ಸುಳ್ಯ. ನಗರ ಪಂಚಾಯತ್ ಚುನಾವಣೆಗೆ ಬಿಜೆಪಿಯ 20 ವಾರ್ಡ್ ಗಳಲ್ಲಿಯೂ ಅಭ್ಯರ್ಥಿ ಘೋಷಣೆ ಪೂರ್ತಿಯಾಗಿದ್ದು ಕಳೆದ ಆಡಳಿತ ಮಂಡಳಿಯಲ್ಲಿದ್ದ ಯಾವ ಸದಸ್ಯರಿಗೂ ಈ ಬಾರಿ ಟಿಕೇಟ್ ನೀಡಿಲ್ಲ. ಸಂಪೂರ್ಣ ಹೊಸ ಮುಖಗಳ ತಂಡವನ್ನು ಕಣಕ್ಕಿಳಿಸಲಾಗಿದೆ.
ಸತತ ಮೂರು ಬಾರಿ ಆಡಳಿತ ಚುಕ್ಕಾಣಿ ಹಿಡಿದಿದ್ದ ಬಿಜೆಪಿಗೆ ಸಹಜವಾಗಿ ಎದುರಾಗಬಹುದಾದ ಆಡಳಿತ ವಿರೋಧಿ ಅಲೆಯನ್ನು ಎದುರಿಸಲು ಹೊಸ ತಂತ್ರ ರೂಪಿಸಿದೆ. ಕಳೆದ ಬಾರಿ ಅಧ್ಯಕ್ಷರಾಗಿದ್ದ ಎನ್.ಎ.ರಾಮಚಂದ್ರ, ಪ್ರಕಾಶ್ ಹೆಗ್ಡೆ, ಶೀಲಾವತಿ ಮಾಧವ ಈ ಮೂವರು ಈ ಬಾರಿ ಕಣದಲ್ಲಿ ಇಲ್ಲ. ಹಿರಿಯ ಸದಸ್ಯರಾದ ಗೋಪಾಲ ನಡುಬೈಲು, ರಮಾನಂದ ರೈ, ಮೋಹಿನಿ ನಾಗರಾಜ್, ಮೀನಾಕ್ಷಿ ಕೂಡ ಈ ಬಾರಿ ಬಿಜೆಪಿ ಅಭ್ಯರ್ಥಿ ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ. ಮಾಜಿ ಸದಸ್ಯರ ಪೈಕಿ ಸ್ಥಾನ ಪಡೆದವರು ಸರೋಜಿನಿ ಪೆಲ್ತಡ್ಕ ಮಾತ್ರ. 2008-13ರ ಅವಧಿಯ ನ.ಪಂ.ನಲ್ಲಿ ಸರೋಜಿನಿ ಸದಸ್ಯರಾಗಿದ್ದರು. ಪ್ರತಿ ವಾರ್ಡ್‍ಗಳ ಕಾರ್ಯಕರ್ತರ ಸೂಚನೆಯ ಮೇರೆಗೆ ಅಭ್ಯರ್ಥಿಗಳ ಆಯ್ಕೆಯನ್ನು ನಡೆಸಲಾಗಿದೆ. ಹೊಸ ಹುರುಪಿನೊಂದಿಗೆ ಕೆಲಸ ಮಾಡಲಿ ಎಂಬ ದೃಷ್ಠಿಯಿಂದ ಹೊಸಬರಿಗೆ ಅವಕಾಶ ನೀಡಲಾಗಿದೆ ಎಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಹೇಳಿದ್ದಾರೆ. ಕೆಲವು ಹಿರಿಯ ಸದಸ್ಯರು ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರೂ ಸಂಪೂರ್ಣ ಹೊಸ ಮುಖಗಳಿಗೆ ಆದ್ಯತೆ ಎಂಬ ನಿಲುವನ್ನು ಬಿಜೆಪಿ ತಳೆದಿದೆ.
ಮಂಗಳೂರಿನಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ 2025ನೇ ಸಾಲಿನ ಇಂಡಿಯನ್ ಅಕಾಡೆಮಿ ಆಫ್ ಓರಲ್…
ಕೃಷಿಗಾಗಿ, ಕೃಷಿ ಉಳಿಸುವುದಕ್ಕಾಗಿ ಸುರಂಗ ಕೊರೆದು ನೀರು ಹರಿಸಿದ ವಿಶೇಷ ಸಾಧನೆಯನ್ನು ಮಾಡಿದ್ದಾರೆ…
ದೇಶಾದ್ಯಂತ ಅಳಿವಿನಂಚಿಗೆ ತಲುಪಿರುವ ಗುಬ್ಬಚ್ಚಿ ಸಂಕುಲದ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು…
ಸ್ವಾವಲಂಬನೆಯ ಜೀವನ ಕಟ್ಟಿಕೊಳ್ಳುತ್ತಿರುವ ಅನೇಕ ಮಹಿಳಾ ಉದ್ಯಮಿದಾರರಿಗೆ ಎನ್‍ಆರ್ ಎಲ್‍ಎಮ್ ಯೋಜನೆಯು ಸ್ಪೂರ್ತಿಯ…
ಕೊಡಗು ಜಿಲ್ಲೆಯಲ್ಲಿ ಅಕ್ರಮ ಲಾಟರಿ, ಇತರೆ ರಾಜ್ಯದ ಲಾಟರಿಗಳು, ಮಟ್ಕಾಗೆ ಪೂರ್ಣ ಪ್ರಮಾಣದಲ್ಲಿ…
ಹಾನಿಯಾದ ಮನೆ ಮತ್ತು ಬೆಳೆಗಳಿಗೆ ತ್ವರಿತವಾಗಿ ಪರಿಹಾರ ನೀಡಿ, ಯಾವುದೇ ಪ್ರಕರಣಗಳು ಬಾಕಿ…