಸಿನ ಮತದಾನ ನಡೆದಿದ್ದು ಸುಳ್ಯದಲ್ಲಿ ಶೇ. 75.68 ಮತದಾನ ನಡೆದಿದೆ.
ನಗರದ 14,093 ಮತದಾರರಲ್ಲಿ 10,665 ಮಂದಿ ಮತದಾರರು ಮತ ಚಲಾಯಿಸಿದ್ದಾರೆ. ಎರಡನೇ ವಾರ್ಡ್ ಕೊಯಿಕುಳಿಯಲ್ಲಿ ಅತೀ ಹೆಚ್ಚು ಅಂದರೆ ಶೇ.86.46 ಮತದಾನವಾಗಿದೆ. ಇಲ್ಲಿ 743 ಮತದಾರರಲ್ಲಿ 638 ಮಂದಿ ಮತ ಚಲಾಯಿಸಿದ್ದಾರೆ. ಒಂದನೇ ವಾರ್ಡ್ ದುಗ್ಗಲಡ್ಕದಲ್ಲಿ ಹೆಚ್ಚು ಅಂದರೆ ಶೇ.85.87 ಮತದಾನವಾಗಿದೆ. ಇಲ್ಲಿ 606 ಮತದಾರರಲ್ಲಿ 524 ಮಂದಿ ಮತ ಚಲಾಯಿಸಿದ್ದಾರೆ. 13ನೇ ವಾರ್ಡ್ ಬೂಡುವಿನಲ್ಲಿ 85.15 ಶೇ. ಮತ ಚಲಾವಣೆಯಾಗಿದೆ. ಇಲ್ಲಿ 404 ಮತದಾರರಲ್ಲಿ 344 ಮಂದಿ ಮತ ಚಲಾವಣೆ ಮಾಡಿದ್ದಾರೆ. ಎಂಟನೇ ವಾರ್ಡ್‍ನಲ್ಲಿ ಶೇ.63.64, ಏಳನೇ ವಾರ್ಡ್‍ನಲ್ಲಿ ಶೇ.63.81 ಕಡಿಮೆ ಮತದಾನ. 2013ರ ನಗರ ಪಂಚಾಯತ್ ಚುನಾವಣೆಯಲ್ಲಿ ಶೇ. 80.09 ಮತದಾನ ನಡೆದಿತ್ತು.
ವಾರ್ಡ್ ವಾರು ಶೇಕಡಾವಾರು ಮತದಾನ:
1(ದುಗ್ಗಲಡ್ಕ)-85.87
2(ಕೊಯಿಕುಳಿ)-86.47,
3(ಜಯನಗರ)-84.14,
4(ಶಾಂತಿನಗರ)-73.24,
5(ಹಳೆಗೇಟು)-73.21,
6(ಬೀರಮಂಗಲ)-75.09,
7(ಬಿಡಿಒ-ಅಂಬೆಟಡ್ಕ)-63.81,
8(ಕುರುಂಜಿಭಾಗ್)-63.64,
9(ಕುರುಂಜಿಗುಡ್ಡೆ)-78.29,
10(ಪುರಭವನ-ಕೇರ್ಪಳ)-76.70,
11(ಕೇರ್ಪಳ-ಭಸ್ಮಡ್ಕ)-77.81,
12(ಕೆರೆಮೂಲೆ)-68.71
13(ಬೂಡು)-85.15,
14(ಕಲ್ಲುಮುಟ್ಲು)-77.65,
15(ನಾವೂರು)-78.53,
16(ಕಾಯರ್ತೋಡಿ)-75.62,
17(ಬೋರುಗುಡ್ಡೆ)-73.66,
18(ಜಟ್ಟಿಪಳ್ಳ)-75.46.
19(ಮಿಲಿಟ್ರಿ ಗ್ರೌಂಡ್)-75.88,
20(ಕಾನತ್ತಿಲ)-70.18 ಶೇಖಡಾ ಮತದಾನವಾಗಿದೆ.
ಡಿಎಪಿ ರಸಗೊಬ್ಬರಗಳ ತ್ವರಿತ ಪೂರೈಕೆ ಹಾಗೂ ಲಭ್ಯತೆಯ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ ಸರ್ಕಾರವು…
ಬೆಳಗಾವಿ ಜಿಲ್ಲೆಯ ಗೋಕಾಕ, ಮೂಡಲಗಿ, ರಾಯಬಾಗ, ಚಿಕ್ಕೋಡಿ ಹುಕ್ಕೇರಿ ಹಾಗೂ ಬಾಗಲಕೋಟ ಜಿಲ್ಲೆಯ…
ಕೊಂಕಣ ರೈಲಿನ ವಿಲೀನಕ್ಕೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸಹಮತ ವ್ಯಕ್ತಪಡಿಸಿದ್ದಾರೆ ಎಂದು…
ಬೇಸಗೆಯ ಅವಧಿಯಲ್ಲಿ ಅಂದರೆ ನವೆಂಬರ್ ಬಳಿಕ ಮಂಗನ ಜ್ವರ ಕಾಯಿಲೆ ಕಾಣಿಸಿಕೊಳ್ಳುವ ಸಾಧ್ಯತೆ…
ಉತ್ತರ ಶ್ರೀಲಂಕಾ ಕರಾವಳಿಯ ಬಳಿ ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವು ಕೇಂದ್ರೀಕೃತವಾಗಿದೆ…
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆಗೆ ಎಲೆಚುಕ್ಕಿ ಹಾಗೂ ಹಳದಿ…