ಸುಬ್ರಹ್ಮಣ್ಯ: ಜೇಸಿಐ ಪಂಜ ಪಂಚಶ್ರೀ ಇದರ ಜೇಸಿ ಸಪ್ತಾಹ-2019 ಕಾರ್ಯಕ್ರಮವು ನ.1 ರಿಂದ 23ರ ತನಕ ನಡೆಯಲಿದೆ ಎಂದು ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ ವಾಸುದೇವ ಮೇಲ್ಪಾಡಿ ತಿಳಿಸಿದ್ದಾರೆ.
ಸುಬ್ರಹ್ಮಣ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನ.17ರಂದು ಸಪ್ತಾಹದ ಉದ್ಘಾಟನೆಗೊಳ್ಳಲಿದೆ. ಅದೇ ದಿನ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ರಸ್ತೆ ಬದಿಯ ಕೃಷಿಕ ಶ್ರೇಯಾಂಸ್‍ಕುಮಾರ್ ಶೆಟ್ಟಿಮೂಲೆರವರ ಭತ್ತದ ಗದ್ದೆಯಲ್ಲಿ ಕೆಸರುಗದ್ದೆ ಕ್ರೀಡಾಕೂಟ ನಡೆಯಲಿದೆ. ಪ್ರಾಂತ್ಯ ಇ ವಲಯ ಉಪಾಧ್ಯಕ್ಷ ಜಯೇಶ್ ಬರೆಟ್ಟೋ ಕಾರ್ಯಕ್ರಮ ಉದ್ಘಾಟಿಸುವರು. ದ.ಕ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕ ಸಂಘದ ಅಧ್ಯಕ್ಷ ಶಿವರಾಮ ಯೇನೆಕಲ್ಲು, ಸ್ಥಳದಾನಿ ಶ್ರೇಯಾಂಸ್ ಕುಮಾರ್ ಶೆಟ್ಟಿಮೂಲೆ ಮುಖ್ಯ ಅತಿಥಿಯಾಗಿರುವರು.
ಸಂಜೆ ನಡೆಯುವ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮರ್ಧಾಳ ಸೈಂಟ್ ಮೇರಿಸ್ ಪ್ರೌಡಶಾಲಾ ಅಧ್ಯಾಪಕ ಸುಬ್ರಹ್ಮಣ್ಯ ಗೌಡ ಕೆ.ಜಿ, ಬಹುಮಾನ ವಿತರಣೆಯನ್ನು ಜೇಸಿಐ ವಲಯ ಪೂರ್ವ ವಲಯಾಧಿಕಾರಿ ಗಣೇಶ್ ಕೈಕುರೆ, ದತ್ತುನಿಧಿಯನ್ನು ಪಂಜ ಲಯನ್ಸ್ ಕ್ಲಬ್ ಸುರೇಶ್ ಕುಮಾರ್ ವಿತರಿಸುವರು. ಶಿವಾಜಿ ಯುವಕ ಮಂಡಲ ಅಧ್ಯಕ್ಷ ಆಶಿತ್ ಕಲ್ಲಾಜೆ ಉಪಸ್ಥಿತರಿರುವರು ಎಂದರು.
ನ.18ರಂದು ಸ.ಪಪೂ ಕಾಲೇಜು ಪಂಜ ಇಲ್ಲಿ ಹಾವು ಮತ್ತು ನಾವು ಪ್ರಾತ್ಯಕ್ಷಿತೆ ಮತ್ತು ಮಾಹಿತಿ ಕಾರ್ಯಕ್ರಮ, ನ.19ರಂದು ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಸಂಸ್ಥೆಯಲ್ಲಿ ಪದವಿ ಕಾಲೇಜುಗಳ ಆಯ್ದ ವಿದ್ಯಾರ್ಥಿಗಳಿಗೆ ಪರಿಣಾಮಕಾರಿ ಭಾಷಣ ಕಲೆ ತರಬೇತಿ ಕಾರ್ಯಗಾರ. ನ.20ರಂದು ಕೆ. ಎಸ್ ಗೌಡ ಸಮೂಹ ವಿದ್ಯಾಸಂಸ್ಥೆ ನಿಂತಿಕಲ್ಲು ಇಲ್ಲಿ ಆರೋಗ್ಯಭಾಗ್ಯ ಮಾಹಿತಿ ಕಾರ್ಯಗಾರ ನಡೆಯಲಿದೆ. ನ.21ರಂದು ಹಾಲೆಮಜಲು ವೆಂಕಟೇಶ್ವರ ಸಭಾಭವನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಆದರ್ಶ ಯೂತ್ ಕ್ಲಬ್ ಹಾಲೆಮಜಲು ಸಹಕಾರದಲ್ಲಿ ಗುಟ್ಟು ಗೊತ್ತಾಂಡ್ ತುಳು ಹಾಸ್ಯ ನಾಟಕ ನಡೆಯಲಿದೆ.
ನ.23ರಂದು ಸಮಾರೋಪ ಸಮಾರಂಭ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಲಿದೆ. ಅಂದು ಜೇಸಿಐ ಪೂರ್ವಾಧ್ಯಕ್ಷ ಪುರುಷೋತ್ತಮ ದಂಬೆಕೋಡಿ ಅವರಿಗೆ ಕಮಲಪತ್ರ ಪುರಸ್ಕಾರ ನೀಡಲಾಗುವುದು. ಜೇಸಿಐ ವಲಯ ಪೂರ್ವಾಧ್ಯಕ್ಷ ಚಂದ್ರಹಾಸ ರೈ ಪುರಸ್ಕರಿಸುವರು. ಜಿ.ಪಂ ಮಾಜಿ ಸದಸ್ಯ ಭರತ್ ಮುಂಡೋಡಿ ಅವರು ಹಿರಿಯ ಯಕ್ಷಗಾನ ಕಲಾವಿದ ದಿನೇಶ್ ಅಮ್ಮಣ್ಣಾಯ, ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಉಮಾಕುಮಾರಿ, ಭಜನಾ ಪರಿಷತ್ ಅಧ್ಯಕ್ಷ ಬಾಲಕೃಷ್ಣ ಪುತ್ಯ ಇವರುಗಳನ್ನು ಸನ್ಮಾನಿಸುವರು. ಇದೇ ವೇಳೆ ಅಂತರಾಷ್ಟ್ರೀಯ ಚಿತ್ರಕಲಾ ಪ್ರಶಸ್ತಿ ವಿಜೇತ ವಿಕಾಸ್ ಗೌಡ, ಎಸ್‍ಎಸ್‍ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವೀತಿಯ ಸ್ಥಾನಿ ಕೃಪಾ ಕೆ.ಆರ್, ಅಂತರಾಷ್ಟ್ರೀಯ ಸರ್ಫಿಂಗ್ ಪಟು ಸಿಂಷನಾ ಡಿ ಗೌಡ ಇವರುಗಳನ್ನು ಪುರಸ್ಕರಿಸಲಾಗುತ್ತದೆ ಎಂದರು, ಅಂದು ರಾತ್ರಿ ಯಕ್ಷಗಾನ ವೈಭವ ಮತ್ತು ನಮ್ಮ ಕಲಾವಿದೆರ್ ಬೆದ್ರ ಇವರಿಂದ ಪಾಂಡುನ ಅಲಕ್ಕ ಪೋಂಡು ತುಳು ಹಾಸ್ಯಮಯ ನಾಟಕ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ದೇವಿಪ್ರಸಾದ್ ಚಿಕ್ಮುಳಿ, ನಾಗಮಣಿ ಕೆದಿಲ, ಚಿದಾನಂದ ಕುಳ ಉಪಸ್ಥಿತರಿದ್ದರು.