ಧರ್ಮಸ್ಥಳ: ಮಹಾತ್ಮ ಗಾಂಧೀಜಿಯವರ 150 ನೇ ಜನ್ಮಾದಿನಾಚರಣೆಯ ಪ್ರಯುಕ್ತ ಕಳೆದ ವರ್ಷದಿಂದ ಬೆಳ್ತಂಗಡಿ ತಾಲೂಕನ್ನು ಸ್ವಚ್ಛ ತಾಲೂಕನ್ನಾಗಿ ಪರಿವರ್ತಿಸುವ ಉದ್ದೇಶದಿಂದ ಸ್ವಚ್ಛತಾ ಸೇನಾನಿಗಳು ನಿಯೋಜನೆಗೊಂಡು ಉತ್ತಮ ರೀತಿಯಲ್ಲಿ ಸ್ವಚ್ಛಾ ಕಾರ್ಯಕ್ರಮವನ್ನುಮಾಡುತ್ತಿದ್ದಾರೆ. ನ. 22 ರಿಂದ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಷವ ಕಾರ್ಯಕ್ರಮ ನಡೆಯುವ ಈ ಸುಸಂದಂರ್ಭದಲ್ಲಿ ನವೆಂಬರ್ 22 ತಾರೀಖಿನಂದು ಬೆಳ್ತಂಗಡಿ ತಾಲೂಕಿನಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ನಡೆಯಲಿದೆ. ಇದಕ್ಕಿಂತ ಮುಂಚೆ ಬೆಳ್ತಂಗಡಿ ತಾಲೂಕಿನಾದ್ಯಂತ ಸ್ವಚ್ಛತಾ ಕಾರ್ಯಕ್ರಮ ಜರಗಲಿದೆ.
ಪರಮ ಪೂಜ್ಯಡಾ. ಡಿ. ವಿರೇಂದ್ರ ಹೆಗ್ಗಡೆಯವರ ಮತ್ತು ಮಾತೃಶ್ರೀ ಅಮ್ಮನವರ ಮಾರ್ಗದರ್ಶನದಂತೆ ಸ್ವಚ್ಛತಾ ಕಾರ್ಯಕ್ರಮ ನಿರಂತರವಾಗಿ ನಡೆಯಬೇಕು. ಎಲ್ಲಾ ರಾಜಕೀಯ, ಎಲ್ಲಾ ಧರ್ಮದವರು ಸೇರಿ ಸ್ವಚ್ಛತಾ ಕಾರ್ಯಕ್ರಮ ನಿರಂತರ ಮಾಡಿದಲ್ಲಿ ಮಾತ್ರ ಸ್ವಚ್ಛ ತಾಲೂಕನ್ನಾಗಿ ಪರಿವರ್ತಿಸಬಹುದು ಎಂಬ ಮಾತನ್ನುಅರಿತುಕೊಂಡು ಧರ್ಮಸ್ಥಳ ಗ್ರಾಮ ಪಂಚಾಯತ್ ಕಾರ್ಯಕ್ರಮವನ್ನು 20 ರಂದು ಬುಧವಾರ ಮಾಡುವುದಾಗಿ ನ.15 ರಂದು ನಡೆದ ಗ್ರಾಮ ಪಂಚಾಯತ್ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಈ ಸ್ವಚ್ಛತಾ ಕಾರ್ಯಕ್ರಮ ಧರ್ಮಸ್ಥಳ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸ್ವಚ್ಛತಾ ಸೇನಾನಿಗಳು, ಧರ್ಮಸ್ಥಳ ಕೆಎಸ್ ಆರ್ ಟಿಸಿ , ಶಾಲೆಗಳು, ಕನ್ಯಾಕುಮಾರಿ ಯುವತಿ ಮಂಡಲ, ಧರ್ಮಸ್ಥಳ ದೇವಾಲಯ ಸಿಬ್ಬಂದಿ ವರ್ಗದವರು, ಆಟೋ ಚಾಲಕ ಮಾಲಕರು, ಧರ್ಮಸ್ಥಳದ ಅಂಗಡಿ ಮಾಲಕರು, ಎಲ್ಲಾ ಸಂಘ ಸಂಸ್ಥೆ ಮತ್ತು ಗ್ರಾಮಸ್ಥರು ಸೇರಿಕೊಂಡು ಒಟ್ಟು 400 ಕ್ಕೂ ಮಿಕ್ಕಿ ಮಂದಿ ಸ್ವಯಂ ಸೇವಕರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಹಾಗೂ ಈ ಸಂದರ್ಭ ಪ್ರತೀ ಮನೆಗೂ ಹಾಗೂ ಗ್ರಾಮಸ್ಥರಿಗೂ ಮಾಹಿತಿ ಮಾರ್ಗದರ್ಶನ ಕಾರ್ಯಕ್ರಮ ಮಾಡುವುದಾಗಿ ತಿರ್ಮಾನಿಸಲಾಯಿತು.
ಇತೀತಮ್ಮ ವಿಶ್ವಾಸಿ,
(ಶ್ರೀ ಎ.ಶ್ರೀಹರಿ)
ಪ್ರಾದೇಶಿಕ ನಿರ್ದೇಶಕರು
ಸಮುದಾಯಅಭಿವೈದ್ಧಿ ವಿಭಾಗ(ಲಕ್ಷ್ಮಣ್.ಎಂ)
ನಿರ್ದೇಶಕರು